ರಾಜ್ಯದ ಪ್ರತಿಷ್ಠಿತ ಮಾನಸಿಕ ಆರೋಗ್ಯ ಸಂಸ್ಥೆ 'ನಿಮ್ಹಾನ್ಸ್' 2017 ರಿಂದ ನೋಂದಣಿ ಇಲ್ಲದೆಯೆ ಕಾರ್ಯನಿರ್ವಹಣೆ!

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವು (KSMHA) ದೇಶದ ಪ್ರಧಾನ ಮಾನಸಿಕ ಆರೋಗ್ಯ ಸಂಸ್ಥೆ ನಿಮ್ಹಾನ್ಸ್‌ಗೆ ಶಾಶ್ವತ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. 
ನಿಮ್ಹಾನ್ಸ್
ನಿಮ್ಹಾನ್ಸ್
Updated on

ಬೆಂಗಳೂರು: ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರವು (KSMHA) ದೇಶದ ಪ್ರಧಾನ ಮಾನಸಿಕ ಆರೋಗ್ಯ ಸಂಸ್ಥೆ ನಿಮ್ಹಾನ್ಸ್‌ಗೆ ಶಾಶ್ವತ ನೋಂದಣಿ ಪ್ರಮಾಣಪತ್ರವನ್ನು ಸಲ್ಲಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. 

ಮಾನಸಿಕ ಆರೋಗ್ಯ ಕಾಯಿದೆ 2017 ರ ಅಡಿಯಲ್ಲಿ ಕಡ್ಡಾಯವಾಗಿ ಮಾನಸಿಕ ಆರೋಗ್ಯ ಸ್ಥಾಪನೆಯ ಪ್ರಮಾಣಪತ್ರವನ್ನು ನಿಮ್ಹಾನ್ಸ್ ಸಂಸ್ಥೆ ಇನ್ನೂ ಪಡೆದಿಲ್ಲ. ಇಲ್ಲಿ ದಿನಕ್ಕೆ ಹತ್ತಾರು, ನೂರಾರು ನರಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ, ನಿಮ್ಹಾನ್ಸ್ ಇನ್ನೂ ಮಾನಸಿಕ ಆರೋಗ್ಯ ಕೇಂದ್ರ ಎಂದು ನೋಂದಾಯಿಸಿಕೊಳ್ಳದಿರುವುದು ಕಾಯ್ದೆಯಡಿ ಗಂಭೀರ ಲೋಪವಾಗಿದೆ. ನಿಮ್ಹಾನ್ಸ್ ನೋಂದಣಿಯಿಂದ ವಿನಾಯಿತಿ ಪಡೆಯಲು ಪ್ರಯತ್ನಿಸಿದ್ದು ಅದು ದಕ್ಕಿಲ್ಲ ಎಂದು ತಿಳಿಸಿದೆ.

ಸಮಸ್ಯೆಯ ಅಗಾಧತೆ ಬಗ್ಗೆ ಮಾತನಾಡಿದ ಬೆಂಗಳೂರು ಮತ್ತು ಮೈಸೂರು ವಿಭಾಗದ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಯ ಅಧ್ಯಕ್ಷ, ಬೆಂಗಳೂರಿನ ನಿವೃತ್ತ ಜಿಲ್ಲಾ ನ್ಯಾಯಾಧೀಶ ನಿಯಾಜ್ ಅಹಮದ್ ಎಸ್ ದಫೇದಾರ್, ಆಗಸ್ಟ್ 1, 2023 ರಂದು ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ನಿಮ್ಹಾನ್ಸ್ ಸಂಸ್ಥೆಯು ತನ್ನ ನೋಂದಣಿ ಪ್ರಕ್ರಿಯೆಯ ಬಗ್ಗೆ ವ್ಯತಿರಿಕ್ತ ಮಾಹಿತಿಯನ್ನು ಲಿಖಿತ ವಿವರಣೆಗಳ ಸರಣಿಯ ಮೂಲಕ ಪ್ರಾಧಿಕಾರಕ್ಕೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. 

ಪರಿಶೀಲನಾ ಮಂಡಳಿಯು ಅಕ್ಟೋಬರ್ 19, 2022ರಂದು ನೋಂದಾವಣೆ ಮಾಡದಿದ್ದಕ್ಕಾಗಿ ವಿವರಣೆಯನ್ನು ಕೋರಿ ಶೋಕಾಸ್ ನೋಟಿಸ್ ನೀಡಿದೆ. ನವೆಂಬರ್ 2, 2022 ರಂದು ಪತ್ರವೊಂದರಲ್ಲಿ ನಿಮ್ಹಾನ್ಸ್, 2017 ರ ಮಾನಸಿಕ ಆರೋಗ್ಯ ರಕ್ಷಣಾ ಕಾಯಿದೆಯ ಸೆಕ್ಷನ್ 65 (2) ರ ಅಡಿಯಲ್ಲಿ ನೋಂದಣಿಯಿಂದ ಕೇಂದ್ರೀಯ ಮಾನಸಿಕ ಆರೋಗ್ಯ ಪ್ರಾಧಿಕಾರದಿಂದ (CMHA) ವಿನಾಯಿತಿಯನ್ನು ಕೋರಿದೆ ಎಂದು ಪ್ರಾಧಿಕಾರಕ್ಕೆ ತಿಳಿಸಿದೆ.

