ಪ್ರಧಾನಿ ಕಚೇರಿಗೆ ವ್ಯಕ್ತಿ ಪತ್ರ; ಕೆಎಸ್‌ಆರ್ ಸ್ಟೇಷನ್ ಪ್ಲಾಟ್‌ಫಾರ್ಮ್‌ನಲ್ಲಿ ರೈಲ್ವೇ ರ‍್ಯಾಂಪ್ ನಿರ್ಮಾಣ!

ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಏರುಪೇರಿನ ಪ್ಲಾಟ್ ಫಾರ್ಮ್ ನಿಂದ ಜನರಿಗೆ ಕೊನೆಗೂ ಮುಕ್ತಿ ದೊರೆಯಲಿದೆ.
ಪ್ಲಾಟ್ ಫಾರ್ಮ್ 7 ರಲ್ಲಿ ಸಮಸ್ಯೆ ಇರುವ ಜಾಗದಲ್ಲಿ ಸ್ಟೀಲ್ ಬಾರ್ ಅಳವಡಿಕೆ
ಪ್ಲಾಟ್ ಫಾರ್ಮ್ 7 ರಲ್ಲಿ ಸಮಸ್ಯೆ ಇರುವ ಜಾಗದಲ್ಲಿ ಸ್ಟೀಲ್ ಬಾರ್ ಅಳವಡಿಕೆ

ಬೆಂಗಳೂರು: ಕೆಎಸ್ ಆರ್ ರೈಲ್ವೆ ನಿಲ್ದಾಣದಲ್ಲಿ ಏರುಪೇರಿನ ಪ್ಲಾಟ್ ಫಾರ್ಮ್ ನಿಂದ ಜನರಿಗೆ ಕೊನೆಗೂ ಮುಕ್ತಿ ದೊರೆಯಲಿದೆ.

2 ವರ್ಷದ ಹಿಂದೆ ವ್ಯಕ್ತಿಯೋರ್ವರು ಏರುಪೇರಿನ ಪ್ಲಾಟ್ ಫಾರ್ಮ್ ಸಂಖ್ಯೆ 7 ರಲ್ಲಿ ರೈಲು ಹತ್ತುವಾಗ ಮುಗ್ಗರಿಸಿ ಬಿದ್ದ ಪರಿಣಾಮ ತೀವ್ರ ಗಾಯಗಳಾಗಿತ್ತು. ಸಂತ್ರಸ್ತ ವ್ಯಕ್ತಿಯ ಸಹೋದರ ನಿವೃತ್ತ ಇಂಜಿನಿಯರ್ ಪ್ರಧಾನಿ ಕಚೇರಿಗೆ ಪತ್ರ ಬರೆದು ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು.

ಪ್ಲಾಟ್ ಫಾರ್ಮ್ ಮಧ್ಯದಲ್ಲಿ ಎತ್ತರವಿದ್ದು, ವೇಗವಾಗಿ ಬರುವ ಜನರಿಗೆ ಇದು ಕಾಣದೇ ಮುಗ್ಗರಿಸಿ ಬೀಳುತ್ತಿದ್ದರು. ಇಂತಹ ಏರುಪೇರಿನ ಪ್ಲಾಟ್ ಫಾರ್ಮ್ ನ್ನು ತೆಗೆದು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಸಮತಟ್ಟಾದ ಪ್ಲಾಟ್ ಫಾರ್ಮ್ ನಿರ್ಮಾಣಕ್ಕೆ ಗಮನ ಹರಿಸಬೇಕೆಂದು ನಿವೃತ್ತ ಇಂಜಿನಿಯರ್ ಪ್ರಧಾನಿ ಕಚೇರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈಗ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು,
 
ಕಳೆದ ವಾರ (ಜು.04) ರಂದು ಬೆಂಗಳೂರು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಲಿಖಿತ ಭರವಸೆ ನೀಡಿದ್ದಾರೆ. "ನನ್ನ ಸಹೋದರ ಸುರೇಶ್ ಕುಮಾರ್ ರೈಲು ಹತ್ತಲು ವೇಗವಾಗಿ ತೆರಳುತ್ತಿದ್ದಾಗ ಏರುಪೇರಿನ ಪ್ಲಾಟ್ ಫಾರ್ಮ್ ಸಂಖ್ಯೆ 7 ರಲ್ಲಿ ಮುಗ್ಗರಿಸಿ ಬಿದ್ದಿದ್ದರು. ರೈಲಿನತ್ತ ಹೆಚ್ಚು ಗಮನ ಇರುವಾಗ ಜನರು ಈ ಏರುಪೇರಿನ ಬಗ್ಗೆ ಗಮನ ನೀಡುವುದಿಲ್ಲ. ಇದು ಅತ್ಯಂತ ಅಪಾಯಕಾರಿಯಾಗಿದೆ. ಇದೇ ಸ್ಥಳದಲ್ಲಿ ಹಲವು ಮಂದಿ ಮುಗ್ಗರಿಸಿ ಬಿದ್ದಿದ್ದರು ಆದ್ದರಿಂದ ಇನ್ನು ಯಾರಿಗೂ ಇಂತಹ ಸ್ಥಿತಿ ಬಾರದಿರಲಿ ಎಂದು ಪ್ರಧಾನಿ ಕಚೇರಿ ಹಾಗೂ ರೈಲ್ವೆ ಗಮನಕ್ಕೆ ತಂದಿದ್ದೆ ಎಂದು ನಿವೃತ್ತ ಇಂಜಿನಿಯರ್ ಜೆ ಅನಿಲ್ ಕುಮಾರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com