50 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ, ಪಕ್ಷಕ್ಕೆ 50 ಲಕ್ಷ ಕಾರ್ಯಕರ್ತರ ನೋಂದಣಿ: ನಳಿನ್ ಕುಮಾರ್ ಕಟೀಲ್

 ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಿನ 100 ದಿನಗಳ ಕಾಲ ನಿರಂತರವಾಗಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಬೂತ್ ವಿಜಯ ಅಭಿಯಾನ
ಬೂತ್ ವಿಜಯ ಅಭಿಯಾನ

ಮಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಿನ 100 ದಿನಗಳ ಕಾಲ ನಿರಂತರವಾಗಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೋಮವಾರ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಸೋಮವಾರ ಆರಂಭವಾದ 10 ದಿನಗಳ ಬೂತ್ ವಿಜಯ ಅಭಿಯಾನದ ಭಾಗವಾಗಿ, ಅವರು ಪಕ್ಷದ ಕಾರ್ಯಕರ್ತರಿಗೆ ಮುಂದಿನ ಕೆಲವು ವಾರಗಳಲ್ಲಿ ಸಾಧಿಸಲು ಟಾರ್ಗೆಟ್ ನೀಡಿದ್ದಾರೆ. ಬೂತ್ ಸಮಿತಿಗಳನ್ನು ಪರಿಶೀಲಿಸಿ, ಎಲ್ಲಾ ಬೂತ್‌ಗಳಲ್ಲಿ ವಾಟ್ಸಾಪ್ ಗುಂಪುಗಳನ್ನು ರಚಿಸುವಂತೆ ಮತ್ತು ಪ್ರತಿ ಬೂತ್‌ನಲ್ಲಿ ಕನಿಷ್ಠ 25 ಮನೆಗಳಲ್ಲಿ ಬಿಜೆಪಿ ಧ್ವಜಗಳನ್ನು ಹಾಕುವಂತೆ ಕಟೀಲ್ ಅವರಿಗೆ ತಿಳಿಸಿದರು.

‘ನವ ಕರ್ನಾಟಕ’ ರಚನೆಯ ಪೂರ್ವಭಾವಿಯಾಗಿ ಮುಂದಿನ 10 ದಿನಗಳಲ್ಲಿ ರಾಜ್ಯದ ಕನಿಷ್ಠ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ರಾರಾಜಿಸಬೇಕು ಎಂದರು. ಜನವರಿ 21 ರಿಂದ 29 ರವರೆಗೆ ನಡೆಯಲಿರುವ ವಿಜಯ ಸಂಕಲ್ಪ ಅಭಿಯಾನ ಎಂಬ ಎರಡನೇ ಹಂತದಲ್ಲಿ ಮತದಾರರನ್ನು ಮನೆ ಬಾಗಿಲಿಗೆ ಭೇಟಿ ಮಾಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಲು, ಮತದಾರರ ಮನೆಗಳಿಗೆ ಪಕ್ಷದ ಸ್ಟಿಕ್ಕರ್‌ಗಳನ್ನು ಅಂಟಿಸುವಂತೆ ಹೇಳಿದ್ದಾರೆ.  'ಈ ಬಾರಿ ಬಿಜೆಪಿ ಗೆ' (ಈ ಬಾರಿ ಬಿಜೆಪಿಗೆ)  ಎಂಬ 16 ಲಕ್ಷ ಗೋಡೆ ಬರಹ ಮತ್ತು 50 ಲಕ್ಷ ಜನರನ್ನು ಪಕ್ಷದ ಕಾರ್ಯಕರ್ತರಾಗಿ ಸೇರಿಸಿಬೇಕೆಂದು ಕರೆ ನೀಡಿದ್ದಾರೆ.

ಶಾಸಕರು, ಕಾರ್ಪೊರೇಟರ್‌ಗಳು ಮತ್ತು ಪಕ್ಷದ ಇತರ ಚುನಾಯಿತ ಪ್ರತಿನಿಧಿಗಳು ಈ ಕಸರತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ ಅವರು, ತಮ್ಮ ಸ್ಥಾನಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದರು.

ಹಲವು ಕಾರ್ಪೊರೇಟರ್‌ಗಳು ಮೂರು ವರ್ಷಗಳಿಂದ ನಿದ್ದೆ ಮಾಡುತ್ತಿದ್ದಾರೆ. ಈಗ ಮುಂದಿನ ಮೂರು ತಿಂಗಳು ಪಕ್ಷ ಸಂಘಟನೆಗಾಗಿ ದುಡಿಯಬೇಕು. ಈಗ ಮಲಗುವುದು ಬೇಡ. ದಕ್ಷಿಣ ಕನ್ನಡದಲ್ಲಿ ಶೇ 80ರಷ್ಟು ಮನೆಗಳಲ್ಲಿ ಪಕ್ಷದ ಬಾವುಟ ಹಾರಬೇಕು' ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com