ಶಾಸಕರಿಗಾಗಿ ಕಾನ್ಸ್ಟಿಟ್ಯೂಶನ್ ಕ್ಲಬ್: 'ಬಾಲಬ್ರೂಯಿ' ಬಿಟ್ಟು ಬೇರೆ ಕಡೆ ನಿರ್ಮಿಸಲು ಮರುಚಿಂತನೆ!

ಐತಿಹಾಸಿಕ ಬಾಲಬ್ರೂಯಿ ಗೆಸ್ಟ್‌ಹೌಸ್‌ನಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್  ಸ್ಥಾಪಿಸುವ ಯೋಜನೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಬಾಲಬ್ರೂಯಿ ವಿರುದ್ಧ ಶಾಸಕರು ಮತ್ತು ನಾಗರಿಕ ಸಮಾಜದ ನಡುವಿನ ಕದನವು ಈ ಮೂಲಕ ಕೊನೆಗೊಳ್ಳುವ ಸಾಧ್ಯತೆಯಿದೆ.
ಬಾಲುಬ್ರೂಯಿ ಅತಿಥಿ ಗೃಹ
ಬಾಲುಬ್ರೂಯಿ ಅತಿಥಿ ಗೃಹ
Updated on

ಬೆಂಗಳೂರು: ಐತಿಹಾಸಿಕ ಬಾಲಬ್ರೂಯಿ ಗೆಸ್ಟ್‌ಹೌಸ್‌ನಲ್ಲಿ ಕಾನ್ಸ್ಟಿಟ್ಯೂಷನ್ ಕ್ಲಬ್  ಸ್ಥಾಪಿಸುವ ಯೋಜನೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಬಾಲಬ್ರೂಯಿ ವಿರುದ್ಧ ಶಾಸಕರು ಮತ್ತು ನಾಗರಿಕ ಸಮಾಜದ ನಡುವಿನ ಕದನವು ಈ ಮೂಲಕ ಕೊನೆಗೊಳ್ಳುವ ಸಾಧ್ಯತೆಯಿದೆ.

ಶಾಸಕರು ಬಾಲುಬ್ರೂಯಿಯಲ್ಲೇ ಕ್ಲಬ್ ನಿರ್ಮಾಣಕ್ಕೆ  ಒತ್ತಾಯಿಸಬಹುದಾದರೂ, ಸರ್ಕಾರ ಶೀಘ್ರದಲ್ಲೇ ಸ್ಥಳ ಬದಲಾವಣೆ ಘೋಷಿಸುವ ಸಾಧ್ಯತೆಯಿದೆ. ಬಾಲಬ್ರೂಯಿಯಲ್ಲಿ ಕ್ಲಬ್ ಸ್ಥಾಪಿಸುವ ಯೋಜನೆಯನ್ನು ನಾಗರಿಕ ಸಮಾಜದ ಗುಂಪುಗಳು ವಿರೋಧಿಸಿದ್ದನ್ನು ಸ್ಮರಿಸಬಹುದಾಗಿದೆ.

ಶಾಸಕರಿರಿಗೆ ಇಷ್ಟೊಂದು ಬೆಲೆಬಾಳುವ ಪಾರಂಪರಿಕ ಆಸ್ತಿಯನ್ನು ನೀಡುವುದು ಹೇಗೆ ಎಂದು ಪ್ರಶ್ನಿಸಿ ಹೋರಾಟಗಾರ ವಕೀಲರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ ನಂತರ ಈ ಸಮಸ್ಯೆ ಉದ್ಭವಿಸಿದೆ.

