ಮಂಗಳೂರು: ತೆಂಗಿನ ಮರದಿಂದ ಬಿದ್ದು 30 ವರ್ಷದ ಮಹಿಳೆ ಸಾವು!
ದಕ್ಷಿಣ ಕನ್ನಡ ಜಿಲ್ಲೆಯ ಪುಂಚಪ್ಪಾಡಿ ಗ್ರಾಮದಲ್ಲಿ 30 ವರ್ಷದ ಮಹಿಳೆಯೊಬ್ಬರು ತೆಂಗಿನ ಮರ ಹತ್ತುವ ಮತ್ತು ತೆಂಗಿನಕಾಯಿ ಕೀಳುವ ಪರಿಣತಿಗೆ ಹೆಸರುವಾಸಿಯಾಗಿದ್ದು, ಬುಧವಾರ ಕೆಲಸ ಮಾಡುವಾಗ ಮರದಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Published: 10th August 2023 11:12 AM | Last Updated: 10th August 2023 11:16 AM | A+A A-

ಸುಚಿತ್ರಾ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುಂಚಪ್ಪಾಡಿ ಗ್ರಾಮದಲ್ಲಿ 30 ವರ್ಷದ ಮಹಿಳೆಯೊಬ್ಬರು ತೆಂಗಿನ ಮರ ಹತ್ತುವ ಮತ್ತು ತೆಂಗಿನಕಾಯಿ ಕೀಳುವ ಪರಿಣತಿಗೆ ಹೆಸರುವಾಸಿಯಾಗಿದ್ದು, ಬುಧವಾರ ಕೆಲಸ ಮಾಡುವಾಗ ಮರದಿಂದ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಡಬ ತಾಲ್ಲೂಕಿನ ಸವಣೂರು ಸಮೀಪದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸುಚಿತ್ರಾ ಎಂದು ಗುರುತಿಸಲಾಗಿದೆ. ಅವರಿಗೆ ಪತಿ ಮತ್ತು ಇಬ್ಬರು ಮಕ್ಕಳು ಇದ್ದಾರೆ.
ಸುಚಿತ್ರಾ ಅವರು ತೆಂಗಿನ ಮರ ಹತ್ತುವ ಅವರ ಸಾಧನೆಯನ್ನು ಗುರುತಿಸಿ ವಿವಿಧ ಸಂಸ್ಥೆಗಳು ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.