ಅಕ್ರಮ ಸಂಬಂಧದಿಂದ ಜನಿಸಿದ ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು: ಹೈಕೋರ್ಟ್ ತೀರ್ಪು
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (1) ರ ಪ್ರಕಾರ, ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ಕಾನೂನುಬದ್ಧವೆಂದು ಪರಿಗಣಿಸಬೇಕು ಮತ್ತು ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
Published: 08th January 2023 07:25 AM | Last Updated: 08th January 2023 07:25 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (1) ರ ಪ್ರಕಾರ, ಅಕ್ರಮ ಸಂಬಂಧದಿಂದ ಜನಿಸಿದ ಮಗುವನ್ನು ಕಾನೂನುಬದ್ಧವೆಂದು ಪರಿಗಣಿಸಬೇಕು ಮತ್ತು ಮಗುವಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಅಕ್ರಮ ಸಂಬಂಧದಿಂದ ಜನಿಸಿದ 10 ವರ್ಷದ ಬಾಲಕನಿಗೆ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಸಂದಾಯವಾಗಬೇಕಾದ ಒಟ್ಟು 13.28 ಲಕ್ಷ ರೂಪಾಯಿಗಳ ಪರಿಹಾರದಲ್ಲಿ ಶೇಕಡಾ 40 ಪಾಲನ್ನು ನೀಡಬೇಕೆಂದು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಈ ತೀರ್ಪು ನೀಡಿದ್ದಾರೆ. ಅಪಘಾತದಲ್ಲಿ ಬಾಲಕನ ತಂದೆ ತೀರಿಕೊಂಡಿದ್ದರು.
ಬಾಲಕನಿಗೆ ಸಂದಾಯವಾಗಬೇಕಾದ ಹಣವನ್ನು ಸ್ಥಿರ ಠೇವಣಿಯಲ್ಲಿ ಇಡಬೇಕು. ಹುಡುಗನ ಶೈಕ್ಷಣಿಕ ಮತ್ತು ಇತರ ವೆಚ್ಚಗಳನ್ನು ಪೂರೈಸಲು ತಾಯಿಗೆ ತ್ರೈಮಾಸಿಕವಾಗಿ ಬಡ್ಡಿಮೊತ್ತವನ್ನು ನೀಡಬೇಕು, ಬಾಲಕನಿಗೆ 18 ವರ್ಷ ತುಂಬಿದ ಮೇಲೆ ಹಣ ಸಂದಾಯ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ. ಬಾಲಕನ ತಾಯಿಗೆ ಪರಿಹಾರ ನೀಡುವ ಆದೇಶವನ್ನು ನೀಡಲು ನಿರಾಕರಿಸಿದ ನ್ಯಾಯಾಲಯವು ಆಕೆಯ ಮೊದಲ ಪತಿಯೊಂದಿಗೆ ಜೀವನ ನಡೆಸುತ್ತಿರುವಾಗ ಮತ್ತೊಬ್ಬರ ಜೊತೆ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದರೆ ಆ ಸಂಬಂಧವನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಹುಡುಗನ ತಂದೆ ಇನ್ನೊಬ್ಬ ಮಹಿಳೆಯೊಂದಿಗೆ 'ಅಕ್ರಮ ಸಂಬಂಧ' ಹೊಂದಿದ್ದಾಗ ಆ ಮದುವೆಯು ಸಹ ಅಸ್ತಿತ್ವದಲ್ಲಿರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಇದರ ಪರಿಣಾಮವಾಗಿ ಅವರಿಗೆ ಮಗು ಜನಿಸಿದೆ. ಬಾಲಕನ ತಾಯಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ ಪರಿಹಾರಕ್ಕಾಗಿ ಬಾಲಕನ ಪರವಾಗಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸಿತು.