ಚಾಮರಾಜನಗರ ಆಕ್ಸಿಜನ್ ದುರಂತ: ಸರ್ಕಾರಿ ನೌಕರಿಗಾಗಿ ಸಂತ್ರಸ್ತರ ಸಂಬಂಧಿಕರ ಆಗ್ರಹ

ಕೋವಿಡ್ ಉತ್ತುಂಗದಲ್ಲಿ ಚಾಮರಾಜನಗರ ಆಸ್ಪತ್ರೆಯಲ್ಲಿ 36 ಜನರ ಸಾವಿಗೆ ಕಾರಣವಾದ ಆಕ್ಸಿಜನ್ ದುರಂತದ ಎರಡು ವರ್ಷಗಳ ನಂತರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮರಳಿದೆ.
ಚಾಮರಾಜನಗರ ಆಕ್ಸಿಜನ್ ದುರಂತ (ಸಂಗ್ರಹ ಚಿತ್ರ)
ಚಾಮರಾಜನಗರ ಆಕ್ಸಿಜನ್ ದುರಂತ (ಸಂಗ್ರಹ ಚಿತ್ರ)

ಮೈಸೂರು: ಕೋವಿಡ್ ಉತ್ತುಂಗದಲ್ಲಿ ಚಾಮರಾಜನಗರ ಆಸ್ಪತ್ರೆಯಲ್ಲಿ 36 ಜನರ ಸಾವಿಗೆ ಕಾರಣವಾದ ಆಕ್ಸಿಜನ್ ದುರಂತದ ಎರಡು ವರ್ಷಗಳ ನಂತರ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮರಳಿದೆ. ಕಾಂಗ್ರೆಸ್ ನಾಯಕರು ಅಂದು ನೀಡಿದ ಭರವಸೆಯಂತೆ ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಸಂತ್ರಸ್ತ ಕುಟುಂಬಗಳಲ್ಲಿ ಹೆಚ್ಚಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ಈಡೇರಿಸಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಅಂದು ಆಸ್ಪತ್ರೆಗೆ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ನೀಡಿ ದುರಂತಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

36 ಮಂದಿ ಮೃತಪಟ್ಟರೂ ಸರಕಾರ 24 ಕುಟುಂಬಗಳಿಗೆ ಮಾತ್ರ ಪರಿಹಾರ ನೀಡಿದೆ. ಇನ್ನುಳಿದ 12 ಮಂದಿ ತಮ್ಮ ಕುಟುಂಬದ ಸದಸ್ಯರು ಕೋವಿಡ್‌ನಿಂದ ಸಾವನ್ನಪ್ಪಿಲ್ಲ ಎಂಬ ಅಧಿಕಾರಿಗಳ ಹೇಳಿಕೆಗಳನ್ನು ವಿರೋಧಿಸಿದ್ದರು, ನಂತರ ಪರಿಹಾರ ಕೋರಿ ಒಂದು ಸರ್ಕಾರಿ ಕಚೇರಿಯಿಂದ ಇನ್ನೊಂದಕ್ಕೆ ಹೋಗುತ್ತಿದ್ದಾರೆ.

