ಬಾಲಬ್ರೂಯಿ ಗೆಸ್ಟ್ ಹೌಸ್ ಅನ್ನು ಕಾನ್ಸ್ಟಿಟ್ಯೂಷನ್ ಕ್ಲಬ್ ಮಾಡಲು ಹೈಕೋರ್ಟ್ ಗ್ರೀನ್ ಸಿಗ್ನಲ್

ಬಾಲಬ್ರೂಯಿ ಗೆಸ್ಟ್​ಹೌಸ್​ ನ್ನು ಶಾಸಕರಿಗೆ ಕಾನ್ಸ್ಟಿಟ್ಯೂಷನ್ ಕ್ಲಬ್​ ನ್ನಾಗಿ ಪರಿವರ್ತಿಸಲು ಹೈಕೋರ್ಟ್ ಗ್ರೀನ್​ಸಿಗ್ನಲ್ ಕೊಟ್ಟಿದೆ.​ ಬಾಲಬ್ರೂಯಿ ಅತಿಥಿ ಗೃಹ ಕೆಡವಿ ಕ್ಲಬ್‌ ನಿರ್ಮಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು.
ಬಾಲಬ್ರೂಯಿ ಗೆಸ್ಟ್ ಹೌಸ್
ಬಾಲಬ್ರೂಯಿ ಗೆಸ್ಟ್ ಹೌಸ್

ಬೆಂಗಳೂರು: ಬಾಲಬ್ರೂಯಿ ಗೆಸ್ಟ್​ಹೌಸ್​ ನ್ನು ಶಾಸಕರಿಗೆ ಕಾನ್ಸ್ಟಿಟ್ಯೂಷನ್ ಕ್ಲಬ್​ ನ್ನಾಗಿ ಪರಿವರ್ತಿಸಲು ಹೈಕೋರ್ಟ್ ಗ್ರೀನ್​ಸಿಗ್ನಲ್ ಕೊಟ್ಟಿದೆ.​ ಬಾಲಬ್ರೂಯಿ ಅತಿಥಿ ಗೃಹ ಕೆಡವಿ ಕ್ಲಬ್‌ ನಿರ್ಮಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಇದಕ್ಕೆ ಆಕ್ಷೇಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಹಿಂದೆ ಕರ್ನಾಟಕ ಹೈಕೋರ್ಟ್ ಯಥಾಸ್ಥಿತಿ ಕಾಪಾಡಿಕೊಳ್ಳಲು ಮಧ್ಯಂತರ ಆದೇಶ ನೀಡಿತ್ತು. 

ಈಗ ಬಾಲಬ್ರೂಯಿ ಗೆಸ್ಟ್​ಹೌಸ್​ ನ್ನು  ಕಾನ್ಸ್ಟಿಟ್ಯೂಷನ್ ಕ್ಲಬ್​ ನ್ನಾಗಿ ಪರಿವರ್ತಿಸಲು  ಹೈಕೋರ್ಟ್ ಒಪ್ಪಿಗೆ ನೀಡಿದೆ. ಬಾಲಬ್ರೂಯಿ ಆವರಣದಲ್ಲಿ ಮರಗಳನ್ನು ಕಡಿಯಲಾಗುವುದಿಲ್ಲ. ಕಟ್ಟಡಕ್ಕೆ ಧಕ್ಕೆಯಾಗುವ ಕಾಮಗಾರಿ ನಡೆಸಲಾಗುವುದಿಲ್ಲ. ಗೆಸ್ಟ್​ಹೌಸ್ ನಿರ್ವಹಣೆಗೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಗೆಸ್ಟ್​ಹೌಸ್ ಆವರಣದ 159 ಮರಗಳನ್ನು ಕಡಿಯುವುದಿಲ್ಲ. ಗೆಸ್ಟ್​ಹೌಸ್ ನ್ನು ಕಾನ್ಸ್ಟಿಟ್ಯೂಷನ್ ಕ್ಲಬ್ ಆಗಿ ಬಳಸಲಾಗುವುದು ಎಂದು ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ತಿಳಿಸಿದ್ದಾರೆ. 

ಸರ್ಕಾರದ ಹೇಳಿಕೆ ದಾಖಲಿಸಿಕೊಂಡು ಕಾನ್ಸ್ಟಿಟ್ಯೂಷನ್ ಕ್ಲಬ್​ಗೆ ಕೋರ್ಟ್​ ಅನುಮತಿ ನೀಡಿದೆ. ಕಾನ್ಸ್ಟಿಟ್ಯೂಷನ್ ಕ್ಲಬ್​ನಲ್ಲಿ ಉತ್ತಮ ಗ್ರಂಥಾಲಯ, ಒಳ್ಳೆಯ ಗುಣಮಟ್ಟದ ಚಾ-ಕಾಫಿ ಸಿಗುವಂತಾಗಲಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಿಜೆ ಪ್ರಸನ್ನ ಬಿ.ವರಾಳೆ ಹೇಳಿದರು. 

ಪಾರಂಪರಿಕ ಮೌಲ್ಯ ಹೊಂದಿರುವ ಬಾಲಬ್ರೂಯಿ ಕಟ್ಟಡದಲ್ಲಿ ಕಾನ್​ಸ್ಟಿಟ್ಯೂಷನ್ ಕ್ಲಬ್ ನಿರ್ಮಿಸುವ ಸರ್ಕಾರದ ಪ್ರಸ್ತಾವಕ್ಕೆ ಈ ಹಿಂದೆ ಪರಿಸರವಾದಿಗಳು ಮತ್ತು ನಗರದ ಇತಿಹಾಸ ತಜ್ಞರಿಂದ ವಿರೋಧ ವ್ಯಕ್ತವಾಗಿತ್ತು. 

ಬಾಲಬ್ರೂಯಿ ಗೆಸ್ಟ್ ಹೌಸ್ ಬೆಂಗಳೂರಿನ ಹೃದಯ ಭಾಗದಲ್ಲಿದ್ದು ಕೆಲವು ಎಕರೆ ಪ್ರದೇಶ ವಿಸ್ತೀರ್ಣವನ್ನು ಹೊಂದಿದ್ದು 170 ವರ್ಷಗಳಷ್ಟು ಹಳೆಯದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com