ಬೆಂಗಳೂರು ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋದ ಗೋ ಫಸ್ಟ್ ವಿಮಾನ ಸಂಸ್ಥೆಗೆ ಡಿಜಿಸಿಎ ನೋಟಿಸ್!
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 55 ಪ್ರಯಾಣಿಕರ ತಂಡವನ್ನು ಬಿಟ್ಟು ಹೋಗಿದ್ದಕ್ಕಾಗಿ ಗೋಫಸ್ಟ್ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ನೋಟಿಸ್ ನೀಡಿದೆ.
Published: 10th January 2023 07:40 PM | Last Updated: 18th January 2023 04:26 PM | A+A A-

ಗೋಫಸ್ಟ್
ಮುಂಬೈ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 55 ಪ್ರಯಾಣಿಕರ ತಂಡವನ್ನು ಬಿಟ್ಟು ಹೋಗಿದ್ದಕ್ಕಾಗಿ ಗೋಫಸ್ಟ್ ವಿಮಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ನೋಟಿಸ್ ನೀಡಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಸಿಎ ವಿಮಾನ ಸಂಸ್ಥೆಯಿಂದ 'ಬಹು ತಪ್ಪುಗಳು' ನಡೆದಿವೆ ಎಂದು ಗೋ ಫಸ್ಟ್‌ಗೆ ಶೋಕಾಸ್ ನೋಟಿಸ್ ನೀಡಿದೆ.
ಗೋ ಫಸ್ಟ್ ಸಂಸ್ಥೆಯ ಜಿ8-116 ವಿಮಾನ ಬೆಂಗಳೂರಿನಿಂದ ದೆಹಲಿಗೆ ಕಾರ್ಯನಿರ್ವಹಿಸುತ್ತಿತ್ತು. ಆದರೆ ನಿನ್ನೆ ರಾತ್ರಿ ವಿಮಾನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್ ಕೋಚ್‌ನಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು. 'ಸರಿಯಾದ ಸಂವಹನ, ಸಮನ್ವಯ ಮತ್ತು ದೃಢೀಕರಣದ ಕೊರತೆಯಂತಹ ಬಹು ತಪ್ಪುಗಳು ಪರಿಸ್ಥಿತಿಗೆ ಕಾರಣವಾಗಿವೆ ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.
ನಿಯಂತ್ರಕರು ತಮ್ಮ ನಿಯಂತ್ರಕ ಕಟ್ಟುಪಾಡುಗಳ ಉಲ್ಲಂಘನೆಗಾಗಿ ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ಗೋ ಫಸ್ಟ್‌ನ ಅಕೌಂಟೆಬಲ್ ಮ್ಯಾನೇಜರ್/ಚೀಫ್ ಆಪರೇಷನ್ ಆಫೀಸರ್‌ಗೆ ಡಿಜಿಸಿಎ ಶೋಕಾಸ್ ನೋಟಿಸ್ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಉತ್ತರಿಸುವಂತೆ ಗೋಫಸ್ಟ್ ಗೆ ಎರಡು ವಾರಗಳ ಕಾಲಾವಕಾಶ ನೀಡಿದ್ದು ಅದರ ಆಧಾರದ ಮೇಲೆ ಮುಂದಿನ ಕ್ರಮತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ಡಿಜಿಸಿಎ ತಿಳಿಸಿದೆ.