'ಬೊಮ್ಮಾಯಿನ ಮಾತ್ರ ಭ್ರಷ್ಟ ಎಂದಿದ್ದು, ಲಿಂಗಾಯತರನ್ನಲ್ಲ': ಸಿದ್ದರಾಮಯ್ಯ ಸ್ಪಷ್ಟನೆ

ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಲಿಂಗಾಯತ ಸಿಎಂ ಹೇಳಿಕೆ ವಿಚಾರವಾಗಿ ಭುಗಿಲೆದ್ದಿರುವ ಲಿಂಗಾಯತ ಸಮುದಾಯದ ಟೀಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, 'ಬಸವರಾಜ ಬೊಮ್ಮಾಯಿಗೆ ಮಾತ್ರ ಭ್ರಷ್ಟ ಸಿಎಂ ಅಂತಾ ಹೇಳಿದ್ದೇನೆ. ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ. ಸಿಎಂ ಬೊಮ್ಮಾಯಿಗೆ ಸೀಮಿತವಾಗಿ ಮಾತ್ರ ನಾನು ಹೇಳಿಕೆ ನೀಡಿದ್ದೇನೆ ಎಂದರು.

ಅಂತೆಯೇ ಈ ಹಿಂದೆ ಸಿಎಂ ಆಗಿದ್ದ ಲಿಂಗಾಯತ ಸಮಾಜದವರು ಪ್ರಮಾಣಿಕರಾಗಿದ್ದರು. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌, ಜೆ.ಹೆಚ್‌.ಪಟೇಲ್‌, S.R.ಕಂಠಿ ಸೇರಿ ಲಿಂಗಾಯತ ಸಮುದಾಯದ ಸಿಎಂಗಳು ಅತ್ಯಂತ ಹಾನೆಸ್ಟ್‌ ಆಗಿದ್ದರು. ನನ್ನ ಹೇಳಿಕೆಯನ್ನು ಬಿಜೆಪಿ ಸೋಷಿಯಲ್ ಮೀಡಿಯಾ ತಿರುಚುತ್ತಿದೆ. ಚುನಾವಣೆ ಹಿನ್ನೆಲೆ ನನ್ನ ಹೇಳಿಕೆ ತಿರುಚಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಲಿಂಗಾಯತರ ಮೇಲೆ ವಿಶ್ವಾಸ ಇಲ್ಲದಿದ್ದರೆ ಏಕೆ ಇಷ್ಟು ಸೀಟ್‌ ನೀಡುತ್ತಿದ್ದೆವು ಎಂದು ಪ್ರಶ್ನಿಸಿದರು.

ಜೆಡಿಎಸ್ ಮತ್ತೆ ಬಿಜೆಪಿಗೆ ಮತ ಹಾಕದಂತೆ ಸಿದ್ಧರಾಮಯ್ಯ ಕರೆ
ನನ್ನ ಸೋಲಿಸಲು, ದಲಿತ ಮತ ವಿಭಜನೆ ಮಾಡಲು ಜೆಡಿಎಸ್ ಹಾಗೂ ಬಿಎಸ್ಪಿಯಿಂದ ದಲಿತ ಅಭ್ಯರ್ಥಿಗಳನ್ನು ಹಾಕಿದ್ದಾರೆ. ಜೆಡಿಎಸ್, ಬಿಎಸ್ಪಿಗೆ ಮತ ಹಾಕಿದ್ರೆ ಬಿಜೆಪಿಗೆ ಹೋಗುತ್ತದೆ. ಹೀಗಾಗಿ ಬಿಎಸ್ಪಿ, ಜೆಡಿಎಸ್​ಗೆ ಮತ ಹಾಕಬೇಡಿ. ನನಗೆ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ. ಬಿಎಸ್ಪಿ ಇಲ್ಲಿ ಗೆಲ್ಲೋದಿಲ್ಲ, ಆದರೆ ಅವರು ನನಗೆ ತೊಂದರೆ ಕೊಡೋಕೆ ನಿಂತಿರೋದು. ಜೆಡಿಎಸ್ ಮತ್ತೆ ಬಿಜೆಪಿ ಅಭ್ಯರ್ಥಿಗಳನ್ನು ತಿರಸ್ಕಾರ ಮಾಡಬೇಕು ಎಂದು ಪ್ರಚಾರದಲ್ಲಿ ಹೇಳಿದರು.

RSS, ಬಿಜೆಪಿ, ಸೋಮಣ್ಣ ಏನೇ ಮಾಡಿದರೂ ಪ್ರಯೋಜನವಾಗಲ್ಲ
ವರುಣ ಕ್ಷೇತ್ರದಲ್ಲೇ ನನ್ನನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವರುಣ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹೇಳಿದರು. RSS, ಬಿಜೆಪಿ, ಸೋಮಣ್ಣ ಏನೇ ಮಾಡಿದರೂ ಪ್ರಯೋಜನವಾಗಲ್ಲ. ಆದರೆ ವರುಣ ವಿಧಾನಸಭಾ ಕ್ಷೇತ್ರದ ಜನತೆ ನನ್ನ ಕೈಹಿಡಿಯುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com