ಕಳೆದ 100 ದಿನಗಳಲ್ಲಿ ನಾಲ್ಕನೇ ಬಾರಿ ಮೀನುಗಳ ಸಾವು: ಬಿಡಬ್ಲ್ಯುಎಸ್ ಎಸ್ ಬಿ ಅಧಿಕಾರಿಗಳ ನಿರ್ಲಕ್ಷತನ ಎಂದ ತಜ್ಞರು
ಕಳೆದ 4 ತಿಂಗಳಲ್ಲಿ ಬೆಂಗಳೂರಿನಲ್ಲಿ ಕೆರೆಯಲ್ಲಿ ಮೀನುಗಳ ಸಾವಿನ ನಾಲ್ಕನೇ ಪ್ರಕರಣ ವರದಿಯಾಗಿದೆ. ಕೆರೆ ನೀರಿಗೆ ಆಮ್ಲಜನಕ ಸವಕಳಿ ಸೇರಿ ಮೀನುಗಳು ಸಾಯುತ್ತಿವೆ. ಇನ್ನು ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವಲ್ಲಿ ಬಿಡಬ್ಲ್ಯುಎಸ್ ಎಸ್ ಬಿ ವಿಫಲವಾಗಿದೆ ಎಂದು ಪರಿಸರ ಮತ್ತು ಜಲಸಂರಕ್ಷಣೆ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
Published: 11th April 2023 02:02 PM | Last Updated: 11th April 2023 05:28 PM | A+A A-

ಬಿಡಬ್ಲ್ಯುಎಸ್ ಎಸ್ ಬಿ ಕೊಳಚೆನೀರಿನ ಘಟಕ
ಬೆಂಗಳೂರು: ಕಳೆದ 4 ತಿಂಗಳಲ್ಲಿ ಬೆಂಗಳೂರಿನಲ್ಲಿ ಕೆರೆಯಲ್ಲಿ ಮೀನುಗಳ ಸಾವಿನ ನಾಲ್ಕನೇ ಪ್ರಕರಣ ವರದಿಯಾಗಿದೆ. ಕೆರೆ ನೀರಿಗೆ ಆಮ್ಲಜನಕ ಸವಕಳಿ ಸೇರಿ ಮೀನುಗಳು ಸಾಯುತ್ತಿವೆ. ಇನ್ನು ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಯುವಲ್ಲಿ ಬಿಡಬ್ಲ್ಯುಎಸ್ ಎಸ್ ಬಿ ವಿಫಲವಾಗಿದೆ ಎಂದು ಪರಿಸರ ಮತ್ತು ಜಲಸಂರಕ್ಷಣೆ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಕೆರೆ ಸಂರಕ್ಷಣೆ ಹೋರಾಟಗಾರ ಮತ್ತು ಆಕ್ಷನ್ ಏಡ್ ಪ್ರಾಜೆಕ್ಟ್ ನ ಹಿರಿಯ ರಾಘವೇಂದ್ರ ಬಿ ಪಚ್ಚಪುರ್, ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಹೂಡಿಯ ಸೀತಾರಾಮ್ ಪಾಳ್ಯ ಕೆರೆಯನ್ನು ಇ ವಿಭಾಗವಾಗಿ ವರ್ಗೀಕರಿಸಿತ್ತು. ಆದರೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿದ್ದರೆ ಮೀನುಗಳು ಸಾಯುವುದನ್ನು ತಡೆಯಬಹುದಾಗಿತ್ತು. ಇ ವಿಭಾಗವೆಂದರೆ ಆ ನೀರು ಕೈಗಾರಿಕೆಯ ಬಳಕೆಗೆ ಮಾತ್ರ ಬಳಸಲು ಸಾಧ್ಯವಿರುತ್ತದೆ. ವನ್ಯಜೀವಿಗಳು ಮತ್ತು ಮೀನುಗಾರಿಕೆಗೆ ಬಳಸಲು ಯೋಗ್ಯವಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳುತ್ತದೆ.
ಬಿಡಬ್ಲ್ಯುಎಸ್ ಎಸ್ ಬಿ ಅಥವಾ ಬಿಬಿಎಂಪಿ ಅಧಿಕಾರಿಗಳು ಕಚ್ಚಾ ಕೊಳಚೆನೀರು ಕೆರೆ ಸೇರುವುದನ್ನು ತಡೆದಿದ್ದರೆ ಸಣ್ಣ ಮೀನುಗಳು ಸಾಮೂಹಿಕವಾಗಿ ಸಾಯುವುದನ್ನು ತಡೆಯಬಹುದಾಗಿತ್ತು. ಕಳೆದ 100 ದಿನಗಳಲ್ಲಿ ಈ ರೀತಿ ಮೀನುಗಳು ಸಾಯುತ್ತಿರುವುದು ಇದು ನಾಲ್ಕನೇ ಬಾರಿ ಎಂದರು.