ನೋಂದಣಿಗಾಗಿ ಅರ್ಜಿ ಸಲ್ಲಿಸಲಾಗಿದೆ, ಶೀಘ್ರದಲ್ಲೇ ಸಿಗುವ ಭರವಸೆ ಇದೆ: ನಿಮ್ಹಾನ್ಸ್‌ಗೆ ನೋಂದಣಿಯಿಂದ ವಿನಾಯಿತಿ ನೀಡಲು ಕೇಂದ್ರ ಮಾನಸಿಕ ಆರೋಗ್ಯ ಪ್ರಾಧಿಕಾರ(CMHA)ಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅಧ್ಯಕ್ಷರ ಪತ್ರದಲ್ಲಿ ತಿಳಿಸಲಾಗಿದೆ. ವಿನಾಯಿತಿಗಳನ್ನು ಕೇಂದ್ರ ಸರ್ಕಾರದ ಅಧಿಕೃತ ಗೆಜೆಟ್‌ನಲ್ಲಿ ಮಾತ್ರ ಸೂಚಿಸಬಹುದು.

ನಂತರ, ನಿಮ್ಹಾನ್ಸ್ ತಾನು ವಿನಾಯಿತಿಯನ್ನು ಕೋರಿಲ್ಲ ಆದರೆ ಮಾನಸಿಕ ಆರೋಗ್ಯ ಕಾಯಿದೆಯ ಸೆಕ್ಷನ್ 66 (12) ಅಡಿಯಲ್ಲಿ ಶಾಶ್ವತ ನೋಂದಣಿಗೆ ಅರ್ಜಿ ಸಲ್ಲಿಸಿದೆ ಎಂದು ಹೇಳುವ ದಾಖಲೆಗಳನ್ನು ಸಲ್ಲಿಸಿತು. ಆದರೆ, ಕೇಂದ್ರ ಮಾನಸಿಕ ಆರೋಗ್ಯ ಪ್ರಾಧಿಕಾರದಿಂದ ಸಿ ನಮೂನೆಯ ಸ್ವೀಕೃತಿ ಕಾಣೆಯಾಗಿದೆ ಎಂದು ಮಂಡಳಿ ತನ್ನ ಪತ್ರದಲ್ಲಿ ತಿಳಿಸಿದೆ.

ನಿಮ್ಹಾನ್ಸ್ ನೀಡಿರುವ ಆವೃತ್ತಿಗಳು ವಿರೋಧಾತ್ಮಕವಾಗಿವೆ ಎಂದು ಮಂಡಳಿ ಹೇಳಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಪ್ರತಿಮಾ, ನಾವು ಇತ್ತೀಚೆಗೆ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದೇವೆ. ನೋಂದಣಿ ಇಲ್ಲದಿರುವುದು ರೋಗಿಗಳ ಆರೈಕೆಗೆ ಅಡ್ಡಿಯಾಗಿಲ್ಲ. ಹಿಂದಿನ ಮಾನಸಿಕ ಆರೋಗ್ಯ ಕಾಯಿದೆ ಜಾರಿಯಲ್ಲಿರುವುದರಿಂದ ನಾವು ಈ ಹಿಂದೆ ವಿನಾಯಿತಿ ಕೋರಿದ್ದೆವು ಎನ್ನುತ್ತಾರೆ.

ನಿಮ್ಹಾನ್ಸ್ ಯಾವಾಗ ಪ್ರಮಾಣಪತ್ರವನ್ನು ಪಡೆಯುತ್ತದೆ ಎಂಬುದರ ಕುರಿತು, ನಿಮ್ಹಾನ್ಸ್‌ನ ಅಧೀಕ್ಷಕ ಕೆ ಮುರಳೀಧರನ್, ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ನೋಂದಣಿ ಸಂಖ್ಯೆಯನ್ನು ಪಡೆಯುತ್ತೇವೆ. ಆದರೆ ಅರ್ಜಿ ಸಲ್ಲಿಸಿದ್ದು ಯಾವಾಗ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು. 

“ನಾವು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ (INI) ವರ್ಗದ ಅಡಿಯಲ್ಲಿ ಬರುತ್ತೇವೆ. ಆದ್ದರಿಂದ ವಿನಾಯಿತೆ ಕೋರಿದೆವು. ನಿಮ್ಹಾನ್ಸ್ ತನ್ನ ಕ್ಯಾಂಪಸ್‌ನಲ್ಲಿ ಒಂದು ವರ್ಷದ ಹಿಂದೆ ಮಂಡಳಿಗೆ ಸ್ಥಳಾವಕಾಶವನ್ನು ಒದಗಿಸಿದೆ ಎಂದು ಡಾ ಪ್ರತಿಮಾ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com