ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶ, ಕಾಂಗ್ರೆಸ್​ನಂತಹ ಗುಜರಿ ಇಂಜಿನ್​​ನಿಂದ ಅದು ಸಾಧ್ಯವಿಲ್ಲ: ಪ್ರಧಾನಿ ಮೋದಿ

ಚಿನ್ನದ ನಾಡು ಕೋಲಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದು, ಬಿಜೆಪಿ ಸಮಾವೇಶದಲ್ಲಿ ಭಾಷಣ ಮಾಡುತ್ತಿದ್ದಾರೆ.
ಕೋಲಾರ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ.
ಕೋಲಾರ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಪ್ರಧಾನಿ ಮೋದಿ.

ಬೆಂಗಳೂರು: ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದ್ದು, ಕಾಂಗ್ರೆಸ್-ಜೆಡಿಎಸ್'ನಿಂದ ಅದು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿರುವ ಅವರು, ಬಿಜೆಪಿ ಸಮಾವೇಶದಲ್ಲಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ.

ಚಿನ್ನದ ನಾಡು ಕೋಲಾರದಲ್ಲಿ ಜನರು ಸೇರಿರುವುದು ಕಾಂಗ್ರೆಸ್​ ಮತ್ತು ಜೆಡಿಎಸ್​ ನಿದ್ದೆಗೆಡಿಸುತ್ತದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಅಡ್ಡಿಯುಂಟು ಮಾಡುತ್ತಿದ್ದು, ಸಾರ್ವಜನಿಕರು ಈ ಪಕ್ಷಗಳನ್ನು ಕ್ಲೀನ್ ಬೌಲ್ಡ್ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಭ್ರಷ್ಟ ಸರಕಾರದಿಂದ ಕರ್ನಾಟಕದ ಜನತೆಯನ್ನು ರಕ್ಷಿಸಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಹೇಳಿದರು.

ಈ ಚುನಾವಣೆ ಬಾರಿಯ ಚುನಾವಣೆ ಬರೀ ಶಾಸಕರ ಆಯ್ಕೆ, ಮುಖ್ಯಮಂತ್ರಿ ಮಾಡಲು ಚುನಾವಣೆಯಷ್ಟೇ ಅಲ್ಲ. ಮುಂದಿನ 25 ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ. ಅಸ್ತಿರ ಸರ್ಕಾರವಿದ್ದರೇ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅಸ್ತಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್​ ಮತ್ತು ಜೆಡಿಎಸ್​​ ಪಕ್ಷಗಳನ್ನು ಅಧಿಕಾರದಿಂದ ದೂರವಿಡೋಣ ಎಂದು ತಿಳಿಸಿದರು.

ದಶಕದಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿಗೆ ನೀಡುವ ನಿಮ್ಮ ಒಂದು ಮತದಿಂದ ಸಾಕಷ್ಟು ಬದಲಾವಣೆಗಳಾಗುತ್ತವೆ. ಬಹುಮತದ ಒಂದು ಸರ್ಕಾರ ಅಧಿಕಾರಕ್ಕೆ ಬಂದರೇ ಸಾಕಷ್ಟು ಬದಲಾವಣೆಯಾಗುತ್ತದೆ. ನಮ್ಮ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಕ್ಕಿದೆ. ಕೊರೋನಾ ಕಾಲದಲ್ಲಿ ನಾವು ಮಾಡಿದ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ವ್ಯಾಕ್ಸಿನೇಷನ್​ ಮೂಲಕ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ ಎಂದರು.

