ಅರ್ಕಾವತಿ ಲೇ ಔಟ್ ನಲ್ಲಿ ಬಿಡಿಎ ಎರಡು ಬಾರಿ ನಿವೇಶನ ಹಂಚಿಕೆ: ತೀವ್ರ ಹತಾಶೆಯಲ್ಲಿ ಮಾಜಿ ರಕ್ಷಣಾ ಸಿಬ್ಬಂದಿ, ಮೂಲಸೌಕರ್ಯ ಕುಂಠಿತ

ಎರಡು ಬಾರಿ ಸೈಟ್‌ ನಂಬರ್‌ ಬದಲಾವಣೆ ಹಾಗೂ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಐದು ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ಬೆಂಗಳೂರಿನ ಅರ್ಕಾವತಿ ಬಡಾವಣೆಯ 18ನೇ ಬ್ಲಾಕ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಭಾರೀ ಎಡವಟ್ಟು ಮಾಡಿದೆ.
ಬೈರತಿ ಖಾನೆಯ ಅರ್ಕಾವತಿ 18ನೇ ಬ್ಲಾಕ್‌ನಲ್ಲಿ ಆರ್ ನಾರಾಯಣಪ್ಪ ಅವರ ಕುಟುಂಬದವರು ತಮ್ಮ ನಿವೇಶನದ ಸುತ್ತ ಬೇಲಿ ಹಾಕಿರುವುದು
ಬೈರತಿ ಖಾನೆಯ ಅರ್ಕಾವತಿ 18ನೇ ಬ್ಲಾಕ್‌ನಲ್ಲಿ ಆರ್ ನಾರಾಯಣಪ್ಪ ಅವರ ಕುಟುಂಬದವರು ತಮ್ಮ ನಿವೇಶನದ ಸುತ್ತ ಬೇಲಿ ಹಾಕಿರುವುದು

ಬೆಂಗಳೂರು: ಎರಡು ಬಾರಿ ಸೈಟ್‌ ನಂಬರ್‌ ಬದಲಾವಣೆ ಹಾಗೂ ಸಣ್ಣಪುಟ್ಟ ಮಾರ್ಪಾಡುಗಳನ್ನು ಮಾಡಿ ಐದು ನಿವೇಶನಗಳನ್ನು ಮಂಜೂರು ಮಾಡುವ ಮೂಲಕ ಬೆಂಗಳೂರಿನ ಅರ್ಕಾವತಿ ಬಡಾವಣೆಯ 18ನೇ ಬ್ಲಾಕ್‌ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಭಾರೀ ಎಡವಟ್ಟು ಮಾಡಿದೆ. ಈ ವಿಷಯ ತಿಳಿದ ಮೂಲ ಮಂಜೂರಾತಿದಾರರು ಹಾಗೂ ಹೊಸ ನಿವೇಶನ ಮಾಲೀಕರ ನಡುವಿನ ಜಟಾಪಟಿಯಿಂದಾಗಿ ಇಡೀ ಬ್ಲಾಕ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ಸ್ಥಗಿತಗೊಂಡಿದೆ.

ತಮ್ಮ ತಂದೆ ನಿವೃತ್ತ ಸೇನಾಧಿಕಾರಿ ಆರ್.ನಾರಾಯಣಪ್ಪ ಅವರಿಗೆ ಮಂಜೂರಾಗಿದ್ದ ನಿವೇಶನ ತಮ್ಮ ಗಮನಕ್ಕೆ ಬಾರದೆ, ಬಿಡಿಎ ಬೇರೆಯವರಿಗೆ ಮಂಜೂರು ಮಾಡಿರುವುದು ಎನ್.ನಯನ್ ಅವರ ಗಮನಕ್ಕೆ ಬಂದಿದೆ. 2006 ಜೂನ್ ನಲ್ಲಿ ಬಸವೇಶ್ವರನಗರದಲ್ಲಿರುವ ನನ್ನ ತಂದೆಯ ಸೈಟ್‌ಗೆ 4.54 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಪೂರ್ಣ ಸೇಲ್ ಡೀಡ್ ನ್ನು ಪಡೆದುಕೊಂಡಿದ್ದವು. ನಂತರ ನಿಯಮಿತವಾಗಿ ನಿವೇಶನದ ಸ್ಥಳಕ್ಕೆ ಹೋಗುತ್ತಿದ್ದರೂ ಕೋವಿಡ್ ಸಮಯದಲ್ಲಿ ನಿಲ್ಲಿಸಿದ್ದರು. ಅಲ್ಲಿ ಮನೆ ನಿರ್ಮಿಸಿ ಅವರ ಇಬ್ಬರು ಹೆಣ್ಣು ಮಕ್ಕಳಿಗೆ ನೀಡಲು ನಿರ್ಧರಿಸಿದ್ದರು.

ನಾನು ನಾಲ್ಕು ವರ್ಷಗಳ ನಂತರ ಕಳೆದ ತಿಂಗಳು ನಿವೇಶನ ಸ್ಥಳಕ್ಕೆ ಹೋಗಿದ್ದೆ. ಆಗ ನಮಗೆ ತಿಳಿಸದೆ 2021 ರಲ್ಲಿ ಅದನ್ನು ಮೂಲ ಭೂಮಾಲೀಕರಿಗೆ ಹಂಚಲಾಗಿದೆ ಎಂದು ನನಗೆ ಆಘಾತವಾಯಿತು. ಇದು ನಮ್ಮ ಆಸ್ತಿ ಮತ್ತು ನನ್ನ ತಂದೆಗೆ ಭಾವನಾತ್ಮಕ ಸಂಬಂಧವಿದ್ದು, ಈಗ ಬೇಲಿ ಹಾಕಿದ್ದೇನೆ ಎಂದರು.

