ಬೆಂಗಳೂರು-ಮೈಸೂರು ವಂದೇ ಭಾರತ್ ಎಕ್ಸ್'ಪ್ರೆಸ್ ರೈಲಿಗೆ ಸಾರ್ವಜನಿಕರಿಂದ ಮೆಚ್ಚುಗೆ

ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ.

ಬೆಂಗಳೂರು: ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಸಾರ್ವಜನಿಕರಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

ರೈಲಿನಲ್ಲಿ ನೀಡಲಾಗಿರುವ ವಾತಾವರಣ, ಸೌಕರ್ಯಗಳ ಕುರಿತು ಪ್ರಯಾಣಿಕರು ಹಲವು ವೇದಿಕೆಗಳಲ್ಲಿ ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರಿನ ಮಾಧ್ಯಮ ಪ್ರತಿನಿಧಿಗಳನ್ನು ಗುರುವಾರ ರೈಲಿನಲ್ಲಿ ಪ್ರವಾಸಕ್ಕೆ ಕರೆದೊಯ್ಯಲಾಯಿತು. ಕೆಎಸ್‌ಆರ್ ಬೆಂಗಳೂರು ಸಿಟಿ ರೈಲು ನಿಲ್ದಾಣದಿಂದ ಬೆಳಿಗ್ಗೆ 10.23ಕ್ಕೆ ಹೊರಟ ರೈಲು ಮೈಸೂರಿಗೆ ಮಧ್ಯಾಹ್ನ 12.10ಕ್ಕೆ ತಲುಪಿತು.

ಈ ವೇಳೆ ಹಲವು ಪ್ರಯಾಣಿಕರು ರೈಲಿನ ಸೇವೆ, ವ್ಯವಸ್ಥೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಲವರು ಟಿಕೆಟ್ ದರ ದುಬಾರಿ ಎಂದು ಹೇಳಿದ್ದು ಬಿಟ್ಟರೆ, ಇನ್ನೂ ಕೆಲವರು ವ್ಯವಸ್ಥೆಯು ಈ ದರಕ್ಕೆ ಯೋಗ್ಯವಾಗಿದೆ ಎಂದು ಹೇಳಿದರು.

ರೈಲಿನಲ್ಲಿದ್ದ ಸಾಕಷ್ಟು ಪ್ರಯಾಣಿಕರು ತ್ರಾಸವಿಲ್ಲದಂತೆ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿತು. ಕೆಲವರು ಮೊಬೈಲ್ ಫೋನ್ ಗಳಲ್ಲಿ ಸಿನಿಮಾಗಳನ್ನು ನೋಡುತ್ತಿರುವುದು, ಸಾಮಾಜಿಕ ಜಾಲತಾಣಗಳಲ್ಲು ವ್ಯವಸ್ಥೆಗಳನ್ನು ಕೊಂಡಾಡುತ್ತಿರುವುದು, ಲ್ಯಾಪ್ ಟಾಪ್ ಗಳ ಬಳಕೆ ಮಾಡುತ್ತಿರುವುದು ಕಂಡು ಬಂದಿತು. ಇನ್ನೂ ಕೆಲವರು ಪುಸ್ತಕ ಓದುವುದರಲ್ಲಿಯೇ ಮುಳುಗಿ ಹೋಗಿದ್ದರು. ರೈಲಿನೊಳಗೆ ಸಂಪೂರ್ಣ ತಣ್ಣನೆಯ ವಾತಾವರಣವಿತ್ತು.

ತಮ್ಮ ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ ಕ್ವಾಲಿಟಿ ಅನಾಲಿಸ್ಟ್ ವೊಬ್ಬರು ಮಾತನಾಡಿ, ಬುಕಿಂಗ್ ಸುಲಭವಾಗಿತ್ತು. ಸಮಯಕ್ಕೆ ಸರಿಯಾಗಿ ಹೋಗುವುದು ರೈಲಿನ ಪ್ಲಸ್ ಪಾಯಿಂಟ್ ಆಗಿದೆ. ತಿಂಡಿ-ತಿನಿಸುಗಳೂ ಕೂಡ ಕೈಗೆಟುಕುವ ದರದಲ್ಲಿದೆ. ಶುಚಿತ್ವವನ್ನು ಕಾಪಾಡಿಕೊಳ್ಳಲಾಗುತ್ತಿದ್ದ, ಬಡಿಸುವ ಆಹಾರವು ಆರೋಗ್ಯಕರವಾಗಿದೆ ಎಂದು ಹೇಳಿದ್ದಾರೆ.

