'ಸಿದ್ದರಾಮಯ್ಯ ಸರ್ ಅವರದ್ದು ಬೇರೆಯದೇ ಲೆವೆಲ್ ಬಿಡಿ, ಅವ್ರು ಮಾಡೋದೆಲ್ಲಾ ಟ್ರೆಂಡ್ ಆಗತ್ತೆ': ನಿರೂಪಕಿ ಲಾವಣ್ಯ ಬಲ್ಲಾಳ್

ನಿನ್ನೆ ಮಧ್ಯಾಹ್ನದಿಂದ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಸಿದ್ದರಾಮಯ್ಯನವರ ಲುಕ್ ವಿಡಿಯೊ ಹರಿದಾಡುತ್ತಿದೆ. ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿ ಲಾವಣ್ಯ ಬಲ್ಲಾಳ್ ಕಡೆಗೆ ಸಿದ್ದರಾಮಯ್ಯನವರು ನೋಡಿದ ನೋಟಕ್ಕೆ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ನಿರೂಪಕಿಯೆಡೆಗೆ ದಿಟ್ಟಿಸಿ ನೋಡಿದ ಸಿದ್ದರಾಮಯ್ಯ
ನಿರೂಪಕಿಯೆಡೆಗೆ ದಿಟ್ಟಿಸಿ ನೋಡಿದ ಸಿದ್ದರಾಮಯ್ಯ

ಬೆಂಗಳೂರು: ನಿನ್ನೆ ಮಧ್ಯಾಹ್ನದಿಂದ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಸಿದ್ದರಾಮಯ್ಯನವರ ಲುಕ್ ವಿಡಿಯೊ ಹರಿದಾಡುತ್ತಿದೆ. ನಿನ್ನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ನಾ ನಾಯಕಿ ಸಮಾವೇಶದಲ್ಲಿ ನಿರೂಪಕಿ ಲಾವಣ್ಯ ಬಲ್ಲಾಳ್ ಕಡೆಗೆ ಸಿದ್ದರಾಮಯ್ಯನವರು ನೋಡಿದ ನೋಟಕ್ಕೆ ಜನರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ಈ ಬಗ್ಗೆ ಚಾನೆಲ್ ಗಳಿಗೆ ಪ್ರತಿಕ್ರಿಯಿಸಿರುವ ನಿರೂಪಕಿ ಕೆಪಿಸಿಸಿ ಸೋಷಿಯಲ್ ಮೀಡಿಯಾ ಕೋ ಆರ್ಡಿನೇಟರ್ ಆಗಿರುವ ಲಾವಣ್ಯ ಬಲ್ಲಾಳ್, ಸಿದ್ದರಾಮಯ್ಯನವರು ಪ್ರೋಗ್ರಾಂನಲ್ಲಿ ಸಹಜವಾಗಿ ಆಂಕರ್ ಯಾರೆಂದು ನೋಡಿದರು, ನಾನು ಮಾತನಾಡಿದ ಅರ್ಧ ಗಂಟೆಯಲ್ಲೇ ನನ್ನ ಮೊಬೈಲ್ ಗೆ ಟ್ರೋಲ್ ವಿಡಿಯೊ ಬರಲು ಶುರುವಾಯಿತು, ನನ್ನ ಮೊಬೈಲ್ ಹ್ಯಾಂಗ್ ಆಗುವಷ್ಟು ಟ್ರೋಲ್ ವಿಡಿಯೊಗಳು ಬಂದಿವೆ. ಫೋನ್ ಗಳ ಮೇಲೆ ಫೋನ್ ಮಾಡಿ ನನ್ನ ಸ್ನೇಹಿತರು, ಮನೆಯವರು, ಪರಿಚಯಸ್ಥರು ವಿಚಾರಿಸುತ್ತಿದ್ದಾರೆ, ಮುಂಬೈ, ಪಂಜಾಬ್ ನಿಂದಲೂ ಫೋನ್ ಗಳು ಬಂದಿವೆ ಎಂದರು.

