'ಸ್ಯಾಂಟ್ರೋ' ರವಿಗೆ ಪ್ರತಿ ಗಂಟೆಗೊಮ್ಮೆ ಇನ್ಸುಲಿನ್ ನೀಡಿ ವಿಚಾರಣೆ: ಎಡಿಜಿಪಿ ಅಲೋಕ್ ಕುಮಾರ್

ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ 'ಸ್ಯಾಂಟ್ರೋ' ರವಿಗೆ ಶುಗರ್ ಲೆವೆಲ್ ನಿಯಂತ್ರಣಕ್ಕಾಗಿ ಪ್ರತಿ ಒಂದು ಗಂಟೆಗೊಮ್ಮೆ ಇನ್ಸುಲಿನ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.
ಸ್ಯಾಂಟ್ರೋ ರವಿ, ಅಲೋಕ್ ಕುಮಾರ್
ಸ್ಯಾಂಟ್ರೋ ರವಿ, ಅಲೋಕ್ ಕುಮಾರ್

ಮೈಸೂರು: ವಿಜಯನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿರುವ 'ಸ್ಯಾಂಟ್ರೋ' ರವಿಗೆ ಶುಗರ್ ಲೆವೆಲ್ ನಿಯಂತ್ರಣಕ್ಕಾಗಿ ಪ್ರತಿ ಒಂದು ಗಂಟೆಗೊಮ್ಮೆ ಇನ್ಸುಲಿನ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.

ಪೊಲೀಸ್ ಠಾಣೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸ್ಯಾಂಟ್ರೋ ರವಿಯನ್ನು ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು, ರವಿ ಅವರಿಗೆ ಮಧುಮೇಹ ಸಮಸ್ಯೆ ಇದ್ದು, ವಿಚಾರಣೆ ವೇಳೆ ಅವರಿಗೆ ಪ್ರತಿ ಗಂಟೆಗೆ ಒಮ್ಮೆ ಇನ್ಸುಲಿನ್ ನೀಡಲಾಗುತ್ತಿತ್ತು.

ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ರವಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು, ಪೊಲೀಸ್ ಕಸ್ಟಡಿಗೆ ಮನವಿ ಮಾಡುತ್ತೇವೆ ಎಂದು ಅಲೋಕ್ ಕುಮಾರ್ ಅವರು ಹೇಳಿದರು. ಸುದ್ದಿಗೋಷ್ಠಿ ಬಳಿಕ ಅಲೋಕ್ ಕುಮಾರ್ ಬೆಂಗಳೂರಿಗೆ ತೆರಳಿದರು.

ಇನ್ನು ನಿನ್ನೆ ಗುಜರಾತ್‌ನಿಂದ 'ಸ್ಯಾಂಟ್ರೋ' ರವಿ ಮತ್ತು ಇತರೆ ಇಬ್ಬರು ಆರೋಪಿಗಳಾದ ರಾಮ್‌ಜಿ ಮತ್ತು ಶ್ರುತೇಶ್ ಕುಮಾರ್ ಅವರನ್ನು ಬಂಧಿಸಿದ್ದ ಮೈಸೂರು ನಗರ ಪೊಲೀಸರು ಶನಿವಾರ ಬೆಳಿಗ್ಗೆ ವಿಜಯನಗರ ಠಾಣೆಗೆ ವಿಚಾರಣೆಗೆ ಕರೆತಂದಿದ್ದಾರೆ. ಬೆಳಗ್ಗೆ 5 ಗಂಟೆ ಸುಮಾರಿಗೆ ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಠಾಣೆಗೆ ಕರೆತರಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ತನಿಖಾಧಿಕಾರಿ ಎಸಿಪಿ ಶಿವಶಂಕರ್ ಅವರನ್ನು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಪೌರಾಯುಕ್ತ ಬಿ ರಮೇಶ್, ಎಡಿಜಿಪಿ ಅಲೋಕ್ ಕುಮಾರ್ ಉಪಸ್ಥಿತರಿದ್ದರು. 

ಆರೋಪಿಗಳಿಂದ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಂಜೆ 4 ಗಂಟೆಯ ನಂತರ ಮೂವರನ್ನು ಆರನೇ ಎಡಿಜೆ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com