ತಾಪಮಾನ ಹೆಚ್ಚಳ ಸಂಬಂಧಿತ ರೋಗಗಳ ನಿಭಾಯಿಸಲು ಸಜ್ಜಾಗುವಂತೆ ಆರೋಗ್ಯ ಇಲಾಖೆಗೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಸಲಹೆ

ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಿಂದ ಹವಾಮಾನದಲ್ಲಿ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಬೆಳಗಿನ ಹೊತ್ತು ನಸು ಚಳಿಯಿದ್ದರೆ ನಂತರ ವಿಪರೀತ ಬಿಸಿಲು, ಬಿಸಿಲ ಧಗೆಗೆ ಜನ ಈಗಲೇ ತತ್ತರಿಸಿ ಹೋಗಿದ್ದಾರೆ. ಇನ್ನೂ ಬಿಸಿಲು ಏಪ್ರಿಲ್ ವರೆಗೆ ಇರುತ್ತದೆ, ಹೇಗೆ ತಡೆಯುವುದಪ್ಪ ಎಂದು ಜನರು ಭೀತರಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ತಿಂಗಳು ಫೆಬ್ರವರಿ ಮಧ್ಯಭಾಗದಿಂದ ಹವಾಮಾನದಲ್ಲಿ ತಾಪಮಾನದಲ್ಲಿ ಬದಲಾವಣೆ ಕಂಡುಬಂದಿದೆ. ಬೆಳಗಿನ ಹೊತ್ತು ನಸು ಚಳಿಯಿದ್ದರೆ ನಂತರ ವಿಪರೀತ ಬಿಸಿಲು, ಬಿಸಿಲ ಧಗೆಗೆ ಜನ ಈಗಲೇ ತತ್ತರಿಸಿ ಹೋಗಿದ್ದಾರೆ. ಇನ್ನೂ ಬಿಸಿಲು ಏಪ್ರಿಲ್ ವರೆಗೆ ಇರುತ್ತದೆ, ಹೇಗೆ ತಡೆಯುವುದಪ್ಪ ಎಂದು ಜನರು ಭೀತರಾಗಿದ್ದಾರೆ.

ಈ ಮಧ್ಯೆ ಮಾರ್ಚ್ -ಏಪ್ರಿಲ್ ನಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಬರುವ ತಿಂಗಳುಗಳಲ್ಲಿ ತಾಪಮಾನ ತೀವ್ರವಾಗಿ ಏರಿದರೆ ಬಿಸಿಲ ತಾಪಕ್ಕೆ ಸಂಬಂಧಿತ ಕಾಯಿಲೆಗಳಿಗೆ ಸನ್ನದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಲಿನಿಕಲ್ ಮತ್ತು ಎನರ್ಜಿ ಆಡಿಟಿಂಗ್ ಮಾಡಲು ರಾಜ್ಯ ತಾಂತ್ರಿಕ ಸಲಹಾ ಸಮಿತಿ (TAC) ಕರ್ನಾಟಕ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಮಾರ್ಚ್ 1 ರಂದು ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯ (NPCCHH) ರಾಷ್ಟ್ರೀಯ ಕಾರ್ಯಕ್ರಮದ ಅಡಿಯಲ್ಲಿ ಎಲ್ಲಾ ರಾಜ್ಯದ ನೋಡಲ್ ಅಧಿಕಾರಿಗಳಿಗೆ ರೋಗಗ್ರಸ್ತವಾಗುವಿಕೆ ಮತ್ತು ಮರಣವನ್ನು ಕಡಿಮೆ ಮಾಡಲು ಶಾಖದ ಕ್ರಿಯಾ ಯೋಜನೆಯನ್ನು ರೂಪಿಸಲು ಸಲಹೆ ನೀಡಿದ ಹಿನ್ನೆಲೆಯಲ್ಲಿ ಇದು ಬಂದಿದೆ. 

122 ವರ್ಷಗಳ ನಂತರ ಅತ್ಯಂತ ಬಿಸಿಲು ಈ ವರ್ಷ ಫೆಬ್ರವರಿಯಲ್ಲಿ ದಾಖಲಾಗಿದೆ. ಮುಂಬರುವ ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನವು ತೀವ್ರವಾಗಿ ಏರುವ ನಿರೀಕ್ಷೆಯಿದೆ. ಕೆಲವು ಭಾಗಗಳಲ್ಲಿ ಶಾಖದ ಅಲೆಗಳನ್ನು ನಿರೀಕ್ಷಿಸಲಾಗಿದೆ.