ಇನ್ನೊಬ್ಬ ಮಾಜಿ ರಕ್ಷಣಾ ಸಿಬ್ಬಂದಿ ಗೋವಿಂದ್ ರೆಡ್ಡಿ ಅವರಿಗೆ ಜೂನ್ 2006 ರಲ್ಲಿ ಬೈರತಿ ಖಾನೆಯಲ್ಲಿ ಸೈಟ್ ಹಂಚಿಕೆ ಪತ್ರವನ್ನು ನೀಡಲಾಗಿತ್ತು, ಆದರೆ ಸೈಟ್ ಸಿಗಲಿಲ್ಲ. ಅವರ ಮಗ ಪಿ ಜಿ ಶಶಿಧರ್  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿ, ನನ್ನ ತಂದೆ, ನಿವೃತ್ತ ವಾಯುಪಡೆ ಸಿಬ್ಬಂದಿ, ನ್ಯಾಯಾಲಯಕ್ಕೆ ಹೋಗಿ ಜುಲೈ 2013 ರಲ್ಲಿ ನಮ್ಮ ಪರವಾಗಿ ತೀರ್ಪು ಪಡೆದರು. ಬಿಡಿಎ ನಮಗೆ ಸೈಟ್ ನಂ. 139 ರ ಗುತ್ತಿಗೆ ಹಾಗೂ ಸೇಲ್ ಡೀಡ್ ನ್ನು ಏಪ್ರಿಲ್ 2015 ರಲ್ಲಿ ಸಂಪೂರ್ಣವಾಗಿ ನೀಡಿತ್ತು. ಫೆಬ್ರುವರಿ 2017 ರಲ್ಲಿ ಸೇಲ್ ಡೀಡ್ ನೀಡಿತ್ತು. ನಾವು 2021 ರವರೆಗೆ ಆಸ್ತಿ ತೆರಿಗೆ ಪಾವತಿಸಿದ್ದೇವೆ. ಬಿಕೆ-131 ಎಂದು ನಂಬರ್ ಬದಲಾಯಿಸಿ ಭೂಮಾಲೀಕರಿಗೆ ನನ್ನ ಸೈಟ್ ಹಂಚಿಕೆಯಾಗಿದೆ ಎಂದು ಇತ್ತೀಚೆಗೆ ಗೊತ್ತಾಯಿತು. ಇತ್ತೀಚೆಗೆ ನಾನು ಸ್ಥಳಕ್ಕೆ ಭೇಟಿ ನೀಡಿದಾಗ, ಹೊಸ ಮಾಲೀಕ ಚಂಗಲರಾಯ ರೆಡ್ಡಿ ಅದಕ್ಕೆ ಬೇಲಿ ಹಾಕಲು ಪ್ರಾರಂಭಿಸಿದ್ದನ್ನು ನೋಡಿದೆ. ನಾನು ಒತ್ತಾಯಿಸಿದ ಮೇಲೆ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. 

ಈ ಬ್ಲಾಕ್‌ನಲ್ಲಿರುವ 300 ಸೈಟ್‌ಗಳಲ್ಲಿ ಕೆಲವು ಸೈಟ್‌ಗಳನ್ನು ಭೂಮಾಲೀಕರಿಗೆ ಆದ್ಯತೆ ಮತ್ತು ಶೇಕಡಾ 40ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ನೀಡಬೇಕಾಗಿರುವುದರಿಂದ ಕೆಲವು ಸೈಟ್‌ಗಳನ್ನು ಎರಡು ಬಾರಿ ಹಂಚಿಕೆ ಮಾಡಿದ್ದೇವೆ ಎಂದು ಬಿಡಿಎ ಅಧಿಕಾರಿಯೊಬ್ಬರು ಎಂದು ಆಗಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಬಿಡಿಎ ಈಗ ತನ್ನ ನಿವೇಶನಗಳ ಲೆಕ್ಕ ಪರಿಶೋಧನೆ ನಡೆಸುತ್ತಿದ್ದು, 18ನೇ ಬ್ಲಾಕ್‌ನಲ್ಲಿ ಮೂಲತಃ ನಿವೇಶನ ಹಂಚಿಕೆ ಮಾಡಿದವರಿಗೆ ಎರಡು ತಿಂಗಳೊಳಗೆ ಪರ್ಯಾಯ ನಿವೇಶನ ನೀಡುತ್ತೇವೆ ಎಂದಿದ್ದಾರೆ. 

ಹೊಸ ಮತ್ತು ಹಳೆ ನಿವೇಶನ ಹಂಚಿಕೆದಾರರ ನಡುವಿನ ಜಟಾಪಟಿಯಲ್ಲಿ ಬ್ಲಾಕ್‌ನಲ್ಲಿ ಮೂಲಸೌಕರ್ಯ ಕಾಮಗಾರಿ ಕುಂಠಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com