ಬೆಂಗಳೂರು: ಸಿಐಟಿಬಿ ಅಧ್ಯಕ್ಷ ದಿವಂಗತ 'ಪದ್ಮನಾಭ' ಕುಟುಂಬಸ್ಥರಿಗೆ ಕಾರು ಚಾಲಕನಿಂದ 20 ಕೋಟಿ ರು. ಆಸ್ತಿ ವಂಚನೆ

ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಅಧ್ಯಕ್ಷ ಸಿಜೆ ಪದ್ಮನಾಭ ಅವರ ವಂಶಸ್ಥರಿಗೆ ಇಬ್ಬರು ವ್ಯಕ್ತಿಗಳು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಅಧ್ಯಕ್ಷ ಸಿಜೆ ಪದ್ಮನಾಭ ಅವರ ವಂಶಸ್ಥರಿಗೆ ಇಬ್ಬರು ವ್ಯಕ್ತಿಗಳು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪದ್ಮನಾಭ ಅವರ ಕುಟುಂಬಸ್ಥರಿಗೆ ಸೇರಿದೆ ಆಸ್ತಿಯ ಖಾತೆಯನ್ನು ಇಬ್ಬರು ವಂಚಕರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ವಂಚನೆಯಾಗಿದ್ದು ಪದ್ಮನಾಭ ಅವರ ಕುಟುಂಬಸ್ಥರು ಕಂಗಲಾಗಿದ್ದಾರೆ.

ಲಾಲ್‌ಬಾಗ್‌ನ ಮೊದಲ ಭಾರತೀಯ ಸೂಪರಿಂಟೆಂಡೆಂಟ್ ಮತ್ತು ಲಂಡನ್‌ನ ಕ್ಯೂ ಗಾರ್ಡನ್ಸ್‌ನಲ್ಲಿ ತರಬೇತಿ ಪಡೆದ ಕರ್ನಾಟಕ ತೋಟಗಾರಿಕೆಯ ಮೊದಲ ಭಾರತೀಯ ನಿರ್ದೇಶಕರಾಗಿದ್ದ ರಾವ್ ಬಹದ್ದೂರ್ ಎಚ್‌ಸಿ ಜವರಯ್ಯ ಅವರ ಮಗ ಪದ್ಮನಾಭ. ಜವರಯ್ಯ ವೃತ್ತಕ್ಕೆ ಅವರ ಹೆಸರು ಇಡಲಾಗಿದೆ. ಪದ್ಮನಾಭ ಅವರ ಮರಣದ ಎರಡು ದಶಕಗಳ ನಂತರ, ಅವರ ಚಾಲಕನಾಗಿದ್ದ ಫ್ರಾನ್ಸಿಸ್ ಪೌನ್ನಿ  ಕನಕ ಪದ್ಮನಾಭ (84) ಅವರ ಸಹಾಯವನ್ನು ಕೋರಿದ್ದ. ಜೊತೆಗೆ ಅವರ ಸಹಿಯನ್ನು ದೃಹಾಕಿಸಿಕೊಂಡಿದ್ದ. ಆ ಸಹಿಗಳು ಸೇಲ್ ಡೀಡ್‌ಗಳು ಮತ್ತು ವಿಲ್‌ನಲ್ಲಿವೆ.