ಇದನ್ನೂ ಓದಿ: ಬೆಂಗಳೂರು: 3 ದಿನಕ್ಕೊಮ್ಮೆ ಗ್ಯಾಸ್ ಪೈಪ್ ಲೈನ್ ಸೋರಿಕೆ; ಗೇಲ್ ಸಂಸ್ಥೆ ಹೇಳಿಕೆ
ಬೆಂಗಳೂರಿನ ನಾಗರಿಕ ಕಾರ್ಯಕರ್ತ ಸಂದೀಪ್ ಅನಿರುದ್ಧ್ ಸಹ ಇದೇ ಮಾತನ್ನು ಹೇಳುತ್ತಾರೆ. ಕೊಳಕು ನೀರು ಒಳಚರಂಡಿ ಮೂಲಕ ಕೆರೆಗೆ ಸೇರುತ್ತದೆ. ಮಳೆನೀರು ಕೊಯ್ಲಿನ ನೀರು ಮಾತ್ರ ಹೋಗಬೇಕು ಆದರೆ ಹಾಗಾಗುತ್ತಿಲ್ಲ. BWSSB ನೀರು ಸರಬರಾಜು ಮಾಡುವುದು ಮತ್ತು ಶುಚಿತ್ವ ಕಾಪಾಡುವುದು ಮಾತ್ರ ತನ್ನ ಕೆಲಸ ಎಂದು ಭಾವಿಸುತ್ತದೆ. ಆದರೆ ಜಲ ಪ್ರಾಧಿಕಾರವು ಜಲಮೂಲವನ್ನು ಸಂರಕ್ಷಿಸಬೇಕು ಮತ್ತು ಒಳಚರಂಡಿ ಮತ್ತು ಮಾಲಿನ್ಯಕಾರಕಗಳ ನೀರುಗಳು, ವಸ್ತುಗಳು ಪ್ರವೇಶವನ್ನು ತಡೆಯಬೇಕು ಎನ್ನುತ್ತಾರೆ.
ಈ ಬಗ್ಗೆ ಕಾರ್ಯಕರ್ತರು ಕೆಎಸ್ ಪಿಸಿಬಿ ಅಧಿಕಾರಿಗಳು ಮತ್ತು ಮಹದೇವಪುರ ವಲಯದ ಪರಿಸರ ಅಧಿಕಾರಿ ಮಹೇಂದ್ರ ಬಳಿ ದೂರು ನೀಡಿದ್ದು ಅವರು ತಪಾಸಣೆಗೆ ತಮ್ಮ ತಂಡವನ್ನು ಕಳುಹಿಸಿದ್ದರು. ನಾವು ಕೆಲವು ಸ್ಥಳಗಳನ್ನು ಪರೀಕ್ಷಿಸಿ ನೀರಿನ ಮಾದರಿಯನ್ನು ಸಂಗ್ರಹಿಸಿದ್ದೇವೆ. ಕೊಳಕು ನೀರು ಸೇರ್ಪಡೆಯಾಗಿರುವುದು ಪತ್ತೆಯಾದರೆ ಬಿಡಬ್ಲ್ಯುಎಸ್ಎಸ್ ಬಿಗೆ ನೊಟೀಸ್ ಕಳುಹಿಸುತ್ತೇವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಡಬ್ಲ್ಯುಎಸ್‌ಎಸ್‌ಬಿಯ ತ್ಯಾಜ್ಯ ನೀರು ವಿಭಾಗದ ಮುಖ್ಯ ಎಂಜಿನಿಯರ್ ವಿ ಗಂಗಾಧರ್ ಅವರು ಈ ಪ್ರದೇಶವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಬಿಬಿಎಂಪಿಗೆ ವಿಲೀನಗೊಂಡ 110 ಹಳ್ಳಿಗಳಲ್ಲಿ ನೀರು ಮತ್ತು ಒಳಚರಂಡಿ ಸಂಪರ್ಕದ ಜವಾಬ್ದಾರಿಯನ್ನು ಹಿರಿಯ ಅಧಿಕಾರಿಗಳಿಗೆ ವಹಿಸಲಾಗಿದೆ. ಕೆರೆ ಬಿಡಿಎ ಅಧೀನದಲ್ಲಿದ್ದು, 2021ರಲ್ಲಿ ಪಾಲಿಕೆಗೆ ಹಸ್ತಾಂತರಿಸಲಾಗಿದೆ ಎಂದು ಬಿಬಿಎಂಪಿ ಕೆರೆ ವಿಭಾಗ ಹೇಳಿದೆ.