ನನ್ನ ಹತ್ಯೆಗೆ ಲಷ್ಕರ್ ಜೊತೆ ಸೇರಿ ಪಿಎಫ್‌ಐ ಸಂಚು ರೂಪಿಸಿರುವ ವಿಚಾರ ತಿಳಿದು ಆಘಾತವಾಯಿತು: ಈಶ್ವರಪ್ಪ
ನನ್ನ ಹತ್ಯೆಗೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಪಿಎಫ್ಐ ಸಂಚು ರೂಪಿಸಿರುವ ವಿಚಾರ ತಿಳಿದು ಆಘಾತವಾಯಿದು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಹೇಳಿದ್ದಾರೆ.
Published: 15th April 2023 08:56 AM | Last Updated: 15th April 2023 04:13 PM | A+A A-

ಈಶ್ವರಪ್ಪ
ಬಳ್ಳಾರಿ: ನನ್ನ ಹತ್ಯೆಗೆ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ಪಿಎಫ್ಐ ಸಂಚು ರೂಪಿಸಿರುವ ವಿಚಾರ ತಿಳಿದು ಆಘಾತವಾಯಿದು ಎಂದು ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಪೊಲೀಸ್ ಅಧಿಕಾರಿಯಿಂದ ಈ ಬಗ್ಗೆ ವಿಚಾರ ತಿಳಿಯಿತು. "ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ನನಗೆ ಕರೆ ಮಾಡಿ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಬೆದರಿಕೆ ಹಾಕಿದ್ದ ಎನ್ನಲಾದ ಶಾಹಿರ್ ಶೇಕ್ ಎಂಬಾತನನ್ನು ನಾಗ್ಪುರ ಪೊಲೀಸರು ಬಂಧಿಸಿದ್ದು, ಪ್ರಸ್ತುತ ಆತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆಂದು ಹೇಳಿದರು.
''ನಾನು ನನ್ನ ಅಜೆಂಡಾದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ನಾನು ನನ್ನ ಕೊನೆಯ ಉಸಿರು ಇರುವವರೆಗೂ ಹಿಂದುತ್ವವನ್ನು ಅನುಸರಿಸುತ್ತೇನೆ ಮತ್ತು ರಕ್ಷಿಸುತ್ತೇನೆ, ಅಲ್ಲಿಯವರೆಗೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ, ಬೆದರಿಕೆ ಯಾವಾಗಲೂ ಇದ್ದೇ ಇರುತ್ತದೆ. ನನ್ನ ರಾಜಕೀಯ ಜೀವನದಲ್ಲಿ ನಾನು ಇಂತಹ ಶಕ್ತಿಗಳಿಗೆ ಎಂದಿಗೂ ಹೆದರುವುದಿಲ್ಲ ಎಂದು ತಿಳಿಸಿದರು.