ಕೊಡಗಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗುತ್ತಿದೆ ಮಡಹಾಗಲ ಕೃಷಿ: ಕಡಿಮೆ ಖರ್ಚಿನಲ್ಲಿ ಹೆಚ್ಚು ಹಣ ಗಳಿಕೆಗೆ ಅವಕಾಶ!

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಕೃಷಿ ಮೇಲೆ ಪರಿಣಾಮ ಬೀರುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಆದಾಯ ತರುವ ತೋಟಗಾರಿಕೆ ಬೆಳೆಗಳತ್ತ ಕೃಷಿಕರು ಮುಖ ಮಾಡಿದ್ದಾರೆ.
ಮಡಹಾಗಲ ಕೃಷಿ
ಮಡಹಾಗಲ ಕೃಷಿ

ಕೊಡಗು: ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಕೃಷಿ ಮೇಲೆ ಪರಿಣಾಮ ಬೀರುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಆದಾಯ ತರುವ ತೋಟಗಾರಿಕೆ ಬೆಳೆಗಳತ್ತ ಕೃಷಿಕರು ಮುಖ ಮಾಡಿದ್ದಾರೆ.

ಇದೇ ಮಾದರಿಯಲ್ಲಿ ಮಡಹಾಗಲ ಕೃಷಿ ಜಿಲ್ಲೆಯಾದ್ಯಂತ ಆವೇಗ ಪಡೆದುಕೊಳ್ಳುತ್ತಿದೆ ಹಾಗೂ ಚೆಟ್ಟಳ್ಳಿಯಲ್ಲಿರುವ  ಕೇಂದ್ರ ತೋಟಗಾರಿಕೆ ಪ್ರಯೋಗಾಲಯ ಇದನ್ನು ಉತ್ತೇಜಿಸುತ್ತಿದೆ.

ಮಡಹಾಗಲದಲ್ಲಿ ವಿಟಮಿನ್ಸ್ ಗಳು ಅಧಿಕವಾಗಿದ್ದು, ಹಲವು ರೈತರು ಇದನ್ನು ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ರಾಜ್ಯಾದ್ಯಂತ ಹಾಗೂ ಕೇರಳದಲ್ಲಿ ತೋಟಗಾರಿಕೆ ಇಲಾಖೆ 1 ಲಕ್ಷ ಮಡಹಾಗಲ ಸಸಿಗಳನ್ನು ರೈತರಿಗೆ ವಿತರಣೆ ಮಾಡಿದೆ. 

ಪ್ರಯೋಗ ಕೇಂದ್ರದ ವಿಜ್ಞಾನಿಗಳು ಈ ಕೃಷಿಯಿಂದ ಆದಾಯವನ್ನು ಗಳಿಸಬಹುದೆಂಬ ಎಂದು ಭರವಸೆ ನೀಡಿದ್ದಾರೆ.  

ಅಸ್ಸಾಂ ನ ತಳಿಯ ಮಡಹಾಗಲ ಸಸ್ಯಕ್ಕೆ ರಾಜ್ಯದಲ್ಲಿರುವ ತಳಿಯನ್ನು ಕಸಿ ಮಾಡಲಾಗಿದ್ದು, ಪ್ರಯೋಗಾತ್ಮಕವಾಗಿ ಈ ಕಸಿ ಸಸ್ಯಗಳನ್ನು 2008 ರಿಂದ ಬೆಳೆಸಿದ್ದಾರೆ. ಈ  ಬಳಿಕ ಹಲವು ಸಂಶೋಧನೆ ನಡೆಸಲಾಗಿದ್ದು, ಒಂದೇ ಬಳ್ಳಿಯಲ್ಲಿ 5 ರಿಂದ 8 ಕೆಜಿಯಷ್ಟು ಮಡಹಾಗಲ ಬೆಳೆಯಲಿದೆ ಎಂದು ಪ್ರಯೋಗಾಲಯದ ಮೇಲ್ವಿಚಾರಕರಾದ ರಾಜೇಂದ್ರನ್ ಹೇಳಿದ್ದಾರೆ.
 
ಬೆಳೆಯ ಹೊಸ ತಳಿಗಳ ಬಗ್ಗೆ ಈ ಕೇಂದ್ರ ಪ್ರಯೋಗ ನಡೆಸುತ್ತಿದ್ದು, ರೈತರು ಒಂದು ಎಕರೆ ಪ್ರದೇಶದಲ್ಲಿ 3-5 ಟನ್ ನಷ್ಟು ಮಡಹಾಗಲ ಬೆಳೆಯಬಹುದಾಗಿದೆ. ಒಮ್ಮೆ ಈ ಬೆಳೆ ಹಾಕಿದರೆ ಅದು 5 ವರ್ಷಗಳ ಕಾಲ ಫಸಲು ನೀಡಲಿದೆ. ಬೇರೆ ಬೆಳೆಗಳಿಗೆ ಹೋಲಿಕೆ ಮಾಡಿದರೆ ಇದಕ್ಕೆ ಬೇಕಾಗುವ ಪ್ರಾಥಮಿಕ ಹೂಡಿಕೆ ಹಾಗೂ ನಿರ್ವಹಣೆಯ ವೆಚ್ಚ ಕಡಿಮೆ ಇದೆ. ಹಾಗೂ ಒಂದು ಕೆ.ಜಿ ಮಡಹಾಗಲಕ್ಕೆ 100-200 ರೂಪಾಯಿ ಬೆಲೆ ಇದೆ. ಈ ಬೆಳೆಯನ್ನು ಉತ್ತೇಜಿಸುವ ಕೆಲಸವನ್ನು ಸ್ಥಳೀಯ ತೋಟಗಾರಿಕೆ ಇಲಾಖೆ ಮಾಡುತ್ತಿದೆ. 

ಪ್ರತಿ ಸಸಿಯನ್ನು 25 ರೂಪಾಯಿಗಳಿಗೆ ಮಾರಾತ ಮಾಡುತ್ತಿದ್ದು, ಆನ್ ಲೈನ್ ಮೂಲಕವೂ ಪಡೆಯಬಹುದಾಗಿದೆ. ಈ ವರ್ಷ 20,000 ಸಸಿಗಳಿಗೆ ಬೇಡಿಕೆ ಬಂದಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com