'ಖರ್ಗೆಯವರೇ ನಿಮ್ಮ ಬಾಯಲ್ಲಿ ಇಂತಹ ಮಾತು ಬಂದ ಮೇಲೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದೇ ಲೇಸು'
ಮಲ್ಲಿಕಾರ್ಜುನ ಖರ್ಗೆ ಅವರೇ ನಿಮಗೆ ಇಳಿ ವಯಸ್ಸು ಇದು. ನಾವೆಲ್ಲರೂ ಗೌರವ ಕೊಡ್ತಾ ಇದ್ದಂತಹ ಖರ್ಗೆ ನೀವು. ನಿಮ್ಮ ಬಾಯಲ್ಲಿ ಇಂತಹ ಮಾತು ಬಂದ ಮೇಲೆ ನೀವು ರಾಜಕೀಯ ನಿವೃತ್ತಿ ತಗೋಳೋದೇ ಒಳ್ಳೆಯದು.
Published: 30th April 2023 08:36 AM | Last Updated: 02nd May 2023 08:05 PM | A+A A-

ಮಲ್ಲಿಕಾರ್ಜುನ ಖರ್ಗೆ
ಹಾಸನ: ಮಲ್ಲಿಕಾರ್ಜುನ ಖರ್ಗೆ ಅವರೇ ನಿಮಗೆ ಇಳಿ ವಯಸ್ಸು ಇದು. ನಾವೆಲ್ಲರೂ ಗೌರವ ಕೊಡ್ತಾ ಇದ್ದಂತಹ ಖರ್ಗೆ ನೀವು. ನಿಮ್ಮ ಬಾಯಲ್ಲಿ ಇಂತಹ ಮಾತು ಬಂದ ಮೇಲೆ ನೀವು ರಾಜಕೀಯ ನಿವೃತ್ತಿ ತಗೋಳೋದೇ ಒಳ್ಳೆಯದು. ರಾಜಕೀಯದಲ್ಲಿ ಇರಬೇಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಅರಕಲಗೂಡಿನಲ್ಲಿ ಮಾತನಾಡಿದ ಈಶ್ವರಪ್ಪ, ಎಐಸಿಸಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಂಡ ನಂತರ ಇನ್ನೇನಾದರೂ ಒಳ್ಳೆಯ ಸ್ಥಾನ ತಗೊಬೇಕು ಎಂದುಕೊಂಡಿದ್ದಾರೆ, ಹೀಗಾಗಿ ಆ ಇಬ್ಬರನ್ನು ಓಲೈಸುವ ಸಲುವಾಗಿ ವಿಶ್ವ ನಾಯಕ ನರೇಂದ್ರಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರು 'ನೀಲಕಂಠ', ಹಾವುಗಳನ್ನು ಹೇಗೆ ಪಳಗಿಸಬೇಕು ಎಂಬುದು ಅವರಿಗೆ ಗೊತ್ತು: ಸಿಎಂ ಬೊಮ್ಮಾಯಿ
ಯುವಕರು, ಹೆಣ್ಣುಮಕ್ಕಳು ಖರ್ಗೆ ಬಾಯಲ್ಲಿ ಏನು ಬರುತ್ತೆ ಅಂತ ನೋಡುತ್ತಾ ಇರ್ತಾರೆ. ಇಂತಹ ಸಂದರ್ಭದಲ್ಲಿ ನೀವು ಮೋದಿ ಅವರನ್ನು ವಿಷದ ಹಾವು ಅಂದರೆ ಹೇಗೆ? ನನಗೆ ಖರ್ಗೆ ಅವರನ್ನು ಟೀಕೆ ಮಾಡುವಂತಹ ಪದಗಳೇ ಬರ್ತಿಲ್ಲ. ಏಕೆಂದರೆ ಅವರು ಹಿರಿಯರು. ನಮ್ಮ ಪಕ್ಷದಲ್ಲಿ ಹಿರಿಯರಿಗೆ ಗೌರವ ಕೊಡಬೇಕು ಅಂತ ಕಲಿಸಿಕೊಡಲಾಗುತ್ತದೆ., ನಮ್ಮ ಸಂಸ್ಕೃತಿಯೇ ಅದು. ಆದರೆ ಹಿರಿತನಕ್ಕೆ ಬೆಲೆ ಕೊಡದಿದ್ದಾಗ ಏನು ಮಾಡಬೇಕು? ನಾನು ಇದನ್ನು ರಾಜ್ಯದ ಜನಕ್ಕೆ ಬಿಡುತ್ತೇನೆ. ಖರ್ಗೆ ಹೇಳಿದ್ದು ಸರಿನೋ ತಪ್ಪೋ ನೀವು ತೀರ್ಮಾನ ಮಾಡಿ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ತಂದೆ ಸಮಾನ ಅಂತ ಅಂದುಕೊಂಡಿದ್ದೆ ನಾನು. ರಾಜಕಾರಣ ಮಾಡಲಿ ನಾನು ಬೇಡ ಅನ್ನಲ್ಲ. ಆದರೆ ಅವರ ಬಾಯಿಂದ ಬರ್ತಿರುವ ಮಾತು ಕೇಳಿ ನನಗೆ ತುಂಬಾ ನೋವಾಯ್ತು. ಸ್ವಲ್ಪ ದಿನದ ಕೆಳಗೆ ವಿಶ್ವವೆ ಮೆಚ್ಚಿರುವ ಮೋದಿಯನ್ನು ರಾವಣ ಅಂತ ಕರೆದ್ರು. ನಿನ್ನೆ ವಿಷದ ಹಾವು ಎಂದರು. ಇದು ಸರಿಯಾ ನೀವೇ ತೀರ್ಮಾನ ಮಾಡಿʼʼ ಎಂದು ಹೇಳಿದರು.
ಇದನ್ನೂ ಓದಿ: 'ಮೋದಿ ವಿಷದ ಹಾವು ಇದ್ದಂತೆ': ಹೇಳಿಕೆ ವಿವಾದ ಪಡೆಯುತ್ತಿದ್ದಂತೆಯೇ ಮಲ್ಲಿಕಾರ್ಜುನ ಖರ್ಗೆ ಯೂಟರ್ನ್!
ಒಂದ್ಕಡೆ ಡಿ.ಕೆ.ಶಿವಕುಮಾರ್ ಕ್ಯಾಂಡಿಡೇಟ್, ಇನ್ನೊಂದು ಕಡೆ ಸಿದ್ದರಾಮಯ್ಯ ಅವರ ಕ್ಯಾಂಡಿಡೇಟ್, ಇನ್ನೊಂದು ಕಡೆ ದೇವೇಗೌಡರ ಕ್ಯಾಂಡಿಡೇಟ್. ಮೂರು ವ್ಯಕ್ತಿಗಳು ಯಾವುದಾದರೂ ಸಿದ್ಧಾಂತದ ತಳಹದಿ ಮೇಲೆ ಓಟು ಕೇಳ್ತಾ ಇದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಟೀಕಿಸಿದರು.
1989ರಲ್ಲಿ ವಿಧಾನಸಭೆಗೆ ಬಂದಾಗಿನಿಂದ ಇಲ್ಲಿಯವರೆಗೂ ರಾಮಸ್ವಾಮಿಯವರನ್ನು ನೋಡುತ್ತಾ ಬಂದಿದ್ದೇನೆ. ಅವರು ಮಾತನಾಡುವಾಗ ಸರಿಯಾದ ವ್ಯಕ್ತಿ ಸರಿಯಾದ ಪಕ್ಷದಲ್ಲಿ ಇಲ್ಲ ಎನಿಸುತ್ತಿತ್ತು. ಈಗ ಅವರು ಬಿಜೆಪಿಗೆ ಬಂದಿರುವುದು ಭೀಮ ಬಲ ಬಂದಂತಾಗಿದೆ. ಅವರೊಬ್ಬ ಸಂಭಾವಿತ ವ್ಯಕ್ತಿ ಎಂದು ಯೋಗರಮೇಶ್ ಮತ್ತು ಎ.ಟಿ ರಾಮಸ್ವಾಮಿ ಅವರನ್ನು ಈಶ್ವರಪ್ಪ ಹಾಡಿ ಹೊಗಳಿದರು.