ದಕ್ಷಿಣ ಆಫ್ರಿಕಾದ ಖ್ಯಾತ ಹಾಸ್ಯ ನಟ ಟ್ರೆವರ್ ನೋಹ್ ಬೆಂಗಳೂರು ಶೋ ರದ್ದು! ಪ್ರೇಕ್ಷಕರಲ್ಲಿ ಕ್ಷಮೆಯಾಚನೆ

ದಕ್ಷಿಣ ಆಫ್ರಿಕಾದ ಜನಪ್ರಿಯ ಹಾಸ್ಯನಟ ಟ್ರೆವರ್ ನೋಹ್ ಅವರ ಕಾರ್ಯಕ್ರಮ ತಾಂತ್ರಿಕ ಕಾರಣದಿಂದ ರದ್ದಾಗಿದ್ದು, ಅನಾನುಕೂಲತೆಗಾಗಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಸೆಪ್ಟೆಂಬರ್ 27 ಮತ್ತು 28 ರಂದು ಬೆಂಗಳೂರಿನ  ಹೆಬ್ಬಾಳ ಮೇಲ್ಸೇತುವೆ ಬಳಿಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ ನೀಡಬೇಕಾಗಿತ್ತು. 
ಟ್ರೆವರ್ ನೋಹ್
ಟ್ರೆವರ್ ನೋಹ್

ಬೆಂಗಳೂರು: ದಕ್ಷಿಣ ಆಫ್ರಿಕಾದ ಜನಪ್ರಿಯ ಹಾಸ್ಯನಟ ಟ್ರೆವರ್ ನೋಹ್ ಅವರ ಕಾರ್ಯಕ್ರಮ ತಾಂತ್ರಿಕ ಕಾರಣದಿಂದ ರದ್ದಾಗಿದ್ದು, ಅನಾನುಕೂಲತೆಗಾಗಿ ಪ್ರೇಕ್ಷಕರಲ್ಲಿ ಕ್ಷಮೆಯಾಚಿಸಿದ್ದಾರೆ. ಕಳೆದ ವಾರ ನವದೆಹಲಿಯಲ್ಲಿ ಮೂರು ಕಾರ್ಯಕ್ರಮಗಳನ್ನು ನೀಡಿದ್ದ  39 ವರ್ಷದ ಹಾಸ್ಯನಟ, ಸೆಪ್ಟೆಂಬರ್ 27 ಮತ್ತು 28 ರಂದು ಬೆಂಗಳೂರಿನ  ಹೆಬ್ಬಾಳ ಮೇಲ್ಸೇತುವೆ ಬಳಿಯ ಮ್ಯಾನ್ಫೋ ಕನ್ವೆನ್ಷನ್ ಸೆಂಟರ್‌ನಲ್ಲಿ ಕಾರ್ಯಕ್ರಮ ನೀಡಬೇಕಾಗಿತ್ತು. 

ಆದರೆ, ಸರಿಯಾಗಿ ನೋಹ ಅವರ ಧ್ವನಿ ಪ್ರೇಕ್ಷಕರಿಗೆ ಕೇಳಿಸುತ್ತಿರಲಿಲ್ಲ. ಹೀಗಾಗಿ ಪ್ರೇಕ್ಷಕರು ನಿಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ನೋಹ್ ಮತ್ತು ಅವರ ತಂಡವು ಧ್ವನಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ರಾತ್ರಿ 8.30 ಆದರೂ ಸರಿಹೋಗದೆ ಇದ್ದಾಗ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸಂಘಟಕರು ಘೋಷಿಸಿದರು.

ನಂತರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ನೋಹ್, “ಪ್ರಿಯ ಬೆಂಗಳೂರಿಗರೇ, ನಿಮ್ಮ ಅದ್ಭುತ ನಗರದಲ್ಲಿ ಪ್ರದರ್ಶನ ನೀಡಲು ನಾನು ತುಂಬಾ ಎದುರು ನೋಡುತ್ತಿದ್ದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ನಾವು ಎರಡೂ ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು. ಸಕಲ ಪ್ರಯತ್ನದ ಬಳಿಕವೂ ತಾಂತ್ರಿಕ ಸಮಸ್ಯೆ ನಿವಾರಣೆಯಾಗಲಿಲ್ಲ. ಕೊನೆಗೆ ಯಾವುದೇ ಮಾರ್ಗವಿಲ್ಲದೆ ರದ್ದುಗೊಳಿಸಬೇಕಾಯಿತು. ಎಲ್ಲಾ ಟಿಕೆಟ್ ಹಣವನ್ನು ಪೂರ್ಣ ಮರುಪಾವತಿ ಮಾಡುತ್ತೇವೆ. ಇದು ಹಿಂದೆಂದೂ ಸಂಭವಿಸಿಲ್ಲ, ಕ್ಷಮಿಸಿ” ಎಂದು ಫೋಸ್ಟ್ ಮಾಡಿದ್ದಾರೆ. 

2 ಸಾವಿರ ರೂ.ಗೆ ಟಿಕೆಟ್ ಮಾರಾಟವಾಗಿದ್ದವು. ಈ ಟಿಕೆಟ್ ನ ಸಂಪೂರ್ಣ ಮೊತ್ತವನ್ನು 8-10 ದಿನಗಳಲ್ಲಿ ಮರುಪಾವತಿಸುವುದಾಗಿ ಕಾರ್ಯಕ್ರಮ ಆಯೋಜಕರು ಮತ್ತು BookMyShow ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com