ಹಂಪಿ: ಮಚ್ಚೆಯುಳ್ಳ ಅಪರೂಪದ ಮರಗೂಬೆ ಪಕ್ಷಿ ಗೋಚರ: ಪಕ್ಷಿ ವೀಕ್ಷಕರಲ್ಲಿ ಕುತೂಹಲ

ಹಂಪಿ ದರೋಜಿ ಪಕ್ಷಿಗಳ ಪಟ್ಟಿಗೆ ಈಗ ಮರದ ಹಕ್ಕಿ ಎಂದೇ ಪರಿಗಣಿತವಾಗಿರುವ ಮಚ್ಚೆಯುಳ್ಳ ಮರದ ಗೂಬೆ ಸೇರ್ಪಡೆಯಾಗಿದೆ. ಈ ಪ್ರದೇಶದಲ್ಲಿ ಇಬ್ಬರು ಪಕ್ಷಿಪ್ರೇಮಿಗಳು ಈ ಪಕ್ಷಿಯನ್ನು ಪತ್ತೆಹಚ್ಚಿದ್ದಾರೆ. ಅವರೇ ಪಕ್ಷಿ ವೀಕ್ಷಕರಾದ ಸಂತೋಷ್ ಹಂಪಿ ಮತ್ತು ಶಬರೀಶ್ ಜಿ ಎ. 
ಮಚ್ಚೆಯುಳ್ಳ ಮರಗೂಬೆ
ಮಚ್ಚೆಯುಳ್ಳ ಮರಗೂಬೆ

ಹಂಪಿ: ಹಂಪಿ ದರೋಜಿ ಪಕ್ಷಿಗಳ ಪಟ್ಟಿಗೆ ಈಗ ಮರದ ಹಕ್ಕಿ ಎಂದೇ ಪರಿಗಣಿತವಾಗಿರುವ ಮಚ್ಚೆಯುಳ್ಳ ಮರದ ಗೂಬೆ ಸೇರ್ಪಡೆಯಾಗಿದೆ. ಈ ಪ್ರದೇಶದಲ್ಲಿ ಇಬ್ಬರು ಪಕ್ಷಿಪ್ರೇಮಿಗಳು ಈ ಪಕ್ಷಿಯನ್ನು ಪತ್ತೆಹಚ್ಚಿದ್ದಾರೆ. ಅವರೇ ಪಕ್ಷಿ ವೀಕ್ಷಕರಾದ ಸಂತೋಷ್ ಹಂಪಿ ಮತ್ತು ಶಬರೀಶ್ ಜಿ ಎ. 

ಇವರು ಮಾತಂಗ ಬೆಟ್ಟಗಳಲ್ಲಿ ಪಕ್ಷಿಗಳನ್ನು ನೋಡುತ್ತಿದ್ದಾಗ, ದೊಡ್ಡ ಗೂಬೆಯನ್ನು ಕಂಡು ಆಶ್ಚರ್ಯಚಕಿತರಾದರು, “ನಾವು ಚಿಕ್ಕ ಪಕ್ಷಿಗಳನ್ನು ನೋಡುತ್ತಿದ್ದಾಗ ನಮ್ಮ ತಲೆಯ ಮೇಲೆ ಒಂದು ದೊಡ್ಡ ಪಕ್ಷಿ ಚಲಿಸಿಹೋಯಿತು. ತುಂಬಾ ಅಸಾಮಾನ್ಯವಾಗಿ ಕಂಡಿತು. ನಾವು ನಮ್ಮ ಟೆಲಿ ಲೆನ್ಸ್‌ಗಳನ್ನು ಜೂಮ್ ಮಾಡಿ ನೋಡಿದಾಗ ಅದು ಗೂಬೆ ಗೊತ್ತಾಯಿತು. ನಂತರ, ಅದು ಮಚ್ಚೆಯುಳ್ಳ ಮರದ ಗೂಬೆ ಎಂದು ಗೊತ್ತಾಯಿತು ಎನ್ನುತ್ತಾರೆ. 

ಹಕ್ಕಿಯು ವುಡಿ ಜಾತಿಯಾಗಿದ್ದು, ಹಂಪಿಯಲ್ಲಿ ಕಂಡಿರುವುದು ಅನಿರೀಕ್ಷಿತ ಎಂದು ಸಂತೋಷ್ ಹಂಪಿ TNIE ಗೆ ತಿಳಿಸಿದರು. ಬೂದುಬಣ್ಣದ ಗೂಬೆ ತನ್ನ ಹಣೆಯ ಮೇಲೆ ಹುಬ್ಬುಗಳ ನಡುವೆ ಒಂದು ಗುರುತು ಹೊಂದಿದೆ. ಯಾವಾಗಲೂ ವುಡಿ ಪ್ರದೇಶದಲ್ಲಿ ಸಾಮಾನ್ಯವಾಗಿ ನೆಲೆಸುತ್ತದೆ. 'ಮರದ ಗೂಬೆ' ಎಂಬ ಹೆಸರಿನ ಸಮಾನಾರ್ಥಕವಾಗಿದೆ. ಆದಾಗ್ಯೂ, ಬರ್ಡ್ಸ್ ಆಫ್ ಹಂಪಿಯ ಲೇಖಕ ಸಮದ್ ಕೊಟ್ಟೂರ್ ಅವರು 2015ರಲ್ಲಿ ಇದನ್ನು ನೋಡಿದ್ದರಂತೆ. ಅದರ ಚಿತ್ರವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದೆ, ಆದರೆ ಅದು ಸ್ಪಷ್ಟವಾಗಿ ಸಿಗಲಿಲ್ಲ ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com