ಹಾಸನ ಹೆಚ್‌ಡಿಸಿಸಿ ಬ್ಯಾಂಕ್ ಮೇಲೆ ಐಟಿ ದಾಳಿ ದಾಳಿ ಬೆನ್ನಲ್ಲೇ ದಾವಣಗೆರೆಯ ಶಿವ ಸಹಕಾರಿ ಬ್ಯಾಂಕ್ ನಲ್ಲಿ ಐಟಿ ಅಧಿಕಾರಿಗಳಿಂದ ತಪಾಸಣೆ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಸನದ ಹೆಚ್ ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ ಬೆನ್ನಲ್ಲೇ ದಾವಣಗೆರೆ ನಗರದ ಚಾಮರಾಜಪೇಟೆ ಸರ್ಕಲ್ ನಲ್ಲಿರುವ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಮೇಲೆ ಹುಬ್ಬಳ್ಳಿ ಮೂಲದ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
Published: 02nd April 2023 08:38 AM | Last Updated: 02nd April 2023 08:38 AM | A+A A-

ಶಿವ ಸಹಕಾರಿ ಬ್ಯಾಂಕ್
ದಾವಣಗೆರೆ : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಸನದ ಹೆಚ್ ಡಿಸಿಸಿ ಬ್ಯಾಂಕ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ ಬೆನ್ನಲ್ಲೇ ದಾವಣಗೆರೆ ನಗರದ ಚಾಮರಾಜಪೇಟೆ ಸರ್ಕಲ್ ನಲ್ಲಿರುವ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕ್ ಮೇಲೆ ಹುಬ್ಬಳ್ಳಿ ಮೂಲದ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಚುನಾವಣೆ ಹೊತ್ತಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿರವಾಗ ಅಕ್ರಮವಾಗಿ ಹಣ ಸಾಗಣೆ, ಮತದಾರರಿಗೆ ಉಚಿತ ಉಡುಗೊರೆಗಳ ಆಮಿಷವೊಡ್ಡುವುದರ ಮೇಲೆ ಅಧಿಕಾರಿಗಳು, ಪೊಲೀಸರು ಹದ್ದಿನ ಕಣ್ಣಿಟ್ಟಿರುವ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಮೇಲೆ ದಾಳಿ ನಡೆದಿರುವುದು ವಿಶೇಷ ಮಹತ್ವ ಪಡೆದಿದೆ.
ಈ ಬ್ಯಾಂಕ್ ಪ್ರತಿಷ್ಠಿತ ಲಿಂಗಾಯತ ಸಮಾಜಕ್ಕೆ ಸೇರಿದ್ದಾಗಿದ್ದು ಎಂದು ಹೇಳಲಾಗುತ್ತಿದೆ. ಒಟ್ಟು 12 ಜನ ಐಟಿ ಅಧಿಕಾರಿಗಳು ಧಾವಿಸಿದ್ದು, ಬ್ಯಾಂಕ್ ಲಾಕರ್‌ಗಳನ್ನು ಚೆಕ್ ಮಾಡಿದ್ದಾರೆ. ಮೊನ್ನೆ ಶುಕ್ರವಾರ ಹಾಗೂ ನಿನ್ನೆ ಶನಿವಾರ ರಾತ್ರಿ ಹತ್ತು ಗಂಟೆಯವರೆಗೆ ಬ್ಯಾಂಕ್ ನಲ್ಲಿ ತಪಾಸಣೆ ಮಾಡಿದ ಅಧಿಕಾರಿಗಳು ಎಲ್ಲಾ ರೀತಿಯ ದಾಖಲೆಯನ್ನು ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಶನಿವಾರ ರಾತ್ರಿ 10:45 ಕ್ಕೆ ದಾಖಲೆಗಳ ಪರೀಶೀಲನೆ ಮುಗಿಸಿ 4 ಇನ್ನೊವಾ ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಬ್ಯಾಂಕ್ ನಿಂದ ತೆರಳಿದರು. ಬ್ಯಾಂಕ್ ನಿಂದ ಹೋಗುವಾಗ ಮೂರು ಬ್ರೀಫ್ ಕೇಸ್ ಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ಏನಿತ್ತು ಎಂಬುದು ಇದುವರೆಗೆ ಮಾಹಿತಿ ಸಿಕ್ಕಿಲ್ಲ. ಐಟಿ ಇಲಾಖೆ ಅಥವಾ ಬ್ಯಾಂಕ್ ನ ಅಡಳಿತ ಮಂಡಳಿ ಸ್ಪಷ್ಟನೆ ನೀಡಿದ ನಂತರ ನಿಖರ ಮಾಹಿತಿ ತಿಳಿದುಬರಲಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕಿತ್ತೂರು ರಾಣಿ ಚೆನ್ನಮ್ಮ ನಗರ ಸೌಹಾರ್ದ ಕ್ರೆಡಿಟ್ ಮೇಲೆಯೂ ಇತ್ತೀಚೆಗೆ ಐಟಿ ಇಲಾಖೆ ಅಧಿಕಾರಿಗಳಿಂದ ದಾಳಿ ನಡೆದಿತ್ತು.