ಲೋಕಸಭೆ ಚುನಾವಣೆ ಬಳಿಕೆ ಮೋದಿ ಅಲ್ಲ... ದೇಶಕ್ಕೆ ಮಹಿಳಾ ಪ್ರಧಾನಿ: ನೊಣವಿನಕೆರೆ ಗುರೂಜಿ ಭವಿಷ್ಯ

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು, ಬಿಜೆಪಿ ಕೂಡ ನರೇಂದ್ರ ಮೋದಿ ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಪ್ರದರ್ಶಿಸಿರುವಂತೆಯೇ ಲೋಕಸಭೆ ಚುನಾವಣೆ ಬಳಿಕ ಮಹಿಳೆಯೊಬ್ಬರು ದೇಶದ ಪ್ರಧಾನಿಯಾಗಲಿದ್ದಾರೆ ಎಂದು ತಿಪಟೂರಿನ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ತಿಪಟೂರು: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು, ಬಿಜೆಪಿ ಕೂಡ ನರೇಂದ್ರ ಮೋದಿ ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಪ್ರದರ್ಶಿಸಿರುವಂತೆಯೇ ಲೋಕಸಭೆ ಚುನಾವಣೆ ಬಳಿಕ ಮಹಿಳೆಯೊಬ್ಬರು ದೇಶದ ಪ್ರಧಾನಿಯಾಗಲಿದ್ದಾರೆ ಎಂದು ತಿಪಟೂರಿನ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆ ಸಂಭವಿಸಲಿದ್ದು, ಮುಂದಿನ ಬಾರಿ ದೇಶದ ಚುಕ್ಕಾಣಿ ಮಹಿಳೆಯ ಕೈಗೆ ಹೋಗಲಿದೆ. ಮಹಿಳೆ ದೇಶವನ್ನು ಆಳ್ತಾಳೆ. ಮಾರ್ಚ್‌ ತಿಂಗಳ ಬಳಿಕ ಇದು ಶತಃಸಿದ್ಧ ಎಂದು ತಿಪಟೂರಿನ ನೊಣವಿನಕೆರೆಯ ಶನಿ ದೇಗುಲದ ಕಾಲಜ್ಞಾನಿ ಡಾ ಯಶವಂತ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಈ ಮೂಲಕ ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲ್ಲ, ಇಂದಿರಾ ಗಾಂಧಿ ಬಳಿಕ ರಾಷ್ಟ್ರ ರಾಜಕಾರಣದ ಚುಕ್ಕಾಣಿಯನ್ನು ಈ ಬಾರಿ ಮಹಿಳೆ ಹಿಡಿಯಲಿದ್ದಾಳೆ. ಮಹಾಶಿವರಾತ್ರಿ ಹಬ್ಬದ ಬಳಿಕ ಶಕ್ತಿ ಸ್ವರೂಪವಾದ ಮಹಿಳೆ ದೇಶವನ್ನು ಆಳ್ತಾಳೆ ಎಂದು  ಕಾಲಜ್ಞಾನದ ಭವಿಷ್ಯವಾಣಿ ಭವಿಷ್ಯವನ್ನು ಹೇಳುತ್ತಿದೆ. 35 ವರ್ಷಗಳ ಹಿಂದೆ ದೇಶವನ್ನು ಮಹಿಳೆ ಆಳಿದ್ದಳು ಎಂದು ಹೇಳಿದ್ದಾರೆ.

ಮಹಾಶಿವರಾತ್ರಿ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಕಾಲಜ್ಞಾನ ಭವಿಷ್ಯದ ಪ್ರಕಾರ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲ. ಅತಂತ್ರ ಪರಿಸ್ಥಿತಿ ಆಗುತ್ತದೆ. ಮಿತ್ರಪಕ್ಷಗಳ ಸಹಾಯದಿಂದ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಯೋಗವಿರುವ ಸ್ತ್ರೀ ಯಾರೆಂದು ಮಕರ ಸಂಕ್ರಾಂತಿಯಂದು ಹೇಳಲಾಗುತ್ತದೆ. ಈಗಿನ ಸಂವಸ್ತರದ ಫಲಾಫಲಗಳನ್ನು ನೋಡಿದಾಗ ಓರ್ವ ಸ್ತ್ರೀ ದೇಶ ಆಳುತ್ತಾಳೆ. ಯಾರು ಮುಂದಿನ ಪ್ರಧಾನಿ ಆಗಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಸಂಕ್ರಾಂತಿಯ ಕಾಲಜ್ಞಾನದವರೆಗೂ ಕಾಯಲೇಬೇಕು ಎಂದು ಶ್ರೀಗಳು ಹೇಳಿದ್ದಾರೆ.

ಶಿವರಾತ್ರಿ ಒಳಗಡೆ ಚುನಾವಣೆ ನಡೆದರೆ ಮೋದಿಗೆ ಪ್ರಧಾನಿ ಪಟ್ಟ!
ಇದೇ ವೇಳೆ ಮಹಾಶಿವರಾತ್ರಿ ಹಬ್ಬದ ಒಳಗೆ ಲೋಕಸಭೆ ಚುನಾವಣೆ ನಡೆದರೆ ನರೇಂದ್ರ ಮೋದಿಗೆ ಪ್ರಧಾನಿ ಆಗುವ ಅವಕಾಶವಿದೆ. ಮಾರ್ಚ್ ನಂತರ ಚುನಾವಣೆ ನಡೆದರೆ ಬೇರೆ ಪಕ್ಷ ಅಧಿಕಾರಕ್ಕೆ ಬರುತ್ತದೆ. ಓರ್ವ ಮಹಿಳೆಗೆ ಪ್ರಧಾನಿ ಆಗುವ ಯೋಗವಿದೆ. ಇಂತಹದ್ದೇ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಇಂತಹ ಮಹಿಳೆಯೇ ದೇಶವನ್ನು ಆಳುತ್ತಾರೆ ಎಂದು ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಹೇಳಲಾಗುತ್ತದೆ. ಆ ಮಹಿಳೆ ಯಾವುದೇ ಪಕ್ಷದವರು ಆಗಿರಬಹುದು. ದೇಶವನ್ನು ಆ ಮಹಿಳೆ ಆಳುವುದು ಶತಃಸಿದ್ಧ ಎಂದು ಯಶವಂತ್‌ ಗುರೂಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com