ಏರೋನಿಕ್ಸ್ ಎಂಡಿ, ಸಿಇಒ ಕೊಲೆ ಪ್ರಕರಣ: ಜಿ-ನೆಟ್ ಕಂಪೆನಿ ಮಾಲೀಕ ಅರುಣ್ ಕುಮಾರ್ ಬಂಧನ

ಎರಡು ದಿನಗಳ ಹಿಂದೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ನಗರವಾಸಿಗಳನ್ನು, ಪೊಲೀಸರನ್ನು ಬೆಚ್ಚಿಬೀಳಿಸಿದೆ. 
ಮೃತ ಫಣೀಂದ್ರ ಮತ್ತು ಬಂಧನಕ್ಕೊಳಗಾಗಿರುವ ಅರುಣ್ ಕುಮಾರ್
ಮೃತ ಫಣೀಂದ್ರ ಮತ್ತು ಬಂಧನಕ್ಕೊಳಗಾಗಿರುವ ಅರುಣ್ ಕುಮಾರ್

ಬೆಂಗಳೂರು: ಎರಡು ದಿನಗಳ ಹಿಂದೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ನಗರವಾಸಿಗಳನ್ನು, ಪೊಲೀಸರನ್ನು ಬೆಚ್ಚಿಬೀಳಿಸಿದೆ. 

ಏರೋನಿಕ್ಸ್ ಇಂಟರ್ನೆಟ್​ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್​ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಗುತ್ತಿದೆ. ಪೊಲೀಸರ ವಿಚಾರಣೆ ವೇಳೆ ಆರೋಪಿ ಫಿಲೆಕ್ಸ್ ಬಾಯ್ಬಿಟ್ಟಿದ್ದು, ಜೋಡಿ ಕೊಲೆ ಹಿಂದೆ ಜಿ-ನೆಟ್​​ ಕಂಪನಿ ಮಾಲೀಕ ಅರುಣ್​​​ ಕುಮಾರ್ ಕೈವಾಡ ಇದೆ ಎಂಬ ಶಂಕೆಯ ಮೇಲೆ ವಿಚಾರಣೆಗಾಗಿ ಅರುಣ್ ಕುಮಾರ್ ಬಂಧನವಾಗಿದೆ. 

ಈ ಮುಂಚೆ ಜಿ-ನೆಟ್ ಕಂಪನಿಯಲ್ಲಿ ಕೊಲೆಯಾದ ಫಣೀಂದ್ರ ಮತ್ತು ವಿನುಕುಮಾರ್​ ಕೆಲಸ ಮಾಡುತ್ತಿದ್ದರು. 7ನೇ ತರಗತಿ ಓದಿದ್ದ ಆರೋಪಿ ಶಬರೀಶ್​ ಅಲಿಯಾಸ್​ ಜೋಕರ್ ಫೆಲಿಕ್ಸ್  ಕೂಡಾ ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಅರುಣ್, ಫಣೀಂದ್ರ ನಡುವೆ ವೈಮನಸ್ಸು: ಬಳಿಕ ಫಣೀಂದ್ರ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದ. ಜಿ-ನೆಟ್​​ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್​​ ಕಂಪನಿ ನಷ್ಟ ಸಿಲುಕಿದ್ದರಿಂದ ಅರುಣ್​ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು.

ಫಣೀಂದ್ರನನ್ನು ಮುಗಿಸುವ ಕೆಟ್ಟ ಆಲೋಚನೆ ಅರುಣ್ ತಲೆಯಲ್ಲಿ ಹೊಳೆಯಿತು. ಫಿಲೆಕ್ಸ್​​ ಜೊತೆ ಫಣೀಂದ್ರನನ್ನು ಮುಗಿಸುವ ಬಗ್ಗೆ ಚರ್ಚಿಸಿ ಸುಫಾರಿ ನೀಡಿದ್ದ. ಇದಕ್ಕೆ ಆರು ತಿಂಗಳ ಹಿಂದೆಯೇ ಪ್ಲಾನ್ ನಡೆದಿತ್ತು. ಪೊಲೀಸರು ನಿನ್ನೆ ವಿಚಾರಣೆ ನಡೆಸುವಾಗ ಜೋಕರ್ ಫೆಲಿಕ್ಸ್ ಬಾಯ್ಬಿಟ್ಟಿದ್ದಾನೆ. 

ಜೋಡಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗ ಮೂಲದ ಶಬರೀಶ್​ ಅಲಿಯಾಸ್​ ಫಿಲೆಕ್ಸ್, ಶಿವು ಮತ್ತು ಬೆಂಗಳೂರಿನ ರೂಪೇನ ಅಗ್ರಹಾರದ ವಿನಯ್​ ರೆಡ್ಡಿ ಈಗಾಗಲೇ ಬಂಧನವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com