ಕೈಗಾ ಟೌನ್‌ಶಿಪ್ ಬಳಿ ಅಪರೂಪದ 'ಹಾರುವ ಅಳಿಲು' ಪತ್ತೆ, ರಕ್ಷಣೆ
ಕೈಗಾ ಟೌನ್‌ಶಿಪ್‌ನಲ್ಲಿ ಗಾಯಗೊಂಡು ಕೆಳಗೆ ಬಿದ್ದಿದ್ದ ಅಪರೂಪದ ಹಾರುವ ಅಳಿಲನ್ನು ಕಾರವಾರ ತಾಲೂಕಿನ ಕದ್ರಾ ಅರಣ್ಯ ವಲಯದ ವಿರ್ಜೆ ಬೀಟ್‌ನ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಣೆ ಮಾಡಿದ್ದಾರೆ.
Published: 13th January 2023 11:32 AM | Last Updated: 13th January 2023 07:29 PM | A+A A-

ಹಾರುವ ಅಳಿಲನ್ನು ರಕ್ಷಣೆ ಮಾಡಿರುವ ಬಿಲಾಲ್ ಶೇಖ್.
ಕದ್ರಾ (ಉತ್ತರ ಕನ್ನಡ): ಕೈಗಾ ಟೌನ್‌ಶಿಪ್‌ನಲ್ಲಿ ಗಾಯಗೊಂಡು ಕೆಳಗೆ ಬಿದ್ದಿದ್ದ ಅಪರೂಪದ ಹಾರುವ ಅಳಿಲನ್ನು ಕಾರವಾರ ತಾಲೂಕಿನ ಕದ್ರಾ ಅರಣ್ಯ ವಲಯದ ವಿರ್ಜೆ ಬೀಟ್‌ನ ಅರಣ್ಯ ವೀಕ್ಷಕ ಬಿಲಾಲ್ ಶೇಖ್ ಅವರು ರಕ್ಷಣೆ ಮಾಡಿದ್ದಾರೆ.
ಮರದಿಂದ ಮರಕ್ಕೆ ಹಾರುವ ವೇಳೆ ಅಳಿಲು ಆಕಸ್ಮಿಕವಾಗಿ ರೆಂಬೆಗಳಿಗೆ ತಾಗಿ ಗಾಯಗೊಂಡು ಮಲ್ಲಾಪುರ ಟೌನ್‌ಶಿಪ್‌ನ ಎನ್‌ಪಿಸಿಐಎಲ್ ಸಿಬ್ಬಂದಿಯೋರ್ವರ ಮನೆಯ ಮೇಲೆ ಬಿದ್ದಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ರಕ್ಷಕ ನಾಗರಾಜ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಾಗರಾಜ್ ಅವರು ಬಿಲಾಲ್ ಅವರಿಗೆ ಮಾಹಿತಿ ನೀಡಿದ್ದು, ಕೂಡಲೇ ಬಿಲಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಳಿಲಿಗೆ ಅಗತ್ಯ ಚಿಕಿತ್ಸೆ ನೀಡಿ, ಪುನಃ ಕಾಡಿಗೆ ಬಿಟ್ಟಿದ್ದಾರೆ.
