ಹೊಸ ವರ್ಷ ಸೋಗಿನಲ್ಲಿ ಸ್ನೇಹಿತರಿಂದಲೇ ಯುವಕನ ಕೊಲೆ
ಹೊಸ ವರ್ಷದ ಸೋಗಿನಲ್ಲಿ ಸ್ನೇಹಿತರಿಂದಲೇ ಯುವಕನೊಬ್ಬನನ್ನು ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ನವೀನ್ ರೆಡ್ಡಿ (28) ಮೃತಪಟ್ಟ ದುರ್ದೈವಿಯಾಗಿದ್ದಾನೆ.
Published: 01st January 2023 05:44 PM | Last Updated: 01st January 2023 05:44 PM | A+A A-

ಸಾಂದರ್ಭಿಕ ಚಿತ್ರ
ಚಿಂತಾಮಣಿ: ಹೊಸ ವರ್ಷದ ಸೋಗಿನಲ್ಲಿ ಸ್ನೇಹಿತರಿಂದಲೇ ಯುವಕನೊಬ್ಬನನ್ನು ಹತ್ಯೆಗೈದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ನವೀನ್ ರೆಡ್ಡಿ (28) ಮೃತಪಟ್ಟ ದುರ್ದೈವಿಯಾಗಿದ್ದಾನೆ.
ನವೀನ್ ರೆಡ್ಡಿ ಚಿಂತಾಮಣಿ ತಾಲೂಕಿನ ದೊಡ್ಡ ಗಂಜೂರು ಗ್ರಾಮದ ನಿವಾಸಿ. ನವೀನ್ ಗೆ ಕಂಠಪೂರ್ತಿ ಕುಡಿಸಿ ಅಮಲಿನಲ್ಲಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರೂ ಕೂಡಾ ಅದೇ ಗ್ರಾಮದ ಸಿದ್ದು, ಕಿರಣ್, ಬೈರಾರೆಡ್ಡಿ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಚಿಂತಾಮಣಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯವೆಸಗಿದ ಬಳಿಕ ಹಂತಕರು ಪೊಲೀಸರಿಗೆ ಶರಣಾಗಿದ್ದಾರೆ. ಈ ಸಂಬಂಧ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.