ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ವರದಿ: ಮಾಜಿ ಸಚಿವ ಟಿಬಿ ಜಯಚಂದ್ರಗೆ ಬೆದರಿಕೆ ಕರೆ
2014 ಮತ್ತು 2016ರ ನಡುವೆ ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್‌ನಲ್ಲಿ (ನೈಸ್) ನಡೆದಿರುವ ಅಕ್ರಮಗಳ ಕುರಿತು ವರದಿ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಮತ್ತು ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ.
Published: 29th July 2023 08:30 AM | Last Updated: 29th July 2023 03:55 PM | A+A A-

ಟಿಬಿ ಜಯಚಂದ್ರ
ಬೆಂಗಳೂರು: 2014 ಮತ್ತು 2016ರ ನಡುವೆ ನಂದಿ ಮೂಲಸೌಕರ್ಯ ಕಾರಿಡಾರ್ ಎಂಟರ್‌ಪ್ರೈಸಸ್‌ನಲ್ಲಿ (ನೈಸ್) ನಡೆದಿರುವ ಅಕ್ರಮಗಳ ಕುರಿತು ವರದಿ ನೀಡಿದ ಬೆನ್ನಲ್ಲೇ ಮಾಜಿ ಸಚಿವ ಮತ್ತು ನವದೆಹಲಿಯ ರಾಜ್ಯದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ.
ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಅಧಿವೇಶನದಲ್ಲಿ ತಮ್ಮ ವರದಿಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರು. ನಂತರ ರಾಮನಗರದ ಬಿಡದಿಯ ರೈತರು ತಮ್ಮ ಹಿತಾಸಕ್ತಿ ಕಾಪಾಡುವಂತೆ ಮನವಿ ಮಾಡಿದ್ದರು.
ನೈಸ್ ಸಂಸ್ಥೆಯ ಅಕ್ರಮದ ಬಗ್ಗೆ ನಾನು ರಿಪೋರ್ಟ್ ನೀಡಿದ್ದೆ. ಸಾವಿರಾರು ಎಕರೆ ಸರ್ಕಾರಿ, ಖಾಸಗಿ ರೈತರ ಜಮೀನು ಕಬಳಿಸಿದ್ದಾರೆ. ಕಳೆದ ವಾರ, ರೈತರ ಆಹ್ವಾನದ ಮೇರೆಗೆ ನಾನು ರಾಮನಗರಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದೆ. ಆದರೆ, ಇತ್ತೀಚೆಗೆ ನನಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಜಯಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಚುವರಿ ನೈಸ್ ಭೂಮಿಯನ್ನು ವಾಪಸ್ ಪಡೆದುಕೊಳ್ಳಿ: ಸರ್ಕಾರಕ್ಕೆ ಹೆಚ್ ಡಿ ದೇವೇಗೌಡ ಆಗ್ರಹ
ಕರೆ ಮಾಡಿದವರು ಮೊದಲಿಗೆ ರೈತರಂತೆ ಮಾತನಾಡಲು ಪ್ರಾರಂಭಿಸುತ್ತಾರೆ. ಆದರೆ, ನಂತರ ಈ ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಬೆದರಿಕೆ ಹಾಕುತ್ತಾರೆ ಎಂದು ಅವರು ಟಿಎನ್ಐಇಗೆ ತಿಳಿಸಿದ್ದಾರೆ. ಈ ಸಂಬಂಧ ಜಯಚಂದ್ರ ಅವರ ಆಪ್ತ ಸಹಾಯಕ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಮತ್ತು ಪೆರಿಫೆರಲ್ ರಿಂಗ್ ರೋಡ್ ನಿರ್ಮಿಸಲು ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು NICE ಅವಕಾಶವನ್ನು ಹೊಂದಿತ್ತು. ಆದರೆ, ಅದು ಒಪ್ಪಂದದ ಚೌಕಟ್ಟನ್ನು ಬಿಟ್ಟು ಟೌನ್‌ಶಿಪ್‌ಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಿತು. ಈಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ಬಿಎಂಐಸಿ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅವರು ಹೇಳಿದರು.