ಸಾಗರ ಪರಿಕ್ರಮ 4: ಉತ್ತರ ಕನ್ನಡ ಜಿಲ್ಲೆ ಮಾಜಾಳಿ ಕಡಲತೀರಕ್ಕೆ ಕೇಂದ್ರ ಸಚಿವರಾದ ರೂಪಾಲಾ, ಮುರುಗನ್ ಭೇಟಿ; ಸಂವಾದ
ಮೀನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆ ಹಾಗೂ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಪ್ರಾಥಮಿಕ ಹಂತದಿಂದಲೇ ಕ್ರಮವಹಿಸಿದೆ ಎಂದು ಕೇಂದ್ರ ಮೀನುಗಾರಿಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಷೋತ್ತಮ ರುಪಾಲಾ ಹೇಳಿದ್ದಾರೆ.
Published: 18th March 2023 05:25 PM | Last Updated: 18th March 2023 08:15 PM | A+A A-

ಸಾಗರ ಪರಿಕ್ರಮ-4 ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪುರುಷೋತ್ತಮ ರೂಪಾಲಾ, ಮುರುಗನ್
ಕಾರವಾರ: ಮೀನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆ ಹಾಗೂ ಮೀನುಗಾರರ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು ಪ್ರಾಥಮಿಕ ಹಂತದಿಂದಲೇ ಕ್ರಮವಹಿಸಿದೆ ಎಂದು ಕೇಂದ್ರ ಮೀನುಗಾರಿಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಷೋತ್ತಮ ರುಪಾಲಾ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ಸಾಗರ ಪರಿಕ್ರಮ 2023 ನಾಲ್ಕನೇ ಹಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸಿ ಮೀನುಗಾರರ ಬದುಕು ಆರ್ಥಿಕವಾಗಿ ಉತ್ತಮಗೊಳಿಸುವುದು ಕೇಂದ್ರ ಸರ್ಕಾರದ ಮುಖ್ಯ ಧ್ಯೇಯವಾಗಿದೆ. ಇದಕ್ಕಾಗಿಯೇ ಸರ್ಕಾರವು ನೀಲಿ ಕ್ರಾಂತಿಯನ್ನು ಜಾರಿಗೊಳಿಸಿ 6 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿದೆ ಎಂದರು.
ಮೀನುಗಾರರಿಗೆ ಇನ್ನಷ್ಟು ಸೌಲಭ್ಯ ನೀಡುವ ನಿಟ್ಟಿನಲ್ಲಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೊಳಿಸಿದೆ. ಹಾಗೆಯೇ ಕೇವಲ ಕೃಷಿಕರಿಗೆ ಮಾತ್ರ ನೀಡಲಾಗುತ್ತಿದ್ದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಇಂದು ಮೀನುಗಾರರಿಗೂ ವಿಸ್ತರಿಸಲಾಗಿದೆ. ಈ ಯೋಜನೆಯಿಂದ ಮೀನುಗಾರರು ಒಂದು ಲಕ್ಷ ದಿಂದ 1.5 ಲಕ್ಷದವರೆಗೆ ಯಾವುದೇ ಭದ್ರತೆ ಇಲ್ಲದೆ ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದಾಗಿದೆ ಎಂದರು. ವಿಶೇಷವಾಗಿ ಕರ್ನಾಟಕವು ಮೀನುಗಾರಿಕೆಗೆ ತನಗೆ ಆದ ಕೊಡುಗೆ ನೀಡಿದೆ ಎಂದು ತಿಳಿಸಿದರು.
यशस्वी प्रधानमंत्री श्री @narendramodi जी के दूरगामी मार्गदर्शन में राष्ट्रीयस्तर पर आयोजित "सागर परिक्रमा 2023 फेज़-4" के तहत आज गोवा-कर्नाटक सीमा पर कनारा नामक तटीय क्षेत्र में स्थित मजली गांव में मछुआरों तथा उनके परिजनों के साथ विविध विषय पर वार्तालाप कर, उनके सुझाव को सुना। pic.twitter.com/jmxZOY9J5i
— Parshottam Rupala (@PRupala) March 18, 2023
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಹಾಗೂ ಮಾಹಿತಿ ಹಾಗೂ ಪ್ರಸಾರ ರಾಜ್ಯ ಸಚಿವ ಡಾ. ಎಲ್. ಮುರುಗನ್ ಮಾತನಾಡಿ, ಸಾಗರ ಪರಿಕ್ರಮ ಕೇಂದ್ರ ಸಚಿವರು ನೇರವಾಗಿ ಮೀನುಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಅವರಿಗೋಸ್ಕರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮನವರಿಕೆ ಮಾಡಿಕೊಡುವ ಕಾರ್ಯಕ್ರಮವಾಗಿದೆ. ಸರ್ಕಾರವು ದೇಶದ ನಾನಾ ಭಾಗಗಳಲ್ಲಿ ಆಧುನಿಕ ಮೀನುಗಾರಿಕೆ ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್ ಹಾಗೂ ಬಂದರುಗಳನ್ನು ನಿರ್ಮಾಣ ಮಾಡಲು ಹೊರಟಿದೆ ಎಂದರು.
ಇದೇ ಸಂದರ್ಭದಲ್ಲಿ ಮತ್ಸ್ಯ ಸಂಪದ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡಗಳನ್ನು ಸಚಿವರು ವಿತರಿಸಿದರು. ರಾಜ್ಯ ಮೀನುಗಾರಿಕೆ ಸಚಿವ ಅಂಗಾರ, ಶಾಸಕಿ ರೂಪಾಲಿ ನಾಯ್ಕ ಮತ್ತಿತರರು ಪಾಲ್ಗೊಂಡರು.