ಕರ್ನಾಟಕವನ್ನು ನಂ.1 ರಾಜ್ಯವಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ. ಡಬಲ್​ ಇಂಜಿನ್​ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ದಿಯಾಗುತ್ತದೆ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್​ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್​ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್​ನಂತಹ ಗುಜರಿ ಇಂಜಿನ್​​ನಿಂದ ಅಭಿವೃದ್ದಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಡಬಲ್​ ಇಂಜಿನ್​ ಸರ್ಕಾರದ ಮೂಲಕ ಕೋಲಾರಕ್ಕೆ ಅನೇಕ ಕೈಗಾರಿಕೆಗಳು ಬರುತ್ತಿವೆ. ಮುಳಬಾಗಿಲಿನ ದೋಸೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್​ನ ಸುಳ್ಳು ಗ್ಯಾರೆಂಟಿ ಯೋಜನೆ ಜಾರಿಗೆ ಬರುವುದಿಲ್ಲ. 2005 ರಿಂದ 2014ರವರೆಗೂ 10 ವರ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಕಾಂಗ್ರೆಸ್​ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ನೀಡುತ್ತೇವೆ ಎಂದು ಆಶ್ವಾಸನೆ  ನೀಡಿತ್ತು. ಆದರೆ, ಅನೇಕ ಹಳ್ಳಿಗಳು ವಿದ್ಯುತ್​ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆದವು. ಕಾಂಗ್ರೆಸ್​ ದೇಶದ ಜನಕ್ಕೆ ಮೋಸ ಮಾಡಿದೆ. ನಂತರ ನಾವು ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್​ ಪೂರೈಸಿದ್ದೆವು ಎಂದರು.

2004ರಲ್ಲಿ ಹೊರಡಿಸಿದ ಪ್ರಣಾಳಿಕೆಯಂತೆ ಕಾಂಗ್ರೆಸ್ ನಡೆಯಲಿಲ್ಲ. ಭರವಸೆಗಳನ್ನು ಈಡೇರಿಸಲಿಲ್ಲ. ಜನರಿಗೆ ಮೋಸ ಮಾಡಿತು. ಆದರೆ, ನಾವು ಅಧಿಕಾರಕ್ಕೆ ಬಂದ ಮೇಲೆ ಕಿಸಾನ್​ ಸಮ್ಮಾನ್​ ಯೋಜನೆ ಜಾರಿಗೆ ತಂದೆವು. ಇದರಿಂದ ಅನೇಕ ರೈತರಿಗೆ ಅನುಕೂಲವಾಗಿದೆ. ಕಾಂಗ್ರೆಸ್​ ಎಂದಿಗೂ ರೈತರ ಬಗ್ಗೆ ಆಲೋಚಿಸಲಿಲ್ಲ. ನಾವು ರೈತರು ಬಿತ್ತುವ ಬೀಜದಿಂದ ವ್ಯಾಪಾರದವರೆಗೆ ಚಿಂತನೆ ನಡೆಸಿದ್ದೇವೆ. ಪಿಎಂ ಕಿಸಾನ್​ ಸಮ್ಮಾನ ಯೋಜನೆ ಮೂಲಕ ರೈತರ ಖಾತೆಗೆ ನೇರವಾಗಿ ಹಣ ತಲುಪಿಸುತ್ತಿದ್ದೇವೆ.

