ಮೆಟ್ರೋ ಪಿಲ್ಲರ್ ದುರಂತ: ತಲೆಗೆ ಪೆಟ್ಟು ಬಿದ್ದು ಅತೀವ್ರ ರಕ್ತ ಸ್ರಾವವಾಗಿ ತಾಯಿ-ಮಗು ಮೃತಪಟ್ಟಿದ್ದಾರೆ; ವೈದ್ಯರು

ತಲೆಗೆ ಪೆಟ್ಟು ಬಿದ್ದ ಪರಿಣಾಮ ಅತೀವ್ರ ರಕ್ತಸ್ರಾವವಾಗಿ ತಾಯಿ-ಮಗು ಮೃತಪಟ್ಟಿದ್ದಾರೆಂದು ಅಲ್ಟಿಯಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.
ಕುಸಿದುಬಿದ್ದಿರುವ ಮೆಟ್ರೋ ಪಿಲ್ಲರ್ ಹಾಗೂ ಮೃತ ತೇಜಸ್ವಿನಿ, ಮಗು
ಕುಸಿದುಬಿದ್ದಿರುವ ಮೆಟ್ರೋ ಪಿಲ್ಲರ್ ಹಾಗೂ ಮೃತ ತೇಜಸ್ವಿನಿ, ಮಗು

ಬೆಂಗಳೂರು: ತಲೆಗೆ ಪೆಟ್ಟು ಬಿದ್ದ ಪರಿಣಾಮ ಅತೀವ್ರ ರಕ್ತಸ್ರಾವವಾಗಿ ತಾಯಿ-ಮಗು ಮೃತಪಟ್ಟಿದ್ದಾರೆಂದು ಅಲ್ಟಿಯಸ್ ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿದುಬಿದ್ದ ಪರಿಣಾಮ 35 ವರ್ಷದ ತೇಜಸ್ವಿನಿ ಹಾಗೂ ವಿಹಾನ್ (2 ವರ್ಷ 6 ತಿಂಗಳು) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇನ್ನು ಅದೃಷ್ಟವಶಾತ್ ತೇಜಸ್ವಿನಿ ಪತಿ ಹಾಗೂ ಮಗಳು ಪ್ರಾಣಪಾಯದಿಂದ ಪಾರಾಗಿದ್ದರು.

ಮಹಿಳೆ ಹಾಗೂ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಸಾವಿಗೆ ಪ್ರಮುಖ ಕಾರಣ ಕುರಿತು ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ್ದಾರೆ.

ಮಗು ಹಾಗೂ ತಾಯಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ಮಹೇಶ್ ಅವರು ಮಾತನಾಡಿದ್ದು, ಆಸ್ಪತ್ರೆಗೆ ಕರೆತಂದಾಗಲೇ ತಲೆಗೆ ಪೆಟ್ಟು ಬಿದ್ದಿತ್ತು. ತಲೆಯಿಂದ ಅತೀವ್ರ ರಕ್ತಸ್ರಾವವಾಗುತ್ತಿತ್ತು. ಅವರಿಗೆ ಹಲವಾರು ಬಾರಿ ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ನೀಡಲಾಯಿತು. ವೆಂಟಿಲೇಟರ್‌ನಲ್ಲಿಯೂ ಇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೊದಲು ತಾಯಿ ಹಾಗೂ ನಂತರ ಮಗು ಸಾವನ್ನಪ್ಪಿತು ಎಂದು ಹೇಳಿದ್ದಾರೆ.

ಬೆಳಿಗ್ಗೆ 11.40 ರ ಹೊತ್ತಿಗೆ ತೇಜಸ್ವಿನಿ 28, ಮತ್ತು ವಿಹಾನ್, 2.6 ವರ್ಷ ತಲೆಗೆ ಪೆಟ್ಟು ಹಾಗೂ ಅತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮೃತ ಮಗುವಿನ ಅಪ್ಪ ಹಾಗೂ ಮತ್ತೊಂದು ಮಗುವಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಮೃತದೇಹಗಳನ್ನು ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶವಪರೀಕ್ಷೆಗಾಗಿ ಡಾ ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲು ನಿರ್ಧರಿಸಲಾಗಿತ್ತು, ಆದರೆ ಕಾನೂನು ಪ್ರಕ್ರಿಯೆಗಳಿದ್ದ ಕಾರಣ ರಾತ್ರಿ 8.30 ರ ನಂತರ ಕರೆತರಲಾಗಿತ್ತು ಎಂದು ವಿಧಿವಿಜ್ಞಾನ ವಿಭಾಗದ ಮೂಲಗಳು ಮಾಹಿತಿ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com