ಒಂದು ವೇಳೆ ಕೋವಿಡ್-ಪಾಸಿಟಿವ್ ಇರದಿದ್ದರೇ ಆತನನ್ನು ಏಕೆ ಆಸ್ಪತ್ರೆಗೆ ಸೇರಿಸಿದರು ಮತ್ತು ವೆಂಟಿಲೇಟರ್‌ನಲ್ಲಿ ಇರಿಸಿದರು" ಎಂದು ಬಿಸ್ಲವಾಡಿಯ ಜ್ಯೋತಿ ಪ್ರಶ್ನಿಸಿದ್ದಾರೆ. ತನಗೆ ಯಾವುದೇ ಆದಾಯವಿಲ್ಲ ಮತ್ತು ತನ್ನ ಕುಟುಂಬವು ತನ್ನ ವಯಸ್ಸಾದ ಪೋಷಕರೊಂದಿಗೆ ವಾಸಿಸುತ್ತಿದೆ ಎಂದು ಅವರು ಹೇಳಿದರು. “ನನ್ನ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರದಿಂದ ನನಗೆ ಕೆಲಸ ಸಿಗಲಿಲ್ಲ. ನಮ್ಮ ಮಗನನ್ನು ಪ್ರಿ-ಯೂನಿವರ್ಸಿಟಿ ಕಾಲೇಜಿಗೆ ಸೇರಿಸಲು ನನ್ನ ಬಳಿ ಹಣವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಪತಿಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳ ತಾಯಿ ಸಿದ್ದರಾಜಮ್ಮ ಅವರು ತಾತ್ಕಾಲಿಕ ಉದ್ಯೋಗ ನೀಡುವಂತೆ ಮನವಿ ಮಾಡಿದ್ದಾರೆ. "ನನ್ನ ಪತಿ ಮಧ್ಯರಾತ್ರಿ ಆಮ್ಲಜನಕವಿಲ್ಲದೆ ಉಸಿರುಗಟ್ಟಿ ಸತ್ತಾಗ ಹಿಂದಿನ ಸರ್ಕಾರದಿಂದ ನನಗೆ ನ್ಯಾಯ ಸಿಗಲಿಲ್ಲ ಎಂದು ಅವರು ಕೇಳಿದರು.

ಸಂತ್ರಸ್ತರ ಕುಟುಂಬಗಳೊಂದಿಗೆ ಸಂವಾದ ನಡೆಸಿದ ವೇಳೆ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ  ಉದ್ಯೋಗದ ಭರವಸೆ ನೀಡಿದ್ದರು ಎಂದು ಅವರು ನೆನಪಿಸಿಕೊಂಡರು. ಶಿವಕುಮಾರ್ ಕೂಡ ಇದೇ ಭರವಸೆ ನೀಡಿದ್ದರು.

ಆಗ ಶಾಸಕ ಎನ್.ಮಹೇಶ್ ನನಗೆ ಕೆಲಸ ಕೊಡಿಸುವುದಾಗಿ ಹೇಳಿದರೂ ಯಾವುದೇ  ಪ್ರಯೋಜನ ಆಗಲಿಲ್ಲ. ನನಗೆ ಯಾವುದೇ ಆದಾಯವಿಲ್ಲದಿರುವಾಗ ನನ್ನ ಇಬ್ಬರು ಹೆಣ್ಣುಮಕ್ಕಳನ್ನು ಹೇಗೆ ಸಾಕಲಿ ಎಂದು ಪ್ರಶ್ನಿಸಿದ್ದಾರೆ. ಐದು ಚುನಾವಣಾ ಪೂರ್ವ ಭರವಸೆಗಳನ್ನು ಜಾರಿಗೆ ತರುತ್ತಿರುವ ಕಾಂಗ್ರೆಸ್ ಸರ್ಕಾರವು ತಮಗೆ ಸಹಾಯ ಹಸ್ತ ಚಾಚುತ್ತದೆ ಎಂದು ಈ ಕುಟುಂಬಗಳು ಈಗ ಆಶಿಸುತ್ತಿವೆ. ಎಲ್ಲಾ 36 ಕುಟುಂಬಗಳಿಗೆ 5 ಲಕ್ಷ ಪರಿಹಾರ ಮತ್ತು ಪ್ರತಿ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಅವರು ಬಯಸುತ್ತಾರೆ.

ದುರಂತಕ್ಕೆ ಕಾರಣರಾದ ಸರಕಾರಿ ಅಧಿಕಾರಿಗಳನ್ನು ಶಿಕ್ಷಿಸದೇ ಹಿಂದಿನ ಸರಕಾರವನ್ನು ದೂಷಿಸಲಾಯಿತು. ಅಂದಿನ ಜಿಲ್ಲಾಧಿಕಾರಿ, ಡಿಎಚ್‌ಒ ಹಾಗೂ ವೈದ್ಯರನ್ನೂ ಪಾರು ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ, ಪ್ರತಿ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಸರ್ಕಾರಿ ಉದ್ಯೋಗ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಕೋರಿದರು. ದುರಂತದ ಕುರಿತು ಮತ್ತೊಮ್ಮೆ ತನಿಖೆಗೆ ಆದೇಶಿಸಿರುವ ಸಿದ್ದರಾಮಯ್ಯನವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com