ಖಾಸಗಿ ಬಸ್ಸುಗಳ ನಿಲುಗಡೆ: ಧಾರವಾಡ ನಗರ ನಿವಾಸಿಗಳಿಗೆ ಸಂಚಾರ ದಟ್ಟಣೆ ಸಮಸ್ಯೆ

ಧಾರವಾಡ ನಗರ ನಿವಾಸಿಗಳಿಗೆ ಮತ್ತೆ ಸಂಚಾರ ದಟ್ಟಣ ಸಮಸ್ಯೆ ಎದುರಾಗಿದೆ. ಖಾಸಗಿ ಬಸ್‌ಗಳ ಪಾರ್ಕಿಂಗ್ ಸ್ಥಳ ಕೋರ್ಟ್ ಸರ್ಕಲ್ ನಿಂದ ಇತರ ಸ್ಥಳಗಳಿಗೆ ಸ್ಥಳಾಂತರಗೊಂಡ ನಂತರ ಕೆಲ ತಿಂಗಳು ಬಿಡುವು ಸಿಕ್ಕಿತ್ತು. ಆದರೆ, ಈಗ ಮತ್ತೆ ಹಳೆಯ ಜಾಗಕ್ಕೆ ಬಂದಿದ್ದು ನಿವಾಸಿಗಳಿಗೆ ಸಂಚಾರ ದಟ್ಟಣೆ ಕಿರಿಕಿರಿ ಉಂಟಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಧಾರವಾಡ: ಧಾರವಾಡ ನಗರ ನಿವಾಸಿಗಳಿಗೆ ಮತ್ತೆ ಸಂಚಾರ ದಟ್ಟಣ ಸಮಸ್ಯೆ ಎದುರಾಗಿದೆ. ಖಾಸಗಿ ಬಸ್‌ಗಳ ಪಾರ್ಕಿಂಗ್ ಸ್ಥಳ ಕೋರ್ಟ್ ಸರ್ಕಲ್ ನಿಂದ ಇತರ ಸ್ಥಳಗಳಿಗೆ ಸ್ಥಳಾಂತರಗೊಂಡ ನಂತರ ಕೆಲ ತಿಂಗಳು ಬಿಡುವು ಸಿಕ್ಕಿತ್ತು. ಆದರೆ, ಈಗ ಮತ್ತೆ ಹಳೆಯ ಜಾಗಕ್ಕೆ ಬಂದಿದ್ದು ನಿವಾಸಿಗಳಿಗೆ ಸಂಚಾರ ದಟ್ಟಣೆ ಕಿರಿಕಿರಿ ಉಂಟಾಗಿದೆ. 

ಸಂಜೆಯ ಸಮಯದಲ್ಲಿ, ದೀರ್ಘ-ಪ್ರವಾಸದ ಬಸ್ಸುಗಳು ತಮ್ಮ ವಾಹನಗಳನ್ನು ಕಿರಿದಾದ ಮಿಶ್ರ ಟ್ರಾಫಿಕ್ ಲೇನ್‌ನಲ್ಲಿ ನಿಲ್ಲಿಸುತ್ತವೆ, ಇದರಿಂದ ಸಾಮಾನ್ಯ ಸಂಚಾರ ಚಲನೆಗೆ ಅಡ್ಡಿಯಾಗುತ್ತವೆ. ರಾತ್ರಿಯಾಗುತ್ತಿದ್ದಂತೆ ಬೆಂಗಳೂರು, ಮೈಸೂರು, ಮಂಗಳೂರು, ಮುಂಬೈ ಮತ್ತು ಇತರ ಬೇರೆ ನಗರಗಳಿಗೆ ತೆರಳುವ ಬಸ್ಸುಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಬಸ್ಸುಗಳ ಸಂಖ್ಯೆ ಹೆಚ್ಚುತ್ತಿದೆ.

ಸಂಚಾರ ಪೊಲೀಸರು ಆರಂಭಿಸಿದ್ದ ಸಂಚಾರ ದಟ್ಟಣೆ ನಿಯಂತ್ರಣ ಕಾರ್ಯ ಸ್ಥಗಿತಗೊಂಡಿದೆ. ಇದೀಗ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುವಲ್ಲಿ ಪೊಲೀಸರು ನಿರತರಾಗಿದ್ದಾರೆ ಎಂದು ಕೆಲ ಕಾರ್ಯಕರ್ತರು ಆರೋಪಿಸಿದ್ದಾರೆ. 

ಶ್ರೀಮಂತರ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ಪಕ್ಷಪಾತ ತೋರಿ ಪೊಲೀಸರು ಸಾಮಾನ್ಯ ಜನರ ಮೇಲೆ ಮಾತ್ರ ಕಠಿಣವಾಗಿ ವರ್ತಿಸುತ್ತಿರುವುದು ಬೇಸರದ ಸಂಗತಿ. ಬಸ್‌ಗಳಷ್ಟೇ ಅಲ್ಲ, ಪ್ರಯಾಣಿಕರನ್ನು ಇಳಿಸಲು ಬರುವ ಜನರು ರಸ್ತೆಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದು ಟ್ರಾಫಿಕ್ ಅವ್ಯವಸ್ಥೆಯನ್ನು ಹೆಚ್ಚಿಸುತ್ತದೆ.ಇದು ದೊಡ್ಡ ಸಮಸ್ಯೆಯಾಗಿ ಬದಲಾಗುವ ಮೊದಲು ಬಸ್‌ಗಳಿಗೆ ಸ್ಥಳವನ್ನು ನಿಗದಿಪಡಿಸುವ ಅವಶ್ಯಕತೆಯಿದೆ” ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. 

ರಸ್ತೆ ಬಳಕೆದಾರರಿಗೆ ಮತ್ತು ವಾಹನಗಳಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ಅಸಮರ್ಪಕ ಪಾರ್ಕಿಂಗ್ ವ್ಯವಸ್ಥೆಯಿಂದಾಗಿ ರಸ್ತೆ ಬಳಕೆದಾರರು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಾರಿಗೆ ಏಜೆನ್ಸಿಗಳ ಮೇಲೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಕೆಲವು ಸಾರಿಗೆ ಸಂಸ್ಥೆಗಳಿಗೆ ನೋಟಿಸ್‌ಗಳನ್ನು ನೀಡಿದ್ದು, ನಂತರ ಅವರು ಬಸ್ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ, ಮತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗುವುದು. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com