ಅವರು ಸ್ಟೇಜ್ ಮೇಲೆ ಬಂದಾಗ ನಾನು ನಿರೂಪಣೆ ಮಾಡುತ್ತಿದ್ದೆ. ತುಂಬಾ ಜನ ಅವರನ್ನು ಸುತ್ತುವರೆದಿದ್ದರು, ಹೋಗುವಾಗ ನಿರೂಪಣೆ ಯಾರು ಮಾಡುತ್ತಿದ್ದಾರೆ ಎಂದು ಕುತೂಹಲದಲ್ಲಿ ನೋಡಿದರು. ನೋಡಿದ ಮೇಲೆ ಹಾ...ಇವ್ಳೇನಾ ಅಂತ ಕೈಸನ್ನೆ ಮಾಡಿಕೊಂಡು ಹೋದ್ರು, ಸಿದ್ದರಾಮಯ್ಯ ಸಾಹೇಬ್ರಿಗೆ ನಾನು ತುಂಬಾ ಚೆನ್ನಾಗಿ ಪರಿಚಯ. ಇಷ್ಟು ವರ್ಷಗಳಿಂದ ಕಾಂಗ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ನನ್ನನ್ನು ಚೆನ್ನಾಗಿ ಗೊತ್ತು ಅವರಿಗೆ, ಕ್ಯೂರಿಯಾಸಿಟಿಗೆ ಯಾರು ಅಂತ ನೋಡಿದ್ರು ಅಷ್ಟೆ ಎಂದರು.

ಸಿದ್ದರಾಮಯ್ಯನವರ ಲೆವೆಲ್ಲೇ ಬೇರೆ ಬಿಡಿ: ನನ್ನ ಮಾತು ಮುಗಿದು ಆಚೆ ಬರುವಷ್ಟರಲ್ಲಿಯೇ ನನ್ನ ಫೋನ್ ಗೆ ಯಾಕೆ ಇಷ್ಟೊಂದು ಕಾಲ್ ಬರ್ತಿದೆ, ಮೆಸೇಜ್ ತುಂಬ್ಕೊಂಡಿದೆ ಎಂದು ಅಚ್ಚರಿಯಾಯ್ತು, ಜನ ಇವತ್ತು ಇಂಟರ್ನೆಟ್, ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟೊಂದು ಕ್ವಿಕ್ ಆಗಿದ್ದಾರೆ ಎಂದು ನಿಜಕ್ಕೂ ಆಶ್ಚರ್ಯ ಆಯ್ತು, ಡೆಲ್ಲಿ, ಮುಂಬೈ, ಪಂಜಾಬ್ ನಿಂದ, ತಮಿಳು ನಾಡಿನಿಂದ ಮೆಜೇಸ್ ಬಂದಿದೆ, ನನ್ನ ಲೈಫಲ್ಲೇ ಇಷ್ಟೊಂದು ಲಕ್ಷ ಲಕ್ಷ ಮೆಸೇಜ್ ಬಂದಿರ್ಲಿಲ್ಲ, ಸಿದ್ದರಾಮಯ್ಯನವರು ಏನೇ ಮಾಡಿದ್ರೂ ಟ್ರೆಂಡ್ ಆಗತ್ತೆ, ಹಾಗಾಗಿ ಅಚ್ಚರಿಯಿಲ್ಲ.

ನನ್ನ ಮತ್ತು ಸಿದ್ದರಾಮಯ್ಯನವರ ಬಾಂಧವ್ಯ ತಂದೆ-ಮಗಳ ರೀತಿ, ಕೆಲವರು ಅದನ್ನು ತಮಾಷೆಯಾಗಿ ತೆಗೆದುಕೊಂಡರೆ, ಕಾಮಲೆ ಕಣ್ಣಿನಂತವರು ಅಪಾರ್ಥ ಮಾಡಿಕೊಂಡಿದ್ದಾರೆ, ಅಂತವರಿಗೆ ಏನೂ ಹೇಳಕ್ಕಾಗಲ್ಲ, ಒಂದೆರಡು ದಿನ ಟ್ರೋಲ್ ಮಾಡ್ತಾರೆ, ನಂತರ ಮರೆತು ಬಿಡ್ತಾರೆ, ವರ್ಷಾನುಗಟ್ಟಲೆ ನನ್ನತ್ರ ಮಾತಾಡದಿದ್ದವರು ನನ್ನ ವಿಡಿಯೊ ಟ್ರೆಂಡ್ ಆಗ್ತಾ ಇದೆ ಎಂದು ಫೋನ್ ಮಾಡಿದ್ದಾರೆ, ಇನ್ನೂ ಫೋನ್ ಬರೋದು ನಿಂತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com