ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ: ವ್ಯಕ್ತಿಗೆ ಯುವತಿಯಿಂದ ಚಪ್ಪಲಿ ಏಟು, ವಿಡಿಯೊ ವೈರಲ್
ತನಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿದ್ಯಾರ್ಥಿನಿಯೊಬ್ಬಳು ಧೈರ್ಯವಾಗಿ ತನ್ನ ಪಾದರಕ್ಷೆಯಿಂದ ಹೊಡೆದ ಘಟನೆ ಉಡುಪಿ ಜಿಲ್ಲೆಯ ವಾಕ್ವಾಡಿ ರಸ್ತೆಯಲ್ಲಿ ನಡೆದಿದೆ.
Published: 10th June 2023 11:49 AM | Last Updated: 10th June 2023 02:24 PM | A+A A-

ಯುವಕನಿಗೆ ಚಪ್ಪಲಿಯಲ್ಲಿ ಹೊಡೆದ ಯುವತಿ
ಉಡುಪಿ: ತನಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿದ್ಯಾರ್ಥಿನಿಯೊಬ್ಬಳು ಧೈರ್ಯವಾಗಿ ತನ್ನ ಪಾದರಕ್ಷೆಯಿಂದ ಹೊಡೆದ ಘಟನೆ ಉಡುಪಿ ಜಿಲ್ಲೆಯ ವಾಕ್ವಾಡಿ ರಸ್ತೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿಯು ತನ್ನ ಹಾಸ್ಟೆಲ್‌ನಿಂದ ಬೀಜಾಡಿ ರಸ್ತೆಯಲ್ಲಿ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾರ್ಕೂರಿನ ನಜೀರ್ ಎಂಬಾತ ಹಿಂದಿನಿಂದ ಆಕೆಯ ಬಳಿಗೆ ಬಂದು ಅವಾಚ್ಯವಾಗಿ ಕಿರುಕುಳ ನೀಡಲಾರಂಭಿಸಿದ. ಗಾಬರಿ ಮತ್ತು ಭಯಗೊಂಡ ವಿದ್ಯಾರ್ಥಿನಿ ಧ್ವನಿ ಎತ್ತಿ ಸ್ಥಳೀಯ ನಿವಾಸಿಗಳಿಗೆ ಪರಿಸ್ಥಿತಿಯನ್ನು ತಿಳಿಸಿದಳು.
ತನಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನಿಗೆ ವಿದ್ಯಾರ್ಥಿನಿಯೊಬ್ಬಳು ಧೈರ್ಯವಾಗಿ ತನ್ನ ಪಾದರಕ್ಷೆಯಿಂದ ಹೊಡೆದ ಘಟನೆ ಉಡುಪಿ ಜಿಲ್ಲೆಯ ವಾಕ್ವಾಡಿ ರಸ್ತೆಯಲ್ಲಿ ನಡೆದಿದೆ. ವಿದ್ಯಾರ್ಥಿನಿಯು ತನ್ನ ಹಾಸ್ಟೆಲ್‌ನಿಂದ ಬೀಜಾಡಿ ರಸ್ತೆಯಲ್ಲಿ ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬಾರ್ಕೂರಿನ ನಜೀರ್ ಎಂಬಾತ ಹಿಂದಿನಿಂದ ಆಕೆಯ ಬಳಿಗೆ ಬಂದು… pic.twitter.com/ylkYutoWzF
— kannadaprabha (@KannadaPrabha) June 10, 2023
ಸ್ಥಳೀಯರು ಅವನನ್ನು ಸ್ಥಳದಲ್ಲಿ ಹಿಡಿದು ಹುಡುಗಿ ತನ್ನ ಶೂನಿಂದ ಅವನನ್ನು ಹೊಡೆಯಲು ಅವಕಾಶ ಮಾಡಿಕೊಟ್ಟರು. ನಂತರ ಪೊಲೀಸರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡು ಆರೋಪಿಯನ್ನು ಒಪ್ಪಿಸಿದ್ದಾರೆ. ವ್ಯಕ್ತಿಯ ಅಸಭ್ಯ ವರ್ತನೆಯನ್ನು ಕಂಡ ಸ್ಥಳೀಯ ನಿವಾಸಿಗಳ ಸಹಾಯದಿಂದ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗದಗ: ಯುವಕನ ಕತ್ತು ಸೀಳಿದ ಗಾಳಿಪಟದ ದಾರ; 5 ದಿನ ನರಳಿ ನರಳಿ ಪ್ರಾಣಬಿಟ್ಟ ಅಮಾಯಕ!
ಯುವತಿ ಕಾಮುಕನಿಗೆ ಭಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.