ಬಿಸಿಲಿಗೆ ಎಳನೀರು ಉತ್ತಮ: ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಸಲಹೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸಲಹೆಗಳನ್ನು ನೀಡುವಂತೆ ಟಿಎಸಿಗೆ ಸೂಚಿಸಲಾಗಿದೆ. ಸಮಿತಿಯು ಐವಿಎಫ್ ದ್ರವಗಳು ಮತ್ತು ಓರಲ್ ರೀಹೈಡ್ರೇಶನ್ ಸೊಲ್ಯೂಷನ್ಸ್ (ORS) ಜೊತೆಗೆ, ಒಬ್ಬ ವ್ಯಕ್ತಿಯು ನಿರ್ಜಲೀಕರಣದಿಂದ ಬಳಲುತ್ತಿರುವ ಸಂದರ್ಭದಲ್ಲಿ ಎಳನೀರು ಉತ್ತಮ ಪರ್ಯಾಯವಾಗಿದೆ ಮತ್ತು ಸಾಧ್ಯವಿರುವ ಸ್ಥಳಗಳಲ್ಲಿ ಅದನ್ನು ಲಭ್ಯವಾಗುವಂತೆ ಮಾಡಬೇಕು.

ಕರ್ನಾಟಕ ಆರೋಗ್ಯ ಇಲಾಖೆಯ ಉಪನಿರ್ದೇಶಕ ಡಾ.ಶರೀಫ್ ಅವರು ಟಿಎಸಿ ಸಮಿತಿಯ ವರದಿಯನ್ನು ಸ್ವೀಕರಿಸಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸಂಬಂಧಿ ಸೂಚನೆ ಹೊರಡಿಸುವ ಸಾಧ್ಯತೆಯಿದೆ. ರಾಜ್ಯದ ಆರೋಗ್ಯ ಕೇಂದ್ರಗಳಲ್ಲಿ ಐವಿಎಫ್ ಮತ್ತು ಅಗತ್ಯವಿರುವ ಇತರ ದ್ರವಗಳ ಸೂಕ್ತ ದಾಸ್ತಾನು ಇದೆ ಮತ್ತು ಯಾವುದೇ ಕೊರತೆಯ ಸಂದರ್ಭದಲ್ಲಿ ಅದಕ್ಕೆ ಅನುಗುಣವಾಗಿ ಖರೀದಿಸಬಹುದು ಎಂದು ಅವರು ಹೇಳಿದರು.

NCDC ಶಾಖದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಅಥವಾ ಎಲೆಕ್ಟ್ರೋಲೈಟ್ ಅಸಮತೋಲನವನ್ನು ತಡೆಯಲು ಸಾಕಷ್ಟು ಪ್ರಮಾಣದ ORS ಪ್ಯಾಕ್‌ಗಳು, ಅಗತ್ಯ ಔಷಧಗಳು ಮತ್ತು ಐಸ್ ಪ್ಯಾಕ್‌ಗಳ ಸಂಗ್ರಹಣೆ ಮತ್ತು ಪೂರೈಕೆಗೆ ಸಲಹೆ ನೀಡಿದೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಕುಡಿಯುವ ನೀರನ್ನು ಸಹ ಸಿಗುವಂತೆ ಮಾಡಬೇಕಾಗಿದೆ. 

ಉಷ್ಣ ತಾಪಮಾನ ಸಂಬಂಧಿತ ಕಾಯಿಲೆಗಳನ್ನು ನಿವಾರಿಸಲು ಮತ್ತು ಎಲ್ಲಾ ಸೌಲಭ್ಯಗಳಲ್ಲಿ ಶಾಖದ ಹೊಡೆತದ ಪ್ರಕರಣಗಳು ಮತ್ತು ಸಾವುಗಳ ಪಟ್ಟಿಯನ್ನು ನಿರ್ವಹಿಸುವಂತೆ ಇದು ಶಿಫಾರಸು ಮಾಡಿದೆ. ರಾಜ್ಯ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಸಮರೋಪಾದಿಯಲ್ಲಿ ಈ ಹೊತ್ತಿನಲ್ಲಿ ಕೆಲಸ ಮಾಡಬೇಕಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com