ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯ 'ಜನ ಸಾಹಿತ್ಯ ಸಮ್ಮೇಳನ' ಬೆಂಗಳೂರಿನಲ್ಲಿ ಆಯೋಜನೆ
ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಪರಂಪರೆ ಹಾಗೂ ಅಲ್ಪಸಂಖ್ಯಾತರ ಅವಗಣನೆ ನಡೆಸಿದೆ, ಹೀಗಾಗಿ ಪರ್ಯಾಯವಾಗಿ ಸಮಾನ ಮನಸ್ಕ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರಿಂದ ಜನವರಿ 8ರಂದು ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ‘ಜನ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗುವುದು ಎಂದು ಇತ್ತೀಚೆಗೆ ಕನ್ನಡ ಚಿಂತಕ
Published: 08th January 2023 11:55 AM | Last Updated: 08th January 2023 01:33 PM | A+A A-

ಜನ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಬೆಂಗಳೂರು: ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಪರಂಪರೆ ಹಾಗೂ ಅಲ್ಪಸಂಖ್ಯಾತರ ಅವಗಣನೆ ನಡೆಸಿದೆ, ಹೀಗಾಗಿ ಪರ್ಯಾಯವಾಗಿ ಸಮಾನ ಮನಸ್ಕ ಸಾಹಿತಿಗಳು ಮತ್ತು ಕನ್ನಡ ಪರ ಹೋರಾಟಗಾರರಿಂದ ಜನವರಿ 8ರಂದು ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ‘ಜನ ಸಾಹಿತ್ಯ ಸಮ್ಮೇಳನ’ ಆಯೋಜಿಸಲಾಗುವುದು ಎಂದು ಇತ್ತೀಚೆಗೆ ಕನ್ನಡ ಚಿಂತಕ, ಜೆಎನ್ ಯು ಕನ್ನಡ ವಿಭಾಗದ ವಿಶ್ರಾಂತ ಪ್ರೋಫೆಸರ್ ಪುರುಷೋತ್ತಮ ಬಿಳಿಮಲೆ ಇತ್ತೀಚೆಗೆ ಹೇಳಿದ್ದರು.
ಅದರಂತೆ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಜನ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೊಂಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ನಟ, ಸಾಹಿತ್ಯ ಪ್ರೇಮಿ ಪ್ರಕಾಶ್ ರಾಜ್, ಭಾನು ಮುಷ್ತಾಕ್, ಮುದ್ನಾಕೂಡು ಚಿನ್ನಸ್ವಾಮಿ ಮತ್ತಿತರರು ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆಯರು, ಮುಸ್ಲಿಂ ಮತ್ತು ದಲಿತ ಲೇಖಕರನ್ನು ಹೊರಗಿಡುವುದನ್ನು ವಿರೋಧಿಸಲು ಇದನ್ನು ಮಾಡಲಾಗುತ್ತಿದೆ.
Inauguration of the Jana Sahitya Sammelana by Prakash Raj, Bhanu Mushtaq, Mudnakoodu Chinnaswamy and others. This is being done to resist the exclusion of women, muslim and dalit writers in Kannada Sahitya Sammelana @XpressBengaluru @KannadaPrabha @prakashraaj @PadmashaliAkkai pic.twitter.com/2KpbTEgrs9
— Nagaraja Gadekal (@gadekal2020) January 8, 2023
ನಗಾರಿ ಬಾರಿಸುವ ಮೂಲಕ ಮತ್ತು ಕನ್ನಡ ಬಾವುಟ ಹಾರಿಸುವ ಮೂಲಕ ಜನ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು.
ಸಮ್ಮೇಳನ ಅಂಗವಾಗಿ ಇಂದು ದಿನವಿಡೀ ವಿಚಾರಗೋಷ್ಠಿ, ಸಾಹಿತ್ಯಗೋಷ್ಠಿ, ಕವಿಗೋಷ್ಠಿ, ಆಹಾರ ಗೋಷ್ಠಿಗಳು ನಡೆಯಲಿವೆ.