ಆಪರೇಷನ್ ಕಾವೇರಿ: ಯುದ್ಧ ಪೀಡಿತ ಸುಡಾನ್ನಿಂದ 362 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ಆಗಮನ
ಆಂತರಿಕ ಯುದ್ಧ ಪೀಡಿತ ಸುಡಾನ್ ನಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ.
Published: 28th April 2023 06:33 PM | Last Updated: 28th April 2023 06:47 PM | A+A A-

ಆಪರೇಷನ್ ಕಾವೇರಿ
ಬೆಂಗಳೂರು: ಆಂತರಿಕ ಯುದ್ಧ ಪೀಡಿತ ಸುಡಾನ್ ನಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ.
362 ಕನ್ನಡಿಗರನ್ನು ಭಾರತೀಯ ಸೇನಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಈ ಪೈಕಿ 56 ಜನ ತಮಿಳಿಗರಿದ್ದಾರೆ. ಸದ್ಯ ಸ್ಕ್ರೀನಿಂಗ್, ಕೊವಿಡ್ ಟೆಸ್ಟ್ ಮಾಡಿ ವಿಳಾಸ ಪಡೆಯಲಾಗಿದೆ.
ಸುರಕ್ಷಿತವಾಗಿ ಸುಡಾನ್ನಿಂದ ಕರೆತಂದಿರುವ ಕನ್ನಡಿಗರನ್ನು ಸ್ವಾಗತಿಸಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಣದೀಪ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಸುಡಾನ್'ನಿಂದ ಕರ್ನಾಟಕಕ್ಕೆ ಮರಳುವವರ ಅನುಕೂಲಕ್ಕೆ ಮುಂಬೈ, ದೆಹಲಿಯಲ್ಲಿ ತಂಡಗಳ ನಿಯೋಜನೆ
ಸ್ವಗ್ರಾಮಗಳಿಗೆ ತೆರಳಲು ಕನ್ನಡಿಗರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಏರ್ಪೋಟ್ನಿಂದ ಅವರು ತಮ್ಮ ಊರುಗಳಿಗೆ ತೆರಳಲು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೈಸೂರು ಸೇರಿದಂತೆ ಹಲವಡೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.