ಅಯ್ಯೋ ಕಂದಾ... ಮೊಬೈಲ್​ ಚಾರ್ಜರ್​ ಕಚ್ಚಿ 8 ತಿಂಗಳ ಹಸುಗೂಸು ದಾರುಣ ಸಾವು

ಮೊಬೈಲ್ ಚಾರ್ಜರ್‌ನಿಂದ ಕರೆಂಟ್​ ಶಾಕ್ ತಗುಲಿ 8 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿದ್ದರ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ 8 ತಿಂಗಳ ಮಗು ಸಾನಿಧ್ಯ
ಮೃತಪಟ್ಟ 8 ತಿಂಗಳ ಮಗು ಸಾನಿಧ್ಯ
Updated on

ಕಾರವಾರ: ಮೊಬೈಲ್ ಚಾರ್ಜರ್‌ನಿಂದ ಕರೆಂಟ್​ ಶಾಕ್ ತಗುಲಿ 8 ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿದ್ದರ ಗ್ರಾಮದಲ್ಲಿ ನಡೆದಿದೆ.

ಸಿದ್ದರ ಗ್ರಾಮದ ಸಂತೋಷ್ ಕಲ್ಗುಟ್ಕರ್, ಸಂಜನಾ ದಂಪತಿಯ 8 ತಿಂಗಳ ಸಾನಿಧ್ಯ ಮೃತಪಟ್ಟ ಮಗು. ಪೋಷಕರು ಮನೆಯಲ್ಲಿ ಮೊಬೈಲ್​ ಚಾರ್ಜ್​​ ಮಾಡಿಕೊಂಡು ಬಟನ್​ ಆಫ್ ಮಾಡದೆ ಹಾಗೇ ಬಿಟ್ಟಿದ್ದಾರೆ.

ಆಟ ಆಡಿಕೊಂಡಿದ್ದ ಮಗು ಚಾರ್ಜರ್​ನ ವೈರ್​ ಅನ್ನು ಬಾಯಲ್ಲಿ ಇಟ್ಟುಕೊಂಡಿದೆ. ಇದರಿಂದ ತಕ್ಷಣ ಕರೆಂಟ್​ ಶಾಕ್​ ತಗುಲಿದ್ದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಸದ್ಯ ಮಗು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಯು ಕಾರವಾರ ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com