ಲೈಂಗಿಕವಾಗಿ ಸಹಕರಿಸುವಂತೆ ವಿದ್ಯಾರ್ಥಿನಿಗೆ ಬೇಡಿಕೆ; ಗುಲಬರ್ಗಾ ವಿಶ್ವವಿದ್ಯಾಲಯದ ಉಪನ್ಯಾಸಕನ ಆಡಿಯೋ ವೈರಲ್
ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕವಾಗಿ ಸಹಕರಿಸುವಂತೆ ಕೇಳಿಕೊಂಡಿರುವ ಗುಲಬರ್ಗಾ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಇದೀಗ ವೈರಲ್ ಆಗಿದ್ದು, ಪ್ರತಿಷ್ಠಿತ ಕ್ಯಾಂಪಸ್‌ನಲ್ಲಿ ಆತಂಕ ಮೂಡಿಸಿದೆ.
Published: 07th June 2023 11:44 AM | Last Updated: 07th June 2023 11:46 AM | A+A A-

ಪ್ರಾತಿನಿಧಿಕ ಚಿತ್ರ
ಕಲಬುರಗಿ: ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕವಾಗಿ ಸಹಕರಿಸುವಂತೆ ಕೇಳಿಕೊಂಡಿರುವ ಗುಲಬರ್ಗಾ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರದ್ದು ಎನ್ನಲಾದ ಆಡಿಯೋ ಕ್ಲಿಪ್ ಒಂದು ಇದೀಗ ವೈರಲ್ ಆಗಿದ್ದು, ಪ್ರತಿಷ್ಠಿತ ಕ್ಯಾಂಪಸ್‌ನಲ್ಲಿ ಆತಂಕ ಮೂಡಿಸಿದೆ.
ಆದರೆ, ಈ ಸಂಬಂಧ ಪೊಲೀಸ್ ದೂರು ದಾಖಲಾಗಿಲ್ಲ. ಈ ಬೆಳವಣಿಗೆಯನ್ನು ಪೊಲೀಸರು ಇನ್ನೂ ಸ್ವಯಂಪ್ರೇರಿತವಾಗಿ ಪರಿಗಣಿಸಬೇಕಾಗಿದೆ.
23 ನಿಮಿಷಗಳ ಆಡಿಯೊ ಕ್ಲಿಪ್ ವಿವಾದವನ್ನು ಹುಟ್ಟುಹಾಕಿದೆ ಮತ್ತು ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮೂಲಗಳ ಪ್ರಕಾರ, ಆಡಿಯೋದಲ್ಲಿರುವ ಧ್ವನಿ ಎಂಬಿಎ ವಿಭಾಗದ ಅತಿಥಿ ಉಪನ್ಯಾಸಕರದ್ದು ಮತ್ತು ವಿದ್ಯಾರ್ಥಿನಿಯೂ ಕೂಡ ಅದೇ ವಿಭಾಗಕ್ಕೆ ಸೇರಿದ್ದಾಳೆ ಎನ್ನಲಾಗಿದೆ.
ಆಡಿಯೋದಲ್ಲಿ, ಆರೋಪಿಯು ವಿದ್ಯಾರ್ಥಿನಿಯನ್ನು ತನ್ನ ಗರ್ಲ್‌ಫ್ರೆಂಡ್ ಆಗುವಂತೆ ಮತ್ತು ಅವಳು ತನ್ನೆಲ್ಲಾ ಆಸೆಗಳನ್ನು ಪೂರೈಸಬೇಕು ಎಂದು ಕೇಳಿಕೊಂಡಿದ್ದಾನೆ ಮತ್ತು ಒತ್ತಾಯಿಸಿದ್ದಾನೆ. ವಿದ್ಯಾರ್ಥಿನಿ ಇದನ್ನು ನಿರಾಕರಿಸುತ್ತಿದ್ದರೂ, ಆರೋಪಿಯು ಆಕೆಯನ್ನು ಪೀಡಿಸುತ್ತಿರುವುದು ಕೇಳಿಬಂದಿದೆ.
ಆರು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಕ್ಯಾಂಪಸ್‌ನಲ್ಲಿ ಇದೀಗ ಭಾರಿ ಸಂಚಲನ ಉಂಟುಮಾಡಿದೆ. ಈ ಸಂಬಂಧ ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.