ಲೋಕಾಯುಕ್ತ ದಾಳಿ ವೇಳೆ ಆದಾಯಕ್ಕಿಂತ ಅಧಿಕ ಆಸ್ತಿ ಪತ್ತೆ ; ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮೂರ್ತಿ ಬಂಧನ

ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು, ಈ ವೇಳೆ 3 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ಶ್ರೀನಿವಾಸಮೂರ್ತಿ ಬಂಧನವಾಗಿದೆ.
ಕೆ.ಟಿ ಶ್ರೀನಿವಾಸಮೂರ್ತಿ
ಕೆ.ಟಿ ಶ್ರೀನಿವಾಸಮೂರ್ತಿ

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದ ಮೇರೆಗೆ ಸರ್ವೆ ಸೂಪರ್ ವೈಸರ್ ಕೆ.ಟಿ ಶ್ರೀನಿವಾಸ್ ಮೂರ್ತಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು, ಈ ವೇಳೆ 3 ಕೋಟಿಗೂ ಅಧಿಕ ಆಸ್ತಿ ಪತ್ತೆಯಾಗಿದೆ. ಈ ಸಂಬಂಧ ಲೋಕಾಯುಕ್ತ ಅಧಿಕಾರಿಗಳಿಂದ ಶ್ರೀನಿವಾಸಮೂರ್ತಿ ಬಂಧನವಾಗಿದೆ.

ಕೆ.ಟಿ ಶ್ರೀನಿವಾಸ್​ ಮೂರ್ತಿಗೆ ಸಂಬಂಧಿಸಿದ 14 ಕಡೆ ಲೋಕಾ ರೇಡ್​ ಮಾಡಿದ್ದು, ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ಏಕಕಾಲಕ್ಕೆ ದಾಳಿ ನಡೆಸಿದೆ.  ದಾಳಿ ವೇಳೆ ಲೋಕಾಯುಕ್ತ ಮೂರು ಕೋಟಿಗೂ ಅಧಿಕ ಆಸ್ತಿ ಪಾಸ್ತಿ ಪತ್ತೆ ಹಚ್ಚಿದೆ. ಕೆ ಟಿ ಶ್ರೀನಿವಾಸಮೂರ್ತಿ ಅವರು  ಕೆ ಆರ್ ಪುರ ತಾಲ್ಲೂಕು ಕಚೇರಿಯಲ್ಲಿ ಸರ್ವೇ ಸೂಪರ್ ವೈಸರ್ ಆಗಿದ್ದಾರೆ.

ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ 14 ಕಡೆಗಳಲ್ಲಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಗೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಿದ್ದಾರೆ. ಮನೆ ಯಲ್ಲಿ ಪತ್ತೆಯಾಗಿರುವ ದಾಖಲೆ ಪರಿಶೀಲಿಸಿದಾಗ 5 ಅಬಕಾರಿ ಪರವಾನಗಿ (ಲಿಕ್ಕರ್‌ ಲೈಸೆನ್ಸ್‌) ಹೊಂದಿರುವುದು ಬೆಳಕಿಗೆ ಬಂದಿದೆ.

ಕೆ.ಟಿ ಶ್ರೀನಿವಾಸಮೂರ್ತಿ ಹೆಸರಿನಲ್ಲಿ 5 ಅಬಕಾರಿ ಲೈಸೆನ್ಸ್​ ಪತ್ತೆಯಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 5 ಬಾರ್​ ಲೈಸೆನ್ಸ್​ ಪಡೆದಿದ್ದು,  ದಾಖಲೆ ಪರಿಶೀಲನೆ ನಡೆಸಿದ್ದಾರೆ.  ಹೆಣ್ಣೂರು ನಿವಾಸ, ಅಂಧ್ರಳ್ಳಿ ನಿವಾಸ, ಸಹೋದರಿಯ ನಿವಾಸ, ಪತ್ನಿ ಹೆಸರಿನ ಹೋಟೆಲ್ಸ್ ಬೋರ್ಡಿಂಗ್ ಹೌಸ್​ಗಳ ಮೇಲೂ ​ಲೋಕಾ ರೇಡ್​ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com