
ತುಮಕೂರು: ಸರ್ಕಾರಿ ಬಸ್ ಚಾಲಕರೊಬ್ಬರು ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಿದ ಘಟನೆ ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.
ಹಂದಿಕುಂಟೆ ಅಗ್ರಹಾರ ಕೆರೆಗೆ ತಾಯಿ ಜೊತೆ ಬಟ್ಟೆ ತೊಳೆಯಲು ಹೋಗಿದ್ದ 19 ವರ್ಷದ ಸುಷ್ಮಾ ಹಾಗೂ 9 ವರ್ಷದ ಮಂಜುಳ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬೀಳುತ್ತಾರೆ.
ಇದನ್ನೂ ಓದಿ: ಕೌಟುಂಬಿಕ ಕಲಹ: ವಿಜಯಪುರದಲ್ಲಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಇದನ್ನು ಕಂಡ ತಾಯಿ ಕೂಡಲೆ ಮಕ್ಕಳನ್ನು ರಕ್ಷಿಸುವಂತೆ ರಸ್ತೆಗೆ ಓಡಿ ಬಂದ ತಾಯಿ ಕೂಗಿಕೊಂಡಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಸರ್ಕಾರಿ ಬಸ್ ಚಾಲಕ ಮಂಜುನಾಥ್ ಅವರು ಬಸ್ ನಿಲ್ಲಿಸಿದರು.
ಹೆಣ್ಣುಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಮಂಜುನಾತ್ ಕೆರೆಗೆ ಹಾರಿ ಇಬ್ಬರು ಸಹೋದರಿಯರ ಜೀವ ಉಳಿಸಿದ್ದಾರೆ.