ಕೊಪ್ಪಳದಲ್ಲಿ ಕಲುಷಿತ ನೀರು ಸೇವನೆ: ವಾಂತಿ ಭೇದಿಯಿಂದ 10 ವರ್ಷದ ಬಾಲಕಿ ಸಾವು

ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಗೆ ತುತ್ತಾಗಿದ್ದ 10 ವರ್ಷದ ಬಾಲಕಿ ನಿರ್ಮಲಾ ಈರಪ್ಪ ಇಂದು ಮೃತಪಟ್ಟಿದ್ದಾಳೆ. 
ನಿರ್ಮಲಾ ಈರಪ್ಪ
ನಿರ್ಮಲಾ ಈರಪ್ಪ

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ವಾಂತಿ ಭೇದಿಗೆ ತುತ್ತಾಗಿದ್ದ 10 ವರ್ಷದ ಬಾಲಕಿ ನಿರ್ಮಲಾ ಈರಪ್ಪ ಇಂದು ಮೃತಪಟ್ಟಿದ್ದಾಳೆ. 

ಕಳೆದ ರಾತ್ರಿಯೇ ಬಾಲಕಿಗೆ ತೀವ್ರ ವಾಂತಿ-ಬೇಧಿ ಉಂಟಾಗಿತ್ತು. ಆದರೆ ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯಲ್ಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ತೀವ್ರ ಅಸ್ವಸ್ಥಳಾಗಿದ್ದ ನಿರ್ಮಲಾಳನ್ನು ಆಸ್ಪತ್ರೆಗೆ ದಾಖಲಿಸು ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕೊಪ್ಪಳದ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 65 ವರ್ಷದ ವೃದ್ಧೆ ಹೊನ್ನಮ್ಮ ಶಿವಪ್ಪ ಎಂಬುವರು ಮೃತಪಟ್ಟಿದ್ದು ಇದೀಗ ಬಾಲಕಿಯೂ ಕಲುಷಿತ ನೀರು ಸೇವನೆಯಿಂದಲೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. 

ಸ್ಥಳಕ್ಕೆ ಡಿಎಚ್ಓ ಡಾ. ಅಲಕಾನಂದ ಮಳಗಿ, ಟಿಹೆಚ್ಓ ಡಾ. ಆನಂದ ಗೋಟೂರು, ಇಓ ಶಿವಪ್ಪ ಸುಭೇದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com