ಶಿಕ್ಷಕಿ ರೂಪಾ ಮತ್ತು ಆಕೆಯ ಪತಿ ಅರ್ಜುನ್
ರಾಜ್ಯ
ವರದಕ್ಷಿಣೆ ಕಿರುಕುಳ: ಡೆತ್ ನೋಟ್ ಬರೆದಿಟ್ಟು ತರಗತಿಯಲ್ಲೇ ಶಿಕ್ಷಕಿ ಆತ್ಮಹತ್ಯೆ
ತಮ್ಮ ಪತಿ ಮತ್ತು ಅವರ ಕುಟುಂಬದಿಂದ ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಜಯನಗರದಲ್ಲಿ ಶಾಲಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿಜಯಪುರ: ತಮ್ಮ ಪತಿ ಮತ್ತು ಅವರ ಕುಟುಂಬದಿಂದ ನೀಡುತ್ತಿದ್ದ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿಜಯನಗರದಲ್ಲಿ ಶಾಲಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿಕ್ಷಕರಾಗಿರುವ ರೂಪ ಮತ್ತು ಅರ್ಜುನ್ ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಹೆಚ್ಚಿನ ಹಣ ನೀಡುವಂತೆ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ರೂಪಾ ಅವರು ಹಡಗಲಿಯ ನ್ಯಾಷನಲ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ನನ್ನ ಗಂಡ ನನ್ನ ಜೊತೆ ಜೀವನ ನಡೆಸಲು ನಿರಾಕರಿಸಿದ ಕಾರಣ ಮಾನಸಿಕವಾಗಿ ಬಹಳ ನೊಂದು ಸಾಯಲು ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಗಂಡನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲ. ನನ್ನ ಜೀವಕ್ಕಿಂತ ಹೆಚ್ಚಾಗಿ ನನ್ನ ಗಂಡನನ್ನು ಪ್ರೀತಿಸುತ್ತೇನೆ. ಆತ್ಮಹತ್ಯೆ ಮಹಾಪಾಪ ಎಂಬುದು ಗೊತ್ತು. ಆದರೂ, ಹೋಗುತ್ತಿದ್ದೇನೆ. ಸಾಧ್ಯವಾದಲೆ ಎಲ್ಲರೂ ನನ್ನನ್ನು ಕ್ಷಮಿಸಿ ಎಂದು ಬರೆದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