ದಕ್ಷಿಣ ಭಾರತದ ಅತಿ ಎತ್ತರದ ರೈಲು-ರಸ್ತೆ ಮೇಲ್ಸೇತುವೆ ಸಿದ್ದ; ಆದರೂ ಸಾರ್ವಜನಿಕ ಬಳಕೆಗೆ ಅಲಭ್ಯ!

ಜಯದೇವ ಇಂಟರ್‌ಸೆಕ್ಷನ್‌ನಲ್ಲಿರುವ ಮಾರೇಹನಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಅತಿ ಎತ್ತರದ ರೈಲು ಮತ್ತು ರಸ್ತೆ ಮಾರ್ಗ ಮೇಲ್ಸೇತುವೆ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಯದೇವ ಇಂಟರ್‌ಸೆಕ್ಷನ್‌ನಲ್ಲಿರುವ ಮಾರೇಹನಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ದಕ್ಷಿಣ ಭಾರತದ ಅತಿ ಎತ್ತರದ ರೈಲು ಮತ್ತು ರಸ್ತೆ ಮಾರ್ಗ ಮೇಲ್ಸೇತುವೆ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಅಂತಿಮ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. 

ಆದಾಗ್ಯೂ, ಬೆಂಗಳೂರಿನ ಅತಿದೊಡ್ಡ ದಟ್ಟಣೆ ಪ್ರದೇಶಗಳಲ್ಲಿ ಒಂದಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚಾರವನ್ನು ಸುಗಮಗೊಳಿಸುವ ಸಾಮರ್ಥ್ಯವು ಸದ್ಯಕ್ಕೆ ಕಾರ್ಯರೂಪಕ್ಕೆ ಬರುವುದಿಲ್ಲ. ಈ ಮಾರ್ಗದ ರ್ಯಾಂಪ್ ಗಳು ಸಿದ್ಧವಾಗದ ಹೊರತು, ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಮೆಟ್ರೋ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ನಿಂದ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಆರ್ ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಲೈನ್ (ರೀಚ್ -5) ಗೆ ಸಂಬಂಧಿಸಿದಂತೆ ಈ ಮೇಲ್ಸೇತುವೆ ಸಂಚಾರವನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಮೇಲ್ಸೇತುವೆ ನೆಲಮಟ್ಟದಿಂದ ಎರಡು ಪದರಗಳನ್ನು ಹೊಂದಿದ್ದು, ಮೊದಲ ಹಂತವು ನಾಲ್ಕು ಲೇನ್‌ಗಳನ್ನು ಹೊಂದಿದ್ದರೆ, ಎರಡನೇ ಹಂತವು ಮೆಟ್ರೋ ಟ್ರ್ಯಾಕ್‌ಗಳನ್ನು ಹೊಂದಿರುತ್ತದೆ. ಮೇಲ್ಸೇತುವೆ ಮೇಲಿನ ಉದ್ದವು 3.2 ಕಿಲೋ ಮೀಟರ್  ಸಾಗುತ್ತದೆ, ಅದರ ಎತ್ತರವು 31 ಮೀಟರ್‌ಗಳಿಗೆ ಎತ್ತರವಾಗಿರುತ್ತದೆ. 

ಇದು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾಗಿದೆ. ಸದ್ಯಕ್ಕೆ ಮೇಲ್ಸೇತುವೆ ಸಿದ್ಧವಾಗಿದ್ದರೂ, ರ‍್ಯಾಂಪ್‌ಗಳ ನಿರ್ಮಾಣ ವಿಳಂಬವಾಗಿರುವುದರಿಂದ ಮಾರ್ಗದ ಆರಂಭಕ್ಕೂ ಮುನ್ನವೇ ಅದನ್ನು ತೆರೆಯಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸಿದ್ಧವಾದಾಗ, ಇದು HSR ಲೇಔಟ್ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ವಾಹನ ಸವಾರರಿಗೆ ಸುಗಮ ಪ್ರವೇಶವನ್ನು ಒದಗಿಸುತ್ತದೆ.

ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ಹೊರ ವರ್ತುಲ ರಸ್ತೆಯಲ್ಲಿನ ವಿಳಂಬ ಯೋಜನೆಯ ಗುತ್ತಿಗೆಯನ್ನು ನೀಡಲಾಯಿತು. ಕೆಲಸ ಪೂರ್ಣಗೊಳಿಸಬೇಕಿದ್ದ ಹಿಂದಿನ ಗುತ್ತಿಗೆದಾರರು ಕೈಬಿಟ್ಟಿದ್ದಾರೆ. ಇದನ್ನು ಮರು ಟೆಂಡರ್ ಮಾಡಲಾಗಿದೆ ಮತ್ತು ಅಫ್ಕಾನ್ಸ್ ಅದನ್ನು ನಡೆಸುತ್ತಿದೆ. ಆದಾಗ್ಯೂ, ಆರಂಭ ವಿಳಂಬವಾಗಿರುವುದರಿಂದ ಪೂರ್ಣಗೊಳಿಸಲು ಸಮಯ ತೆಗೆದುಕೊಳ್ಳುತ್ತದೆ.

ಹಿರಿಯ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗೆ ಮಾಹಿತಿ ನೀಡಿ, ಬಿಎಂಆರ್ ಸಿಎಲ್ ನ್ನು ಮೊದಲ ಆದ್ಯತೆಯಲ್ಲಿ ಕೆಲಸ ಮಾಡಲು ಕೇಳಿಕೊಂಡಿದ್ದಾರೆ. ಬಿಟಿಎಂ ಲೇಔಟ್‌ನಿಂದ ಹೊರ ವರ್ತುಲ ರಸ್ತೆಯ ಕಡೆಗೆ ಹೋಗುವ ರ‍್ಯಾಂಪ್ ನ್ನು ಐಟಿ ವೃತ್ತಿಪರರು ಹೆಚ್ಚಾಗಿ ಬಳಸುತ್ತಾರೆ. ಅದು ಪೂರ್ಣಗೊಂಡಾಗ  ಸುಗಮ ಸಂಚಾರ ಸಾಧ್ಯವಾಗಬಹುದು. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಹೊಸೂರು ಕಡೆಗೆ ವಾಹನಗಳನ್ನು ತೆಗೆದುಕೊಂಡು ಹೋಗುವ ವಾಹನಗಳನ್ನು ಈ ಕಡೆ ತಿರುಗಿಸುತ್ತದೆ. ಇದು ಪ್ರಯಾಣ ಸಮಯವನ್ನು 100 ಸೆಕೆಂಡುಗಳಷ್ಟು ಉಳಿತಾಯ ಮಾಡುತ್ತದೆ. ಸಿಗ್ನಲಿಂಗ್‌ನ ನಾಲ್ಕು ಹಂತಗಳನ್ನು ಎರಡಕ್ಕೆ ಇಳಿಸುತ್ತದೆ ಎಂದು ಹೇಳಿದರು.

ಟ್ರಾಫಿಕ್ ಪೊಲೀಸರು ಮೆಟ್ರೋಗೆ ಎಲ್ಲಾ ಸಹಕಾರವನ್ನು ನೀಡುತ್ತಿದ್ದಾರೆ, ಇದರಿಂದಾಗಿ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬಹುದು ಎಂದರು. ಅಫ್ಕಾನ್ಸ್ ಸಂಸ್ಥೆಯವರನ್ನು ಕೇಳೋಣವೆಂದರೆ ಫೋನ್ ಕರೆಗೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com