ಹಾರುವ ಅಳಿಲನ್ನು ನೋಡಿ ಆಶ್ಚರ್ಯಗೊಂಡೆ. ಅಳಿಲು ತೀವ್ರವಾಗಿ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಳಿಲು ನಿತ್ರಾಣಗೊಂಡಿತ್ತು. ಸುತ್ತಲೂ ಜನರು ನಿಂತಿರುವುದನ್ನು ನೋಡಿ ಆತಂಕಕ್ಕೊಳಗಾಗಿತ್ತು. ಹ್ಯಾಂಡ್ ಗ್ಲೌಸ್ ಧರಿಸಿ ಅಳಿಲಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಿದೆ. ಗಾಯಗೊಂಡಿದ್ದ ಜಾಗದಲ್ಲಿ ಇರುವೆಗಳು ಮುತ್ತಿಕೊಂಡು ಮತ್ತಷ್ಟು ಗಾಯಗೊಳ್ಳುವಂತೆ ಮಾಡಿತ್ತು. ಇದರಿಂದ ಸೋಂಕು ಕೂಡ ಕಂಡು ಬಂದಿತ್ತು. ಬಳಿಕ ಚಿಕಿತ್ಸೆ ನೀಡಿ, ಸಂಜೆ ವರೆಗೂ ನಿಗಾದಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ: ಹಂಪಿ ಬಳಿ ಕಳೆದ ತಿಂಗಳು ರಕ್ಷಿಸಲ್ಪಟ್ಟಿದ್ದ ಯುರೇಷಿಯನ್ ಗ್ರಿಫನ್ ವಲ್ಚರ್ ಮರಳಿ ಗೂಡಿಗೆ
ಇತ್ತೀಚಿನ ದಿನಗಳಲ್ಲಿ ಹಾರುವ ಅಳಿಲುಗಳು ಕಂಡು ಬರುತ್ತಿರುವುದು ಅತ್ಯಂತ ವಿರಳವಾಗಿದೆ ಹೋಗಿದೆ. ಆದ್ದರಿಂದ ಅದರ ಸ್ಥಿತಿ ಮತ್ತು ಇತರ ಅಂಶಗಳು ಹೆಚ್ಚು ತಿಳಿದಿಲ್ಲ. ವೃಕ್ಷವಾಸಿ ಜೀವಿಯು ತನ್ನ ಮೇಲಿನ ತೋಳುಗಳನ್ನು ಹರಡುವ ಮೂಲಕ ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿದು ಚಲಿಸುತ್ತವೆ, ಇದು ಪ್ಯಾಟಾಜಿಯಂ ಎಂದು ಕರೆಯಲ್ಪಡುವ ವಿಸ್ತೃತ ಚರ್ಮವನ್ನು ಹೊಂದಿದೆ, ಇದು ತೆಳ್ಳಗಿನ ಚರ್ಮವನ್ನು ಮುಂಭಾಗದ ಕಾಲು ಮತ್ತು ಅದರ ಹಿಂಭಾಗದಿಂದ ವಿಸ್ತರಿಸಿಕೊಂಡಿರುತ್ತದೆ. ಅದರ ಉದ್ದನೆಯ ಬಾಲಗಳು ಅವು ಜಾರುವಂತೆ ಸ್ಥಿರತೆಯನ್ನು ಒದಗಿಸುತ್ತವೆ. ಹಾರುವ ಅಳಿಲು ದಂಶಕಗಳ ಕುಟುಂಬಕ್ಕೆ ಸೇರಿದ್ದಾಗಿದ್ದು, ಸ್ಥಳೀಯರು ಇದನ್ನು ಹಾರುವ ಬೆಕ್ಕು ಎಂದು ಕರೆಯುತ್ತಾರೆ, ಇವುಗಳು ಬೆಳಿಗ್ಗೆಗಿಂತ ಸಂಜೆ ವೇಳೆ ಹೆಚ್ಚು ಸಕ್ರಿಯವಾಗಿರುತ್ತದೆ ಮತ್ತು ಕಾಡಿನ ಪ್ರದೇಶಗಳಲ್ಲಿ ಬೆಳೆಯುತ್ತದೆ ಎಂದು ಬಿಲಾಲ್ ಅವರು ಮಾಹಿತಿ ನೀಡಿದ್ದಾರೆ.
ಉತ್ತರ ಕನ್ನಡದ ಡಿಸಿಎಫ್ ಪ್ರಶಾಂತ್ ಕುಮಾರ್ ಕೆ ಎಸ್ ಅವರು ಮಾತನಾಡಿ, ಅರಣ್ಯ ಸಿಬ್ಬಂದಿಯ ಈ ಪ್ರಯತ್ನವನ್ನು ಶ್ಲಾಘಿಸಿದರು.
“ಪ್ರಮುಖ ಪ್ರಾಣಿಗಳಷ್ಟೇ ಅಲ್ಲ, ಹಾರುವ ಅಳಿಲುಗಳಂತಹ ಸಣ್ಣ ಸಸ್ತನಿಗಳೂ ಕೂಡ ಸಂರಕ್ಷಣೆಗೆ ಅರ್ಹವಾಗಿವೆ. ಹಾರುವ ಅಳಿಲು ಅಪರೂಪದ ಮತ್ತು ವಿಶಿಷ್ಟವಾದ ಸಸ್ತನಿಯಾಗಿದ್ದು, ನಮ್ಮ ಅರಣ್ಯ ಸಿಬ್ಬಂದಿ ಅಂತಹ ಪ್ರಾಣಿಗಳನ್ನು ರಕ್ಷಿಸಲು ಸಮರ್ಥರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ. ಇದೀಗ ಅಳಿಲನ್ನು ಕಾಡಿಗೆ ಬಿಡಲಾಗಿದೆ ಎಂದು ಹೇಳಿದ್ದಾರೆ.