ಇದ್ದ ಒಬ್ಬ ಮಗನನ್ನು ಕಳೆದುಕೊಂಡ ನಡುವಯಸ್ಸಿನ ದಂಪತಿಗೆ ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ಹೈಕೋರ್ಟ್ ಸಮ್ಮತಿ!

ಬೆಂಗಳೂರಿನ 57 ವರ್ಷದ ಪುರುಷ ಮತ್ತು ಅವರ 45 ವರ್ಷದ ಪತ್ನಿಗೆ ಬಾಡಿಗೆ ಮಗು ಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ. 55 ವರ್ಷಕ್ಕಿಂತ ಮೇಲ್ಪಟ್ಟ ಪುರುಷನು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಕಾನೂನು ನಿಷೇಧಿಸಿರುವುದರಿಂದ ಅರ್ಹತಾ ಪ್ರಮಾಣಪತ್ರಕ್ಕಾಗಿ ಪರೀಕ್ಷೆಗೆ ಒಳಗಾಗುವಂತೆ ನ್ಯಾಯಾಲಯವು ದಂಪತಿಗೆ ಸೂಚಿಸಿದೆ.
ಹೈಕೋರ್ಟ್
ಹೈಕೋರ್ಟ್
Updated on

ಬೆಂಗಳೂರು: ಬೆಂಗಳೂರಿನ 57 ವರ್ಷದ ಪುರುಷ ಮತ್ತು ಅವರ 45 ವರ್ಷದ ಪತ್ನಿಗೆ ಬಾಡಿಗೆ ಮಗು ಪಡೆಯಲು ಹೈಕೋರ್ಟ್ ಅನುಮತಿ ನೀಡಿದೆ. 55 ವರ್ಷಕ್ಕಿಂತ ಮೇಲ್ಪಟ್ಟ ಪುರುಷನು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಕಾನೂನು ನಿಷೇಧಿಸಿರುವುದರಿಂದ ಅರ್ಹತಾ ಪ್ರಮಾಣಪತ್ರಕ್ಕಾಗಿ ಪರೀಕ್ಷೆಗೆ ಒಳಗಾಗುವಂತೆ ನ್ಯಾಯಾಲಯವು ದಂಪತಿಗೆ ಸೂಚಿಸಿದೆ. ದಂಪತಿಗಳು ಆನುವಂಶಿಕ, ದೈಹಿಕ ಮತ್ತು ಆರ್ಥಿಕ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ.

ದಂಪತಿಗೆ ಅರ್ಹತಾ ಪ್ರಮಾಣಪತ್ರವನ್ನು ನೀಡುವ ಬಗ್ಗೆ ಪರಿಗಣಿಸುವಂತೆ ನ್ಯಾಯಾಲಯವು ರಾಜ್ಯ ಬಾಡಿಗೆ ತಾಯ್ತನ ಮಂಡಳಿಗೆ ನಿರ್ದೇಶನ ನೀಡಿದೆ. ಆ ವ್ಯಕ್ತಿಗೆ ವಯಸ್ಸಾಗುತ್ತಿರುವುದರಿಂದ ನ್ಯಾಯಾಲಯವು ಆತನ ಅರ್ಜಿಯನ್ನು ಪರಿಗಣಿಸಲು ಮಂಡಳಿಗೆ ನಾಲ್ಕು ವಾರಗಳನ್ನು ನಿಗದಿಪಡಿಸಿದೆ.

ಮಗುವನ್ನು ಹೊಂದುವುದನ್ನು ತಡೆಯುವ ಕಾಯಿದೆಯ ಕೆಲವು ನಿಬಂಧನೆಗಳನ್ನು ಪ್ರಶ್ನಿಸಿ ಗೋಕುಲ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಈ ಆದೇಶವನ್ನು ನೀಡಿದರು. ಎಂಬಿಬಿಎಸ್ ನಂತರ ಮಂಗಳೂರಿನ ಕಾಲೇಜೊಂದರಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಅವರ 23 ವರ್ಷದ ಏಕೈಕ ಮಗ ಕಳೆದ ವರ್ಷ ಡಿಸೆಂಬರ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಂತರ ಮಹಿಳೆ ತೀವ್ರ ಖಿನ್ನತೆಗೆ ಒಳಗಾಗಿದ್ದರು.

ಮೃತ ಮಗ ಅಥವಾ ಮಗಳ ಪಾಲಕರಾಗಿರುವುದು ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಅನೇಕ ಪೋಷಕರು ತಮ್ಮ ಮಕ್ಕಳ ಹಠಾತ್ ನಿಧನದಿಂದ ಆಳವಾದ ಖಿನ್ನತೆಗೆ ಒಳಗಾಗುತ್ತಾರೆ ಎಂದು ವೈದ್ಯಕೀಯ ವಿಜ್ಞಾನವೂ ಹೇಳುತ್ತದೆ. ಈ ಭಾವನಾತ್ಮಕ ನಿರ್ವಾತವನ್ನು ತುಂಬಲು ಅವರು ಬಾಡಿಗೆ ತಾಯ್ತನ ಮೂಲಕ ಮಗು ಪಡೆಯಲು ನ್ಯಾಯಾಲಯ ಅನುಮತಿ ನೀಡುತ್ತದೆ ಎಂದರು. 

ದಂಪತಿಗಳಿಗೆ ಮೂರು ಪರೀಕ್ಷೆಗಳು: ದಂಪತಿಗೆ ವಯಸ್ಸಾಗಿರುವುದರಿಂದ ಮೂರು ಪರೀಕ್ಷೆಗಳಿಗೆ ಒಳಗಾಗುವುದು ಉತ್ತಮ ಎಂದು ನ್ಯಾಯಾಧೀಶರು ಹೇಳಿದರು. 

ವ್ಯಕ್ತಿ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವಿಭಾಗದ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಮಗುವನ್ನು ದತ್ತು ತೆಗೆದುಕೊಳ್ಳುವ ಪ್ರಕ್ರಿಯೆಗೆ ಮೂರು ವರ್ಷ ಹಿಡಿಯುತ್ತದೆ. ಹೀಗಾಗಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಲು ಮುಂದೆ ಬಂದರು. ವ್ಯಕ್ತಿಯ ವೀರ್ಯದ ಶಕ್ತಿ ಮತ್ತು ಅದರ ಗುಣಮಟ್ಟವನ್ನು ನಿರ್ಧರಿಸಲು ಪುರುಷನು ಮೊದಲು ಆನುವಂಶಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಎರಡನೆಯದಾಗಿ, ಮಗುವನ್ನು ನೋಡಿಕೊಳ್ಳಲು ದಂಪತಿಗಳು ತಮ್ಮ ಆದಾಯದ ಸ್ಥಿತಿಯ ಪುರಾವೆಗಳನ್ನು ಸಲ್ಲಿಸಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com