ಈಗಿನ ಮಾರುಕಟ್ಟೆ ದರದಲ್ಲಿ 20 ಕೋಟಿ ರೂ.ಗೂ ಹೆಚ್ಚು ಮೌಲ್ಯದ 8,100 ಚದರ ಅಡಿ ವಿಸ್ತೀರ್ಣ ಹೊಂದಿರುವ ಜಯನಗರ ಮೊದಲ ಬ್ಲಾಕ್‌ನಲ್ಲಿರುವ ತನ್ನ ಸಂಪೂರ್ಣ ಆಸ್ತಿಗೆ  ಅರಿವಿಲ್ಲದೆ  ಕನಕ ಪದ್ಮನಾಭ ಸಹಿ ಹಾಕಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಫ್ರಾನ್ಸಿಸ್ ಮತ್ತು ಆತನ ಸಹಚರ ಕೃಷ್ಣ ಮುರುಗನ್ ಈಗಾಗಲೇ ಶ್ರೀಮಂತ ಜಮೀನುದಾರರಾಗಿದ್ದ ಕನಕಾ ಅವರಿಗೆ ಪುರಾತನ ವಜ್ರದ ನೆಕ್ಲೇಸ್, ಮಾಣಿಕ್ಯ ನೆಕ್ಲೆಸ್ ಮತ್ತು 33 ಆಯ್ದ ಪುರಾತನ ಚಿನ್ನ ಮತ್ತು ಬೆಳ್ಳಿಯ ಬೆಲೆಬಾಳುವ ವಸ್ತುಗಳು ಮತ್ತು 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ವಂಚಿಸಿದ್ದಾರೆ ಎಂದು ಹೇಳಲಾಗಿದೆ.

ಆಕೆಯ ಖಾತೆಯಿಂದ ಹಣವನ್ನು ವರ್ಗಾಯಿಸಿಕೊಂಡಿರುವುದಾಗಿ 2012 ರಲ್ಲಿ ಸಲ್ಲಿಸಲಾದ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಪಟ್ಟಿ ಸಲ್ಲಿಕೆಯಾದ ನಂತರವೂ ವಂಚಕರಿಗೆ ಖಾತೆ ವರ್ಗಾವಣೆ ಮಾಡಬಾರದೆಂಬ ಬಿಬಿಎಂಪಿ ನ್ಯಾಯಾಲಯದ ಆದೇಶ ಮತ್ತು ಕುಟುಂಬ ಸದಸ್ಯರ ಮನವಿಯ ನಡುವೆಯೂ ವರ್ಗಾವಣೆ ಮಾಡಲಾಗಿದೆ.

ಎರಡು ಹಂತಗಳಲ್ಲಿ ಸಂಪೂರ್ಣ ಆಸ್ತಿ ಖಾತಾಗಳನ್ನು ಫ್ರಾನ್ಸಿಸ್ ಮತ್ತು ಕೃಷ್ಣ ಅವರಿಗೆ ವರ್ಗಾಯಿಸಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ತಾವು ವಂಚನೆಗೆ ಒಳಗಾಗಿದ್ದು, ಒಂದು ದಶಕದಿಂದಲೂ ನೋವು ಅನುಭವಿಸುತ್ತಿದ್ದೇವೆ, ನಮಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಲವಾದ ನಂಬಿಕೆಯಿದೆ, ಮುಂದಿನ ಪೀಳಿಗೆ ಈ ವಂಚನೆ ಪರಿಣಾಮ ಅನುಭವಿಸಬಾರದು ಎಂಬ ಹಿನ್ನೆಲೆಯಲ್ಲಿ ಹೋರೋಟ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಪದ್ಮನಾಭ ಅವರ ಪುತ್ರ ಹರೀಶ್ ಹೇಳಿದ್ದಾರೆ.

ಸ್ವಲ್ಪ ಸಮಯ ಜೈಲು ಶಿಕ್ಷೆ ಅನುಭವಿಸಿದ ವಂಚಕರು ಇನ್ನೂ ತಲೆಮರೆಸಿಕೊಂಡಿದ್ದು, ನಮ್ಮ ಕುಟುಂಬದ ಹೆಸರಲ್ಲಿ ಸಾಲ ಮಾಡಿದ್ದಾರೆ. ಬ್ಯಾಂಕುಗಳು ನಮ್ಮ ಬಳಿ ಬಂದು ತೊಂದರೆ ಕೊಡಬಹುದು ಎಂಬ ಆತಂಕದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com