ಮಾನ್ಯತೆಯ ಸಮಸ್ಯೆಯನ್ನು ಮೇ 31 ರ ವೇಳೆಗೆ ಬಗೆಹರಿಸಿಕೊಳ್ಳಿ ಇಲ್ಲವೇ ಬಂದ್ ಮಾಡಿ; ಅನಧಿಕೃತ ಶಾಲೆಗಳಿಗೆ ಸೂಚನೆ
ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಅನಧಿಕೃತ ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಮೇ.31 ರ ವರೆಗೆ ಗಡುವು ನೀಡಿದೆ.
Published: 20th April 2023 02:14 PM | Last Updated: 20th April 2023 06:04 PM | A+A A-

(ಸಾಂಕೇತಿಕ ಚಿತ್ರ)
ಬೆಂಗಳೂರು: ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಅನಧಿಕೃತ ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಮೇ 31 ರ ವರೆಗೆ ಗಡುವು ನೀಡಿದೆ. ಒಂದು ವೇಳೆ ನಿಗದಿತ ಗಡುವಿನಲ್ಲಿ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಅಂತಹ ಶಾಲೆಗಳನ್ನು ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಅನಧಿಕೃತ ಖಾಸಗಿ ಶಾಲೆಗಳು ನಡೆಯುತ್ತಿರುವುದರ ಬಗ್ಗೆ ಪೋಷರು ದೂರು ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ ಹಾಗೂ ಶಾಲೆಗಳು ಹಲವು ಅನಧಿಕೃತ ತರಗತಿಗಳನ್ನು ನಡೆಸುತ್ತಿರುವ ಪ್ರಕರಣಗಳೂ ವರದಿಯಾಗಿರುವುದರಿಂದ, ಮಾನ್ಯತೆ ಸಮಸ್ಯೆಯನ್ನು ಮೇ 31 ರ ವೇಳೆಗೆ ಬಗೆಹರಿಸಿಕೊಳ್ಳದೇ ಇದ್ದಲ್ಲಿ ಅಂತಹ ಶಾಲೆಗಳನ್ನು ಮುಚ್ಚಲಾಗುತ್ತದೆ ಎಂದು ಸರ್ಕಾರಿ ಆದೇಶದಲ್ಲಿ ಹೇಳಿದೆ.
ಇದನ್ನೂ ಓದಿ: ನಿಯಮ ಉಲ್ಲಂಘನೆಯನ್ನು ಸರಿಪಡಿಸಿಕೊಳ್ಳಲು ರಾಜ್ಯದ ಅನಧಿಕೃತ ಶಾಲೆಗಳಿಗೆ ಕಾಲಾವಕಾಶ: ಶಿಕ್ಷಣ ಇಲಾಖೆ
ಆದೇಶದ ಪ್ರಕಾರ ಇಲಾಖೆ 45 ದಿನಗಳ ಕಾಲ ಸಮಯ ನೀಡಿದ್ದು, ಅನಧಿಕೃತ ಶಾಲೆಗಳು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವ ಹೊಣೆಯನ್ನು ಉಪ ನಿರ್ದೇಶಕರುಗಳಿಗೆ ವಹಿಸಲಾಗಿದೆ.
ನಿರ್ದಿಷ್ಟವಾಗಿ ಹೇಳುವುದಾದರೆ, ನೋಂದಣಿ ಇಲ್ಲದೆ ನಡೆಯುತ್ತಿರುವ ಶಾಲೆಗಳು, ಅನಧಿಕೃತವಾಗಿ ಮುಂದುವರಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು (9 ಮತ್ತು 10 ನೇ ತರಗತಿಗಳು), ರಾಜ್ಯದಲ್ಲಿ ಮಾನ್ಯತೆ ಪಡೆದು ಕೇಂದ್ರೀಯ ಪಠ್ಯಕ್ರಮವನ್ನು ಅನುಸರಿಸುವ ಶಾಲೆಗಳು, ಅನಧಿಕೃತ ಮಾಧ್ಯಮಗಳಲ್ಲಿ ಬೋಧನೆ ಮಾಡುವ ಶಾಲೆಗಳು, ಶಾಲೆಗಳಿಗೆ ಈ ಸರ್ಕಾರಿ ಆದೇಶದಲ್ಲಿ ಅನ್ವಯವಾಗಲಿದೆ. ಅನಧಿಕೃತ ಇಲಾಖೆಗಳನ್ನು ನಡೆಸುವುದು, ಇಲಾಖೆಗೆ ಪೂರ್ವ ಸೂಚನೆ ಇಲ್ಲದೆ ಶಾಲೆಗಳ ಮಾಲೀಕತ್ವವನ್ನು ಹಸ್ತಾಂತರಿಸುವುದು, ಮಾನ್ಯತೆಯನ್ನು ನವೀಕರಿಸದೆ ರಾಜ್ಯ ಪಠ್ಯಕ್ರಮವನ್ನು ಬೋಧಿಸುವುದು ಮತ್ತು ಪಠ್ಯಕ್ರಮದ ಹೊರಗೆ ಪಠ್ಯಪುಸ್ತಕಗಳ ಸಂಗ್ರಹಣೆ ಮತ್ತು ಅಳವಡಿಕೆ ಇವೆಲ್ಲವನ್ನೂ ನಿಯಮ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರಿ ಆದೇಶ ಹೇಳಿದೆ.