ಐಐಟಿ ಮದ್ರಾಸ್ ಪ್ರೊ.ಶೇಕರ್ ಸಿ ಮತ್ತು ಅವರ ಪತ್ನಿ ದೀಪಾ ಕೂಡ ರೈಲಿನ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  “ಆಹಾರವು ಅತ್ಯುತ್ತಮವಾಗಿದೆ. ವಿಮಾನ ಹಾರಾಟಕ್ಕಿಂತಲೂ ಇಲ್ಲಿನ ಪ್ರಯಾಣವು ಉತ್ತಮವಾಗಿದೆ. ದರವು ಕೂಡ ಸಮರ್ಥನೀಯವಾಗಿದೆ. ರೈಲು ತುಂಬಾ ವಿಶಾಲವಾಗಿದೆ. ಇತರರೂ ಕೂಡ ಪ್ರಯಾಣಿಸುವಂತೆ ನಾವು ಅವರಿಗೆ ಶಿಫಾರಸು ಮಾಡುತ್ತೇವೆಂದು ತಿಳಿಸಿದ್ದಾರೆ.

ಮತ್ತೋರ್ವ ಪ್ರಯಾಣಿಕರಾದ ದಿವ್ಯಾ ಅವರು ಮಾತನಾಡಿ, ರೈಲಿನ ಪ್ರಯಾಣ ಅದ್ಭುತವಾಗಿದೆ. ನಾನು ಈ ಹಿಂದೆ ನನ್ನ ದಿವಂಗತ ಅಜ್ಜನೊಂದಿಗೆ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಹೋಗಿದ್ದೆ. ನನ್ನ ಮಗಳಿಗೂ ಅದೇ ಅನುಭವವಾಗಬೇಕೆಂದು ಬಯಸಿದ್ದೆ, ಹೀಗಾಗಿ ಆಕೆಯನ್ನು ಕರೆದುಕೊಂಡು ಬಂದಿದ್ದೇನೆಂದು ಹೇಳಿದರು.

ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, 1,128 ಪ್ರಯಾಣಿಕರ ಆಸನ ಸಾಮರ್ಥ್ಯದ 16 ಬೋಗಿಗಳ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ 586 ಪ್ರಯಾಣಿಕರು (52%) ಮತ್ತು ಮೈಸೂರಿನಿಂದ ಬೆಂಗಳೂರಿಗೆ 330 (30%) ಪ್ರಯಾಣಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ ಗರಿಷ್ಠ 180 ಕಿಮೀ ವೇಗವನ್ನು ತಲುಪುತ್ತದೆ. ಆದಾಗ್ಯೂ, ಪ್ರತಿ ಕೋಚ್‌ನಲ್ಲಿರುವ ವಿಶಿಷ್ಟ ಡಿಸ್‌ಪ್ಲೇ ಬೋರ್ಡ್ ನೈಜ ಸಮಯದ ವೇಗವು ಬೆಂಗಳೂರು ಮತ್ತು ಮೈಸೂರು ನಡುವೆ 100 ಕಿಲೋಮೀಟರ್‌ಗಳನ್ನು ದಾಟಿಲ್ಲ ಎಂದು ತೋರಿಸುತ್ತದೆ.

ಎರಡು ನಗರಗಳ ನಡುವೆ ರೈಲುಗಳು ವೇಗವಾಗಿ ಓಡುವುದನ್ನು ತಡೆಯಲು 125 ಕ್ಕೂ ಹೆಚ್ಚು ಕರ್ವ್‌ಗಳಿವೆ, ಅವುಗಳಲ್ಲಿ ಹಲವು ತೀಕ್ಷ್ಣವಾದವುಗಳಾಗಿವೆ.

ಬೆಂಗಳೂರು ರೈಲ್ವೆ ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಮಾತನಾಡಿ, ಬೆಂಗಳೂರು ಮತ್ತು ಮೈಸೂರು ನಡುವಿನ ಹಳಿಗಳು ಗಂಟೆಗೆ 100 ಕಿಮೀ ಗರಿಷ್ಠ ವೇಗವನ್ನು ಹೊಂದಿವೆ. 110 ಕಿಮೀ ವೇಗವನ್ನು ತಡೆದುಕೊಳ್ಳುವಂತೆ ಟ್ರ್ಯಾಕ್‌ಗಳನ್ನು ನವೀಕರಿಸುವ ಸಾಧ್ಯತೆಗಳನ್ನು ನಾವು ಇದೀಗ ನೋಡುತ್ತಿದ್ದೇವೆ. ನಮ್ಮ ತಾಂತ್ರಿಕ ತಂಡವು ವರದಿಯನ್ನು ಸಲ್ಲಿಸಿದ ನಂತರ, ಈ ಸಂಬಂಧ ನಿರ್ಧಾರಗಳ ಕೈಗೊಳ್ಳಲಾಗುತ್ತದೆ. ಜೋಲಾರ್‌ಪೇಟ್ಟೈ ಮತ್ತು ಬೆಂಗಳೂರು ನಡುವೆ ಈಗಾಗಲೇ 110 ಕಿಮೀ ವೇಗದಲ್ಲಿ ರೈಲುಗಳು ಓಡುತ್ತಿದ್ದು, ಸೆಪ್ಟೆಂಬರ್‌ ವೇಳೆಗೆ ಆ ಹಳಿಗಳು ಗಂಟೆಗೆ 130 ಕಿಮೀ ವೇಗವನ್ನು ತಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com