ಚಾಮುಂಡಿ ಬೆಟ್ಟದ ತಪ್ಪಲಿನ ಗೋದಾಮಿನಲ್ಲಿ ಬೆಂಕಿ-ಅಪಾರ ಪ್ರಮಾಣದ ಪೀಠೋಪಕರಣಗಳು ಧ್ವಂಸ
ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಂಗಮ್ ಶಾಮಿಯಾನ ಹಾಗೂ ಡೆಕೋರೆಟೆಡ್ ಗೋದಾಮಿನಲ್ಲಿ ಇಂದು ಗುರುವಾರ ಬೆಳಗಿನ ಜಾವ ಬೆಂಕಿ ಅನಹಾತು ಸಂಭವಿಸಿದೆ.
Published: 01st June 2023 11:21 AM | Last Updated: 01st June 2023 11:21 AM | A+A A-

ಗೋದಾಮಿನಲ್ಲಿ ಬೆಂಕಿ
ಮೈಸೂರು: ಮೈಸೂರು ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇರುವ ಸಂಗಮ್ ಶಾಮಿಯಾನ ಹಾಗೂ ಡೆಕೋರೆಟೆಡ್ ಗೋದಾಮಿನಲ್ಲಿ ಇಂದು ಗುರುವಾರ ಬೆಳಗಿನ ಜಾವ ಬೆಂಕಿ ಅನಹಾತು ಸಂಭವಿಸಿದೆ.
ಜ್ವಾಲೆಗೆ ಅಪಾರ ಮೌಲ್ಯದ ಶಾಮಿಯಾನ ಹಾಗೂ ಡೆಕೋರೇಷನ್ ವಸ್ತುಗಳು ನಾಶವಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಈ ಗೋಡಾನ್ ಮೈಸೂರು ನಗರದ ಷರಿಫ್ ಎಂಬವರ ಅಳಿಯನಿಗೆ ಸೇರಿದ್ದಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಶಾಮಿಯಾನ ಸಾಮಾಗ್ರಿಗಳನ್ನು ಹೊಂದಿದ್ದರು.
ಸ್ಥಳಕ್ಕೆ ಮೈಸೂರು ನಗರದ ಸರಸ್ವತಿಪುರಂ, ಹೆಬ್ಬಾಳ ಹಾಗೂ ಬನ್ನಿಮಂಟಪದ ಅಗ್ನಿ ಶಾಮಕ ವಾಹನಗಳು ಸಿಬ್ಬಂದಿಯೊಂದಿಗೆ ಆಗಮಿಸಿ, ಸುಮಾರು ಮೂರು ಗಂಟೆಗೂ ಅಧಿಕ ಸಮಯ ಬೆಂಕಿ ನಂದಿಸಲು ತೆಗೆದುಕೊಂಡರು. ಸುತ್ತಮುತ್ತಲಿನ ಪ್ರದೇಶಗಳಿಗೆ ಬೆಂಕಿ ಹರಡದಂತೆ ಅಗ್ನಿ ಶಾಮಕ ದಳದವರು ತಪ್ಪಿಸಿದ್ದಾರೆ. ಕೃಷ್ಣ ರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Massive #fire breaks out at Sangam Furnitures godown near #ChamundiHills on Thursday #Mysuru @santwana99@Cloudnirad@ramupatil_TNIE@XpressBengaluru@NewIndianXpress@KannadaPrabha pic.twitter.com/joGWjGwwHQ
— Lakshmikantha B K (@KANTH_TNIE) June 1, 2023