ಇದು ಪಾರಂಪರಿಕ ತಾಣ ಎಂದು ಈ ಹಿಂದೆ ನಾಗರಿಕ ಸಮಾಜ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ರವೀಂದ್ರನಾಥ ಟ್ಯಾಗೋರ್, ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರಂತಹ ರಾಷ್ಟ್ರನಾಯಕರು ತಂಗಿದ್ದ ಪವಿತ್ರ ಸ್ಥಳದಲ್ಲಿ ಶಾಸಕರು ಕಾರ್ಡ್ ಆಡಲು ಅಥವಾ ಕುಡಿಯಲು ಹೇಗೆ ಅನುಮತಿಸುತ್ತಾರೆ ಎಂದು  ಪ್ರಶ್ನಿಸಿದ್ದಾರೆ. ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಪಕ್ಕದಲ್ಲಿರುವ ಮಿನಿಸ್ಟರ್ಸ್ ಕ್ವಾರ್ಟರ್ಸ್ ಗಳನ್ನು ಒತ್ತುವರಿ ಮಾಡಿಕೊಳ್ಳದೆ ಕ್ಲಬ್ ಆಗಿ ಬಳಸಿಕೊಳ್ಳಬಹುದು ಎಂದು ನಾಗರಿಕರು ಸಲಹೆ ನೀಡಿದ್ದರು.

ಸರ್ಕಾರವು ತನ್ನ ಯೋಜನೆಯನ್ನು ಗಂಭೀರವಾಗಿ ಪುನರ್ವಿಮರ್ಶಿಸುತ್ತಿದೆ ಮತ್ತು ವಿಶಾಲವಾದ ಸೌಲಭ್ಯವನ್ನು ನಿರ್ಮಿಸಬಹುದಾದ ಭೂಮಿಯನ್ನು ಪರಿಗಣಿಸುತ್ತಿದೆ. ನಗರದ ಹೃದಯ ಭಾಗದಲ್ಲಿ ಕೆಲವು ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಚಿತ್ರಕಲಾ ಪರಿಷತ್ತಿನತ್ತ ಗಮನಹರಿಸಬಹುದೆಂದು ಕೆಲವರು ಸಲಹೆ ನೀಡಿದ್ದಾರೆ.

ಸಂಪೂರ್ಣ ಸೌಲಭ್ಯವನ್ನು ಮೈಸೂರು ರಸ್ತೆಯಿಂದ ದೂರದಲ್ಲಿರುವ ಕೆಂಗೇರಿಯ ದೊಡ್ಡ ಕ್ಯಾಂಪಸ್‌ಗೆ ಸ್ಥಳಾಂತರಿಸಲು ಪ್ರಯತ್ನಿಸಲಾಗಿದೆ, ಇದು ಉತ್ತಮ ಮೆಟ್ರೋ ಸಂಪರ್ಕವನ್ನು ಹೊಂದಿದೆ ಎಂದು  ಅಭಿಪ್ರಾಯ ಪಡಲಾಗಿದೆ.

ಸಚಿವ ಎಚ್‌ಕೆ ಪಾಟೀಲ್ ಮತ್ತು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಬಾಲಬ್ರೂಯಿಯಲ್ಲಿ ಕ್ಲಬ್ ಸ್ಥಾಪಿಸುವ ಆಲೋಚನೆಯನ್ನು ವಿರೋಧಿಸಿದರು, ಇದು ರಾಷ್ಟ್ರನಾಯಕರು ತಂಗಿರುವ ಸ್ಥಳವಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನು ಗೌರವಿಸಬೇಕು ಮತ್ತು ಕ್ಲಬ್‌ನಂತಹ  ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಸುಮಾರು 800 ಕೋಟಿ ಮೌಲ್ಯದ ಸುಮಾರು ಮೂರು ಎಕರೆ ಭೂಮಿಯನ್ನು ಹೊಂದಿರುವ ಬಾಲಬ್ರೂಯಿಯಲ್ಲಿ ಕ್ಲಬ್ ನಿರ್ವಹಿಸಲು ಶಾಸಕರು ಮತ್ತು ಎಂಎಲ್‌ಸಿಗಳು ಸಂಘವನ್ನು ರಚಿಸಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಾಂಧಿ, ನೆಹರು ಮತ್ತು ಟ್ಯಾಗೋರ್ ಅವರಲ್ಲದೆ, ಕಳೆದ 100-ಕ್ಕೂ ಹೆಚ್ಚು ವರ್ಷಗಳಲ್ಲಿ ಅನೇಕ ವಿವಿಐಪಿಗಳು ಇಲ್ಲಿ ತಂಗಿದ್ದರು. ಇದು ಲೆಜೆಂಡರಿ ಸಿಎಂ ದೇವರಾಜ್ ಅರಸ್ ಅವರ ಕೊನೆಯ ನಿವಾಸವಾಗಿತ್ತು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com