ದಕ್ಷಿಣ ಕನ್ನಡದ ಮೂಡುಬಿದಿರೆಯಲ್ಲಿ ವೃದ್ಧೆ ರೋಗಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪುರುಷ ನರ್ಸ್ ಬಂಧನ
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದಲ್ಲಿ ವಯೋವೃದ್ಧೆ ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಪುರುಷ ಹೋಮ್ ನರ್ಸ್‌ನನ್ನು ಬಂಧಿಸಿದ್ದಾರೆ.
Published: 01st April 2023 12:13 PM | Last Updated: 01st April 2023 12:13 PM | A+A A-

ಸಾಂದರ್ಭಿಕ ಚಿತ್ರ
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದಲ್ಲಿ ವಯೋವೃದ್ಧೆ ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪೊಲೀಸರು ಪುರುಷ ಹೋಮ್ ನರ್ಸ್‌ನನ್ನು ಬಂಧಿಸಿದ್ದಾರೆ.
ಬಂಧಿತ ಪುರುಷ ನರ್ಸ್ ಗದಗ ಮೂಲದ 19 ವರ್ಷದ ಶಿವಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಯನ್ನು ಕೊಡಂಗಲ್ಲು ಬಳಿಯ ಹುಡ್ಕೋ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಅನಾರೋಗ್ಯದ ವೃದ್ಧೆಯನ್ನು ನೋಡಿಕೊಳ್ಳಲು ನೇಮಿಸಲಾಗಿತ್ತು.
ಆದರೆ ವೃದ್ಧೆ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು ಮತ್ತು ಖಿನ್ನತೆಗೆ ಒಳಗಾಗಿದ್ದರು. ಮನೆಯವರಿಗೆ ಸಂಶಯ ಬಂದು ಆರೋಪಿ ಪುರುಷ ನರ್ಸ್‌ಗೆ ಗೊತ್ತಾಗದಂತೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದರು.
ನರ್ಸ್ ವೃದ್ಧೆಯನ್ನು ಅಸ್ವಾಭಾವಿಕ ಲೈಂಗಿಕತೆಗೆ ಬಲವಂತ ಮಾಡಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂತು. ಆರೋಪಿಯು ತನ್ನ ಬೇಡಿಕೆಗಳನ್ನು ಒಪ್ಪಿಕೊಳ್ಳಲು ರೋಗಿಯನ್ನು ಥಳಿಸುತ್ತಿದ್ದುದು ಸಹ ಕಂಡುಬಂತು.
ಈ ಸಂಬಂಧ ಮೂಡುಬಿದಿರೆ ಪೊಲೀಸರಿಗೆ ಕುಟುಂಬದವರು ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.