ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಪತ್ರ: ಓರ್ವನ ಬಂಧನ

ಭಟ್ಕಳ ಟೌನ್ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭಟ್ಕಳ ಪೊಲೀಸರಿಗೆ ಒಪ್ಪಿಸಲಾಗುವ ಪ್ರಕ್ರಿಯೆ ನಡೆಯುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಟ್ಕಳ: ಭಟ್ಕಳ ಟೌನ್ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭಟ್ಕಳ ಪೊಲೀಸರಿಗೆ ಒಪ್ಪಿಸಲಾಗುವ ಪ್ರಕ್ರಿಯೆ ನಡೆಯುತ್ತಿದೆ.

ಡಿಸೆಂಬರ್ 25ರಂದು ಭಟ್ಕಳ ಪಟ್ಟಣ ಪೊಲೀಸ್ ಠಾಣೆಗೆ ‘ಬಾಂಬ್ ಹಾಕಲಾಗುವುದು’ ಎಂಬ ಪೋಸ್ಟ್ ಕಾರ್ಡ್ ಬಂದಿತ್ತು.  ಪರಿಸ್ಥಿತಿ ಗಮನಿಸಿದ  ಪೊಲೀಸರು ಅಲರ್ಟ್ ಆದರು. ಅಧಿಕಾರಿಯ ಪ್ರಕಾರ, ಪೋಸ್ಟ್‌ಕಾರ್ಡ್ ನಲ್ಲಿ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.

ಭಟ್ಕಳವು ಅತ್ಯಂತ ಸೂಕ್ಷ್ಮ ಸ್ಥಳವಾಗಿರುವುದರಿಂದ ನಾವು ಪತ್ರದ ಬಗ್ಗೆ ಬಹಿರಂಗಪಡಿಸದಿರಲು ನಿರ್ಧರಿಸಿದ್ದೇವೆ ಆದರೆ ಸದ್ದಿಲ್ಲದೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಅವರು ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಜನವರಿ 1, 2023 ರಂದು  ಪೊಲೀಸ್ ಠಾಣೆ ಮೇಲೆ ಬಾಂಬ್ ದಾಳಿ ನಡೆಯಲಿದೆ. ಇದೇ ಪತ್ರ ಚೆನ್ನೈ ಪೊಲೀಸರಿಗೂ ತಲುಪಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಚೆನ್ನೈ ಪೊಲೀಸ್ ತಂಡ ಆತನನ್ನು ಬಂಧಿಸಿದೆ. ದುಷ್ಕರ್ಮಿಗಳು ಲ್ಯಾಪ್‌ಟಾಪ್ ಕದ್ದಿದ್ದರು, ಪೊಲೀಸರ ಗಮನ ಬೇರೆಡೆ ಸೆಳೆಯಲು ಈ ಬಾಂಬ್‌ ಭೀತಿ ಹುಟ್ಟುಹಾಕಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಅಂಗಡಿಯಿಂದ ಲ್ಯಾಪ್‌ಟಾಪ್ ಕದ್ದು ಅದರ ಐಡಿ ಪಡೆಯಲು ಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಅಂಗಡಿಯ ಮಾಲೀಕರ ಫೋನ್ ನಂಬರ್ ಬಳಸಿ ಪತ್ರ ಬರೆದು ಅಲ್ಲಿಂದಲೇ ಹಾರ್ಡ್ ವೇರ್ ಕದ್ದಿದ್ದಾನೆ,’’ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈ ಪೊಲೀಸ್ ತಂಡವು ನಂಬರ್ ಅನ್ನು ಬಳಸಿಕೊಂಡಿತು. ಅಂಗಡಿಯ ಮಾಲೀಕರನ್ನು ಪತ್ತೆಹಚ್ಚಿದೆ. ಆತನ ನಂಬರ್ ಅನ್ನು ದುಷ್ಕರ್ಮಿ ದುರ್ಬಳಕೆ ಮಾಡಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಸಿದ ಪೊಲೀಸರು ಹೊಸಪೇಟೆ ನಿವಾಸಿ ಹನುಮಂತಪ್ಪ ಎಂಬಾತನನ್ನು ಬಂಧಿಸಿದ್ದಾರೆ. ಭಟ್ಕಳ ಪೊಲೀಸರು, ಉತ್ತರ ಕನ್ನಡದ ಹೆಚ್ಚುವರಿ ಎಸ್ಪಿ ಸಿ ಟಿ ಜಯಕುಮಾರ್ ಪ್ರಕಾರ, ಭಟ್ಕಳವನ್ನು ಗುರಿಯಾಗಿಸಲು ಕಾರಣವನ್ನು ತನಿಖೆ ಮಾಡಲು ಅವರ ಬಾಡಿ ವಾರೆಂಟ್ ಅನ್ನು ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com