'ಬಿಹಾರಿ, ಹಿಂದಿಯವ ಎಂದು ಹೇಳಿಕೊಂಡು ನನ್ನ ಮೇಲೆ ನಿಂದನೆ': ಪೊಲೀಸರಿಂದ ತನಿಖೆ ಆರಂಭ

ಬೆಂಗಳೂರಿನ ರಾಜಾಜಿನಗರದಲ್ಲಿ ಬಿಹಾರದ ಮುಜಾಫರ್‌ಪುರದ ವ್ಯಕ್ತಿಯೊಬ್ಬರು ಕನ್ನಡದಲ್ಲಿ ಮಾತನಾಡಲಿಲ್ಲ ಎಂದು ಮೂವರು ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿ ಬಿಹಾರದ ಮುಜಾಫರ್‌ಪುರದ ವ್ಯಕ್ತಿಯೊಬ್ಬರು ಕನ್ನಡದಲ್ಲಿ ಮಾತನಾಡಲಿಲ್ಲ ಎಂದು ಮೂವರು ನಿಂದಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುವ ವಿಡಿಯೋ ವೈರಲ್ ಆಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.

ಮೊನ್ನೆ ಎಪ್ರಿಲ್ 7 ರಂದು ನಡೆದ ಘಟನೆಯನ್ನು ನೆನಪಿಸಿಕೊಂಡ ಬಿಹಾರ ಮೂಲದ ನಿತೀಶ್ ಕುಮಾರ್ ಯಾದವ್, ತಾನು ಉಪಾಹಾರ ಗೃಹದ ಕೆಲಸಗಾರನಾಗಿದ್ದು,, ರಾಜಾಜಿನಗರದಲ್ಲಿರುವ ತನ್ನ ಉಪಾಹಾರ ಗೃಹಕ್ಕೆ ಮೂರು ಜನರು ಬಂದು ಬಿಹಾರಿ ಎಂದು ನಿಂದಿಸಿದರು. ಈ ಬಗ್ಗೆ ತನ್ನ ಊರಿಗೆ ಹೋದ ನಂತರ ವಿಡಿಯೊ ಮಾಡಿ ಪೋಸ್ಟ್ ಮಾಡಿದ್ದು, ಬೆಂಗಳೂರಿನಲ್ಲಿ ಹಿಂದಿ ಭಾಷಿಕರನ್ನು ಅನುಚಿತವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮತ್ತು ಹಿಂದಿ ಪರ ಗುಂಪುಗಳ ನಡುವೆ ಭಾಷಾ ವಿಷಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.

ಆದರೆ, ಸುಬ್ರಹ್ಮಣ್ಯನಗರ ಪೊಲೀಸರು ನಡೆಸಿದ ಪ್ರಾಥಮಿಕ ವಿಚಾರಣೆಯಲ್ಲಿ ಭಾಷೆಯ ಬದಲು ಹಳಸಿದ ಆಹಾರ ಮತ್ತು ಹರಿದ ನೋಟು ಕುರಿತು ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ನಿತೀಶ್ ಯಾದವ್ ವಿರುದ್ಧ ಕನ್ನಡ ಪರ ಕಾರ್ಯಕರ್ತರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆ ಬಗ್ಗೆ ಕೂಡ ತನಿಖೆ ಆರಂಭವಾಗಿದೆ. 

ನಿತೀಶ್ ಯಾದವ್ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ನೋಡಿದರೆ, ತಿಂಡಿ ಪೂರೈಸಿದ ವ್ಯಕ್ತಿ ಮತ್ತು ಗ್ರಾಹಕರ ನಡುವೆ ವಾಗ್ವಾದ ನಡೆದಿದೆ. ಆದಾಗ್ಯೂ, ಯಾದವ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಮೂವರು ಗ್ರಾಹಕರು - ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷನ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

“ವ್ಯಕ್ತಿಯು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದ ಬಳಿಯ ಫುಡ್ ಜಾಯಿಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರಾಗಲಿ ಅಥವಾ ಅವರ ಉದ್ಯೋಗದಾತರಾಗಲಿ ಯಾವುದೇ ದೂರು ದಾಖಲಿಸಿಲ್ಲ. ಹೆಂಗಸರು ಪುಳಿಯೋಗರೆ ಆರ್ಡರ್ ಮಾಡಿದ್ದಾರೆ ಎಂದು ಗೊತ್ತಾಗುತ್ತಿದೆ. ಅವರು ಅದನ್ನು ಇಷ್ಟಪಡಲಿಲ್ಲ, ಅದನ್ನು ಬದಲಾಯಿಸಲು ಕೇಳಿದರು, ಆದರೆ ನಿತೀಶ್ ಯಾದವ್ ನಿರಾಕರಿಸಿದ್ದಾರೆ. ಗ್ರಾಹಕರು ಹರಿದ ಕರೆನ್ಸಿ ನೋಟು ನೀಡಿದರು, ಅದನ್ನು ಸ್ವೀಕರಿಸಲಿಲ್ಲ, ಇದು ವಾಗ್ವಾದಕ್ಕೆ ಕಾರಣವಾಗಿದೆ. ನಿತೀಶ್ ಯಾದವ್ ಗೆ ಕನ್ನಡ ಬರುವುದಿಲ್ಲ, ಮಹಿಳೆಯರಿಗೆ ಹಿಂದಿ ಬರದಿದ್ದಾಗ ವಾಗ್ವಾದ ಆರಂಭವಾಗಿದೆ ಎಂದು ಪೊಲೀಸರು ಹೇಳುತ್ತಾರೆ. 

“ಉತ್ತರ ಪೊಲೀಸ್ ವಿಭಾಗದ ತಂಡವು ವೀಡಿಯೊವನ್ನು ಪೋಸ್ಟ್ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದೆ. ವಿಚಾರಣೆ ಆರಂಭಿಸಲಾಗಿದೆ. ಇಂತಹ ಪ್ರಕರಣಗಳಾದರೆ 112 ಸಂಖ್ಯೆಗೆ ಕರೆ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಡಿ, ಪೊಲೀಸರಿಗೆ ಕ್ರಮ ಕೈಗೊಳ್ಳಲು ಬಿಡಿ ಎಂದು ಪ್ರತಾಪ್ ರೆಡ್ಡಿ ಮನವಿ ಮಾಡುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com