‘ಶಕ್ತಿ’ ಯೋಜನೆ: ರಾಜ್ಯದ ಗಡಿಯಿಂದ 20 ಕಿ.ಮೀ. ಒಳಗಿನ ವ್ಯಾಪ್ತಿವರೆಗೂ ಉಚಿತ ಪ್ರಯಾಣ- ಸಿದ್ದರಾಮಯ್ಯ
ಶಕ್ತಿ’ ಯೋಜನೆ ಅಡಿ ರಾಜ್ಯದ ಗಡಿಯಿಂದ 20 ಕಿ.ಮೀ. ಒಳಗಿನವರೆಗೂ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
Published: 10th June 2023 06:20 PM | Last Updated: 10th June 2023 06:20 PM | A+A A-

ಸಿಎಂ ಸಿದ್ದರಾಮಯ್ಯ
ಬೆಂಗಳೂರು: ‘ಶಕ್ತಿ’ ಯೋಜನೆ ಅಡಿ ರಾಜ್ಯದ ಗಡಿಯಿಂದ 20 ಕಿ.ಮೀ. ಒಳಗಿನ ವ್ಯಾಪ್ತಿವರೆಗೂ ಮಹಿಳೆಯರು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಭಾನುವಾರ ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡುವುದಾಗಿ ಸಿಎಂ ತಿಳಿಸಿದ್ದಾರೆ.
ಇದನ್ನು ಓದಿ: ‘ಶಕ್ತಿ’ ಯೋಜನೆ: ರಾಜ್ಯದ ಗಡಿಯಿಂದ 20 ಕಿ.ಮೀ. ಒಳಗಿನ ವ್ಯಾಪ್ತಿವರೆಗೂ ಉಚಿತ ಪ್ರಯಾಣ- ಸಿದ್ದರಾಮಯ್ಯ
"ನಾವು 5 ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ವಿಧಾನಸೌಧದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ನೀಡುತ್ತೇವೆ. ಎಸಿ ಮತ್ತು ವೋಲ್ವೋ ಬಸ್ ಹೊರತುಪಡಿಸಿ ಉಳಿದ ಎಲ್ಲಾ(ಸರ್ಕಾರಿ ಸ್ವಾಮ್ಯದ) ಬಸ್‌ಗಳಲ್ಲಿ ಉಚಿತವಾಗಿ ರಾಜ್ಯದೊಳಗೆ ಪ್ರಯಾಣಿಸಲು ಅರ್ಹರಾಗಿರುತ್ತಾರೆ" ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿ: ಮೈಸೂರಿನಲ್ಲಿ ಅನ್ನಭಾಗ್ಯ, ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ
ಮಹಿಳೆಯರು ಅಂತರರಾಜ್ಯ ಬಸ್‌ನಲ್ಲಿ ಪ್ರಯಾಣಿಸಲು ಬಯಸಿದರೆ ಅವರು ಟಿಕೆಟ್ ಪಡೆಯಬೇಕು. ಮಹಿಳೆ ತಿರುಪತಿಗೆ ಹೋಗಲು ಬಯಸಿದರೆ, ಅವರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದರು.
ಉದಾಹರಣೆಗೆ, ಬಳ್ಳಾರಿಯಿಂದ ಆಂಧ್ರಪ್ರದೇಶದ ಒಳಗೆ 20 ಕಿ.ಮೀ.ವರೆಗೆ ಅವರು(ಮಹಿಳೆಯರು) ಉಚಿತವಾಗಿ ಹೋಗಬಹುದು ಎಂದು ಸಿದ್ದರಾಮಯ್ಯ ಹೇಳಿದರು.