ಚಂದ್ರಯಾನ-3 ಬಗ್ಗೆ ಕನ್ನಡ ಉಪನ್ಯಾಸಕ ಅಪಹಾಸ್ಯ; ಸ್ಪಷ್ಟನೆ ಕೋರಿ ಮಧು ಬಂಗಾರಪ್ಪಗೆ ಬಿಜೆಪಿ ಶಾಸಕ ಪತ್ರ

ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ಇಸ್ರೋದ ಚಂದ್ರಯಾನ-3 ಮಿಷನ್ ಅನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಕನ್ನಡ ಉಪನ್ಯಾಸಕರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸುರೇಶ್ ಕುಮಾರ್
ಸುರೇಶ್ ಕುಮಾರ್
Updated on

ಬೆಂಗಳೂರು: ಬಿಜೆಪಿ ನಾಯಕ ಎಸ್ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ಇಸ್ರೋದ ಚಂದ್ರಯಾನ-3 ಮಿಷನ್ ಅನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಕನ್ನಡ ಉಪನ್ಯಾಸಕರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಜುಲೈ 17 ರಂದು ಬರೆದ ಪತ್ರದಲ್ಲಿ, ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹುಲಿಕುಂಟೆ ಮೂರ್ತಿ ಅವರು ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ರ ವಿರುದ್ಧ ಪೋಸ್ಟ್ ಮಾಡುವ ಮೂಲಕ 'ಕೆಟ್ಟ' ವರ್ತನೆ ತೋರಿದ್ದಾರೆ ಎಂದು ಬಿಜೆಪಿ ಶಾಸಕರು ದೂರಿದ್ದಾರೆ.

'ಚಂದ್ರಯಾನ-3 ವಿಫಲವಾಗಲಿದೆ...' ಎಂದು ಆರೋಪಿಸಿ ಕನ್ನಡದಲ್ಲಿ ಟ್ವಿಟ್ ಮಾಡಿರುವ ಮೂರ್ತಿ, 'ತಿರುಪತಿ ನಾಮ' ಎಂಬ ಪದವನ್ನು ಬಳಸಿ, ಚಂದ್ರಯಾನ ಈ ಬಾರಿಯೂ ವಿಫಲವಾಗಲಿದೆ ಎಂದಿದ್ದಾರೆ. 

ಚಂದ್ರಯಾನ-3 ಉಡಾವಣೆಗೂ ಮುನ್ನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳ ತಂಡವೊಂದು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನು ಗಮನಿಸಿದ ಬಿಜೆಪಿ ಶಾಸಕರು ತಮ್ಮ ಪತ್ರದಲ್ಲಿ, ಅಂತಹ ವ್ಯಕ್ತಿ ವಿದ್ಯಾರ್ಥಿಗಳನ್ನು ಹೇಗೆ ಪ್ರೇರೇಪಿಸಬಹುದು. ಇಡೀ ದೇಶವೇ ಚಂದ್ರಯಾನ-3ರ ಯಶಸ್ಸಿಗೆ ಹಾರೈಸಿ ಪ್ರಾರ್ಥಿಸುತ್ತಿರುವಾಗ, ಹುಲಿಕುಂಟೆ ಮೂರ್ತಿ ಅವರು ಈ ಬಾರಿಯೂ ಚಂದ್ರಯಾನ ವಿಫಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಸಡ್ಡೆಯ ವರ್ತನೆ ತೋರಿದ್ದಾರೆ' ಎಂದಿದ್ದಾರೆ.

'ಅವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಈ ರೀತಿಯಾಗಿ ತೋರಿಸಿದ್ದಾರೆ. ಅಂತಹ ವ್ಯಕ್ತಿ ನಮ್ಮ ವಿದ್ಯಾರ್ಥಿಗಳನ್ನು ಹೇಗೆ ಪ್ರೇರೇಪಿಸಬಹುದು? ಈ ಬಗ್ಗೆ ಅವರನ್ನು ಪ್ರಶ್ನಿಸಲು ಮತ್ತು ಈ ರೀತಿಯ ಬೇಜವಾಬ್ದಾರಿ ವರ್ತನೆಯನ್ನು ಪುನರಾವರ್ತಿಸದಂತೆ ಎಚ್ಚರಿಸಲು ನಾನು ವಿನಂತಿಸುತ್ತೇನೆ' ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಜುಲೈ 14 ರಂದು, ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಿಗದಿತ ಸಮಯದಲ್ಲಿ ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆಯಾಯಿತು.

ಬಾಹ್ಯಾಕಾಶ ನೌಕೆಗೆ ಭೂಮಿಯಿಂದ ಚಂದ್ರನವರೆಗೆ ಪ್ರಯಾಣವು ಸುಮಾರು ಒಂದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ ಮತ್ತು ಆಗಸ್ಟ್ 23 ರಂದು ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ನಿರೀಕ್ಷಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com