ಕಾಂಗ್ರೆಸ್​ನ ರಾಜಪರಿವಾರ ಜನರ ವಿಶ್ವಾಸವನ್ನು ನಾಶಪಡಿಸುತ್ತಾ ಬಂದಿದ್ದಾರೆ. ರೈತರಿಗೆ ದೊರೆಯಬೇಕಾಗಿದ್ದ ಶೇ.80 ರಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ 85% ಕಮಿಷನ್ ನಡೆಯುತ್ತಿತ್ತು. ಇದನ್ನು ಬಿಜೆಪಿ ಆರೊಪ ಮಾಡುತ್ತಿಲ್ಲ, ಸ್ವತ: ಕಾಂಗ್ರೆಸ್​ನ ಪ್ರಧಾನಿಮಂತ್ರಿಗಳೇ ಹೇಳಿದ್ದಾರೆ. ಇಂತಹ ಕಾಂಗ್ರೆಸ್​ ಸರ್ಕಾರ ಕರ್ನಾಟಕದ ಅಭಿವೃದ್ದಿ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಬಡವರು, ಎಸ್​ಟಿ, ಎಸ್​ಸಿ, ಮಹಿಳೆಯರೊಂದಿಗೆ ಅನ್ಯಾಯ ಮಾಡಿದೆ. ಇವರೊಂದಿಗೆ ಘೋಷಣೆ ನಡೆದಿದೆ. ಆದ್ರೆ ಬಿಜೆಪಿ ಬಂದ ನಂತರ ಕೋಟ್ಯಾಂತ ಮನೆಗಳನ್ನು ನಾವು ಹಿಂದುಳಿದ ವರ್ಗದವರಿಗೆ ನೋಡಿದ್ದೇವೆ. 10 ಕೋಟಿಗೂ ಹೆಚ್ಚು ಮನೆಗಳಿಗೆ ಶೌಚಾಲ್ಯ ನೀಡಿದ್ದೇವೆ. 9 ಕೋಟಿ ಮಂದಿಗೆ ಅನಿಲ ಗ್ಯಾಸ್ ನೀಡಿದ್ದೇವೆ. ಎರಡೂವರೆ ಕೋಟಿ ಮನೆಗಳಿಗೆ ವಿದ್ಉತ್ ಪೂರೈಸಿದೆ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮ ಆ ಒಂದು ವೋಟಿನಿಂದ. ನೀವು ಒಂದೇ ಒಂದು ವೋಟಿನಿಂದ ನ್ಯಾಯ ಸಿಕ್ಕಿದೆ.

ಕಾಂಗ್ರೆಸ್​ನವರು ಭಷ್ಟಾಚಾರ ವಿರುದ್ಧ ಯಾವುದೇ ಕಾರ್ಯಕ್ರಮಗಳನ್ನು ಜಾರಿಗೆ ತಂದಿಲ್ಲ. ಏಕೆಂದರೆ ಕಾಂಗ್ರೆಸ್'ನ ಪ್ರತಿಯೊಂದು ಯೋಜನೆಯಲ್ಲಿ ಭ್ರಷ್ಟಾಚಾರ ಇದೆ. ಆ ರಾಜಪರಿವಾರ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ. ಜೈಲಿಗೆ ಹೋಗಬೇಕಾದವರು ಬೇಲ್​ನಲ್ಲಿದ್ದಾರೆ. ಕಾಂಗ್ರೆಸ್​ನ ಸಾಕಷ್ಟು ನಾಯಕರು ಭ್ರಷ್ಟಾಚಾರದ ಆರೋಪದ ಮೇಲೆ ಬೇಲ್​​ನಲ್ಲಿದದ್ದಾರೆ.  ನಾವು ಅಧಿಕಾರಕ್ಕೆ ಬಂದಮೇಲೆ ಭ್ರಷ್ಟಾಚಾರಿಗಳಿಂದ ವಸೂಲಿ ಮಾಡಿದ ಹಣ 1 ಲಕ್ಷ ಕೋಟಿ ರೂ. ನಾವು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಂಡಿದ್ದೇವೆಂದು ಹೇಳಿದರು.

ಇದೇ ವೇಳೆ ನನ್ನ ವೈಯಕ್ತಿಕ ಕಾರ್ಯವೊಂದನ್ನು ಮಾಡುತ್ತೀರಾ ಎಂದು ನೆರೆದಿದ್ದವರನ್ನು ಕೇಳಿದ ಮೋದಿಯವರು, ಪ್ರತೀ ಮನೆಗೂ ಭೇಟಿ ನೀಡಿ ನನ್ನ ನಮಸ್ಕಾರ ತಿಳಿಸಿ, ಮೋದಿಯವರಿಗೆ ಆಶೀರ್ವಾದ ಮಾಡುವಂತೆ ತಿಳಿಸಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com